ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರ್ವಜನಿಕರೇ ಎಚ್ಚರ, ಕಳ್ಳರು ಹೀಗೂ ಬರಬಹುದು

By Nayana
|
Google Oneindia Kannada News

ಬೆಂಗಳೂರು, ಜು.23: ಕಳ್ಳರಿಗೇನು ಒಂದೇ ವೇಷನಾ ಯಾವ ವೇಷದಲ್ಲಾದರೂ ಬರಬಹುದು, ಕೆಲವೊಮ್ಮೆ ಕಳ್ಳತನವಾಗಿದ್ದು ನಿಮಗೆ ತಿಳಿಯುತ್ತದೆ ಅವರನ್ನು ಹಿಡಿಯುವ ಶಕ್ತಿ ನಮ್ಮಲ್ಲಿರುವುದಿಲ್ಲ, ಇನ್ನು ಕೆಲವೊಮ್ಮೆ ಕದ್ದಿರುವುದು ಗೊತ್ತಾಗುವುದೇ ಇಲ್ಲ.

ಬೆಂಗಳೂರಿನಲ್ಲಿ ಸರ, ಮೊಬೈಲ್‌, ವಾಹನ ಕಳ್ಳರ ಸಂಖ್ಯೆ ವಿಪರೀತವಾಗಿದೆ, ಪೊಲೀಸರೂ ಕೂಡ ನಿಮ್ಮ ಲಗೇಜ್‌, ವಸ್ತುಗಳ ಬಗ್ಗೆ ಗಮನವಿರಲಿ ಎಂದು ಗಂಟಲು ಒಣಗುವಂತೆ ಮೈಕ್‌ ಹಿಡಿದು ಅರಚುತ್ತಿದ್ದರೂ, ಜನರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಇದೆಲ್ಲವೂ ಗಂಭೀರವಾದ ವಿಚಾರಗಳಾಗಿವೆ. ವಸ್ತುಗಳು ಕಳೆದ ಮೇಲೆ ಕಳ್ಳರನ್ನು ಹಿಡಿಯದ ಪೊಲೀಸರಿಗೆ ಅನ್ನುವುದಕ್ಕಿಂತ ನಿಮ್ಮ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳುವುದು ಮುಖ್ಯವಲ್ಲವೇ. ಬಸ್‌ಗಳಲ್ಲಿ ಮಹಿಳೆಯರಿಂದ ಕಳ್ಳತನಗಳು ಹೆಚ್ಚು, ಅವರು ಸೀರೆಯ ಸೆರಗನ್ನು ಬ್ಯಾಗ್ ಮೇಲೆ ಹಾಕಿ ಸುಲಭವಾಗಿ ಪರ್ಸ್‌ಗಳನ್ನು ಕದ್ದುಬಿಡುತ್ತಾರೆ.

ಐಷಾರಾಮಿ ಕಾರುಗಳ ಲೋಗೋ ಕಳ್ಳತನ ಪ್ರಕರಣ: ಐವರ ಬಂಧನಐಷಾರಾಮಿ ಕಾರುಗಳ ಲೋಗೋ ಕಳ್ಳತನ ಪ್ರಕರಣ: ಐವರ ಬಂಧನ

ನಿಮ್ಮ ವಾಹನದ ಟೈರ್‌ ಪಂಕ್ಚರ್‌ ಆಗಿದೆಯೆಂದೂ, ಅಸಲಿ ಪೊಲೀಸರ ರೂಪದಲ್ಲಿ, ನಿಮ್ಮ ಮೈಮೇಲೆ ತುರಿಕೆ ಬರುವ ವಸ್ತು ಸಿಂಪಡಿಸಿ ಕದಿಯಬಹುದು, ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಹೋಗುವ ಮುನ್ನ ಎಚ್ಚರ, ಮೈಮೇಲೆ ಗಲೀಜಿ ಬಿದ್ದಿದೆ ಎಂದು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆದು ಕದಿಯಬಹುದು, ಹಣದ ನೋಟುಗಳನ್ನು ನಿಮ್ಮೆದುರು ಬೀಳಿಸಿ ವಂಚನೆ ಮಾಡಬಹುದು, ಸಾರ್ವಜನಿಕರ ಸ್ಥಳಗಳಲ್ಲಿ ಕಾರು ನಿಲ್ಲಿಸುವ ಮುನ್ನ ಎಚ್ಚರದಿಂದಿರಿ.

ಈ ಕುರಿತು ಜಯನಗರ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಪ್ರತಿಯೊಬ್ಬರಿಗೂ ಕರಪತ್ರಗಳನ್ನು ಹಂಚುತ್ತಾ ನಿಮ್ಮ ಜಾಗ್ರತೆಯಲ್ಲಿ ನೀವಿರಿ ಎಂದು ತಿಳಿ ಹೇಳುತ್ತಿದ್ದಾರೆ.

 ನಿಮ್ಮ ವೆಹಿಕಲ್‌ ಟೈರ್‌ ಪಂಕ್ಚರ್‌ ಆಗಿದೆ

ನಿಮ್ಮ ವೆಹಿಕಲ್‌ ಟೈರ್‌ ಪಂಕ್ಚರ್‌ ಆಗಿದೆ

ಸುಖಾಸುಮ್ಮನೆ ನಿಮ್ಮ ವಾಹನದಲ್ಲಿ ತೊಂದರೆಯಾಗುತ್ತಿದೆ ಎಂದು ನಂಬಿಸಿ ನೀವು ಅದನ್ನು ಪರೀಕ್ಷಿಸುವಾಗ ಸೀಟಿನ ಮೇಲಿರುವ ನಗದು ಅಥವಾ ಆಭರಣದ ಚೀಲವನ್ನು ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾಗಿಬಿಡುತ್ತಾರೆ.

ಕಳ್ಳನನ್ನು ಹಿಡಿದ ಬೆಂಗಳೂರು ಪೇದೆಗೆ ಕೇರಳ ಹನಿಮೂನ್‌ ಪ್ಯಾಕೇಜ್‌ ಕಳ್ಳನನ್ನು ಹಿಡಿದ ಬೆಂಗಳೂರು ಪೇದೆಗೆ ಕೇರಳ ಹನಿಮೂನ್‌ ಪ್ಯಾಕೇಜ್‌

 ಭದ್ರತಾ ಸಿಬ್ಬಂದಿ ಇಲ್ಲದ ಎಟಿಂಗೆ ಹೋಗಬೇಡಿ

ಭದ್ರತಾ ಸಿಬ್ಬಂದಿ ಇಲ್ಲದ ಎಟಿಂಗೆ ಹೋಗಬೇಡಿ

ಕಾವಲುಗಾರರಿಲ್ಲದ ಎಟಿಎಂನಲ್ಲಿ ಹಣ ಪಡೆಯುವಾಗ ಆಗಂತುಕರು ತಮ್ ಮೇಲೆ ಎರಗಿ ನಿಮ್ಮ ಹಣ ಮತ್ತು ಜೀವ ಹಾನಿಗೆ ಯತ್ನಿಸಬಹುದು. ಸಾಧ್ಯವಾದಷ್ಟು ಕಾವಲುಗಾರರಿರುವ ಎಟಿಎಂಗಳನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

 ನಿಮ್ಮ ಮೈಮೇಲೆ ತುರಿಕೆ ಬರುವ ವಸ್ತು ಸಿಂಪಡಿಸಬಹುದು

ನಿಮ್ಮ ಮೈಮೇಲೆ ತುರಿಕೆ ಬರುವ ವಸ್ತು ಸಿಂಪಡಿಸಬಹುದು

ನೀವು ಒಂಟಿಯಾಗಿ ನಿಂತಿರುವಾಗ ನಿಮಗರಿವಿಲ್ಲದದಂತೆ ಯಾವುದೋ ತುರಿಕೆ ಔಷಧವನ್ನು ಸಿಂಪಡಿಸಿ ನೀವು ತುರಿಸಿಕೊಳ್ಳುವ ಸಮಯದಲ್ಲಿ ನಿಮ್ಮ ಕೈಚೀಲ ಅಥವಾ ಇನ್ನಿತರೆ ವಸ್ತುಗಳನ್ನು ಕಸಿಯುತ್ತಾರೆ ಎಚ್ಚರವಿರಲಿ.

ನೋಟುಗಳನ್ನು ನಿಮ್ಮ ಮುಂದೆ ಬೀಳಿಸಿ ಯಾಮಾರಿಸುತ್ತಾರೆ

ನೋಟುಗಳನ್ನು ನಿಮ್ಮ ಮುಂದೆ ಬೀಳಿಸಿ ಯಾಮಾರಿಸುತ್ತಾರೆ

ವಂಚಕರು ಸ್ವತಃ ತಮ್ಮ ಜೇಬಿನಿಂದ ಹಲವು ನೋಟುಗಳನ್ನು ಬೀಳಿಸಿ ನಿಮ್ಮ ಹಣ ಕೆಳಗೆ ಬಿದ್ದಿದೆ ನೋಡಿ ಎಂದು ನೀವು ಅವುಗಳನ್ನು ಆರಿಸಿಕೊಳ್ಳುವಷ್ಟರಲ್ಲಿ ನಿಮ್ಮನ್ನು ವಂಚಿಸುತ್ತಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕಾರು ನಿಲ್ಲಿಸುವಾಗ ಎಚ್ಚರ

ಸಾರ್ವಜನಿಕ ಸ್ಥಳಗಳಲ್ಲಿ ಕಾರು ನಿಲ್ಲಿಸುವಾಗ ಎಚ್ಚರ

ಕಾರಿನ ಸೀಟಿನ ಮೇಲೆ ಲ್ಯಾಪ್‌ಟಾಪ್‌, ಮೊಬೈಲ್‌, ಪರ್ಸ್‌ ಸೇರಿದಂತೆ ಇನ್ನಿತರೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ, ಕಳ್ಳರು ನಿಮ್ಮನ್ನೇ ಗಮನಿಸುತ್ತಾ ಅವುಗಳನ್ನು ದೋಚುತ್ತಾರೆ. ಕಾರಿನಿಂದ ಇಳಿಯುವ ಮುನ್ನ ಒಮ್ಮೆ ಸ್ವತಃ ಪರಿಶೀಲಿಸಿ ಚಾಲಕರಿಗೆ ಎಚ್ಚರಿಸಿ ಹೊರಡಿ.

 ಅಸಲಿ ಪೊಲೀಸರಂತೆ ನಟಿಸಿ ಹಣ ಕದಿಯಬಹುದು

ಅಸಲಿ ಪೊಲೀಸರಂತೆ ನಟಿಸಿ ಹಣ ಕದಿಯಬಹುದು

ತಾವು ಪೊಲೀಸರು ಮುಂದೆ ಗಲಾಟೆ ನಡೆಯುತ್ತಿದೆ ಎಂದು ನಂಬಿಸಿ ಸುರಕ್ಷತೆ ದೃಷ್ಟಿಯಿಂದ ನಿಮ್ಮ ಆಭರಣಗಳನ್ನು ಬಿಚ್ಚಿಡಿ ಎಂದು ನಂತರ ತಾವೇ ಅದನ್ನು ಭದ್ರಪಡಿಸುವಂತೆ ನಾಟಕವಾಡಿ ಬೇರೆ ಪೊಟ್ಟಣ ನೀಡಿ ವಂಚಿಸುತ್ತಾರೆ.

English summary
croocks may grab your cash, ornaments, and other valuable by diverting your attention using some methods, Please be alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X