ಮೈಸೂರು-ಹುಬ್ಬಳ್ಳಿ ರೈಲಿಗೊಂದು ಹೆಸರು ಹೇಳ್ರೀ....

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 12: ಟ್ವಿಟ್ಟರ್ ನಲ್ಲೊಂದು ಆಸಕ್ತಿಕರ ಸಲಹೆ ಕೇಳಿದ್ದಾರೆ 'ತರ್ಲೆ ತಿಮ್ಮ'. ಮೈಸೂರು-ಹುಬ್ಬಳ್ಳಿ (ರೌಂಡ್ ಟ್ರಿಪ್) ರೈಲಿಗೆ ಹೆಸರೊಂದನ್ನು ಸೂಚಿಸಿ ಎಂದು ಕೇಳಿದ್ದಾರೆ. ಅದರೆ ಒಂದು ಷರತ್ತಿದೆ. ವ್ಯಕ್ತಿಯ ಹೆಸರು ಆಗಿರಬಾರದು. ಒಂದಷ್ಟು ಹೆಸರುಗಳನ್ನು ಸೂಚಿಸಲಾಗಿದೆ. ಅವು ಏನೇನು ಅಂತ ಗೊತ್ತಾ?

ಸ್ವತಃ ತರ್ಲೆ ತಿಮ್ಮ ಸೂಚಿಸಿರುವ ಹೆಸರೇನೆಂದರೆ, ನಂದಿ ಎಕ್ಸ್ ಪ್ರೆಸ್, ಕನ್ನಡ ಎಕ್ಸ್ ಪ್ರೆಸ್, ಶ್ರೀಗಂಧ ಎಕ್ಸ್ ಪ್ರೆಸ್, ರಾಜ್ಯೋತ್ಸವ ಎಕ್ಸ್ ಪ್ರೆಸ್, ಸ್ವಾಭಿಮಾನ ಎಕ್ಸ್ ಪ್ರೆಸ್. ಶಾಮ ಸುಂದರ ಎಸ್ ಕೆ ಅವರು ಸೂಚಿಸಿದ್ದು 'ಗಂಡುಗಲಿ ಎಕ್ಸ್ ಪ್ರೆಸ್'. ಎಸ್ ಜೆ ಟ್ವೀಟ್ ಮಾಡಿರುವುದು ಐರಾವತ ಎಕ್ಸ್ ಪ್ರೆಸ್.

Please suggest a name to Mysuru and Hubballi train

ನಿಖಿಲ್ ಕೃಷ್ಣ ನಮೋ ಎಕ್ಸ್ ಪ್ರೆಸ್ ಅಂತಿಟ್ಟರೆ ತುಂಬ ಇಷ್ಟವಾಗುತ್ತದೆ ಅಂದಿದ್ದರೆ, ಬಯಲುಸೀಮೆ ಎಕ್ಸ್ ಪ್ರೆಸ್ ಎಂಬುದು ಸೂಕ್ತವಾಗುತ್ತದೆ ಎಂದಿದ್ದಾರೆ. ಸಾಧು ಮಹಾರಾಜ್ ಎಂಬುವವರು ಗಂಗೋತ್ರಿ ಎಕ್ಸ್ ಪ್ರೆಸ್, ಏನೋ ಒಂದು ಟ್ವೀಟ್ ಐಡಿಯಿಂದ ಚಂದನ ಎಕ್ಸ್ ಪ್ರೆಸ್ ಅಂತಲೂ, ಈವರ ಐಡಿಯಿಂದ ಹೊಯ್ಸಳ ಎಕ್ಸ್ ಪ್ರೆಸ್ ಎಂಬ ಸಲಹೆ ಬಂದಿದೆ.

ಎಚ್ ಎನ್ ಶರತ್ ಅವರಂತೂ ಚಾಮುಂಡೇಶ್ವರಿ ಎಕ್ಸ್ ಪ್ರೆಸ್, ಶ್ರೀ ಮಂಜುನಾಥೇಶ್ವರ ಎಕ್ಸ್ ಪ್ರೆಸ್, ಬಯಲುಕುದುರೆ ಎಕ್ಸ್ ಪ್ರೆಸ್, ನಮ್ಮ ಎಕ್ಸ್ ಪ್ರೆಸ್, ಶ್ರೀ ಕನ್ನಡ ಎಕ್ಸ್ ಪ್ರೆಸ್ ಎಂಬ ಹೆಸರುಗಳನ್ನು ಸೂಚಿಸಿದ್ದಾರೆ. ಎಂಸಿಎಸ್_ಮೈಸೂರು ಐಡಿಯಿಂದ ರಾಯಲ್-ರಾಯಣ್ಣ ಎಕ್ಸ್ ಪ್ರೆಸ್ ಎಂಬ ಸೊಗಸಾದ ಹೆಸರು ಸಲಹೆ ನೀಡಿದ್ದಾರೆ. ಜಯಪ್ರಕಾಶ್ ಕಿಣಿ 'ಜಂಬೂಸವಾರಿ' ಎಂದಿದ್ದಾರೆ. ಅದೆಲ್ಲ ಇರಲಿ, ನೀವೂ ಒಂದೊಳ್ಳೆ ಹೆಸರು ಹೇಳ್ರೀ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Please suggest a name to Mysuru and Hubballi train, this is the request by Tarle Timma on Twitter. Why don't you try?
Please Wait while comments are loading...