ಟೆಂಡರ್ ಶ್ಯೂರ್ ಗೆ ತಂತಿ-ಪೈಪ್ ಅಡ್ಡಿ, ಗುತ್ತಿಗೆದಾರರ ಪರದಾಟ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಬೆಸ್ಕಾಂ ಮತ್ತು ಜಲಮಂಡಳಿಯು ಮೆಜೆಸ್ಟಿಕ್ ಸುತ್ತಲಿನ ರಸ್ತೆಗಳಲ್ಲಿ ನಡೆಸಲಾಗುತ್ತಿರುವ ಟೆಂಡರ್ ಶ್ಯೂರ್ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿವೆ ಎನ್ನುವ ದೂರುಗಳು ಕೇಳಿಬರುತ್ತಿವೆ.

ಕೆಲವು ವರ್ಷಗಳ ಹಿಂದೆ ನೆಲದಡಿ ಅಳವಡಿಲಾಗಿರುವ ಜಲಮಂಡಳಿಯ ನೀರು, ಒಳಚರಂಡಿ ಪೈಪ್ ಹಾಗೂ ಬೆಸ್ಕಾಂ ವಿದ್ಯುತ್ ತಂತಿಗಳು ಕಾಮಗಾರಿಗೆ ತೊಡಕಾಗಿದೆ. ಮೆಜೆಸ್ಟಿಕ್‌ನ ಸುತ್ತ ನೀರು, ಒಳಚರಂಡಿ ಪೈಪ್ ಹಾಗೂ ವಿದ್ಯುತ್ ತಂತಿಗಳನ್ನು ಅಂದಾಜು 30 ವರ್ಷಗಳ ಹಿಂದೆ ಅಳವಡಿಸಲಾಗಿದೆ. ಆದರೆ, ಈಗ ಟೆಂಡರ್ ಶ್ಯೂರ್ ಗಾಗಿ ಪೈಪ್‌ಗಳು ಮತ್ತು ವಿದ್ಯುತ್ ತಂತಿಗಳು ಎದುರಾಗುತ್ತಿವೆ. ಹೀಗಾಗಿ ಕಾಮಗಾರಿ ವಿಳಂಬವಾಗುವಂತಾಗಿದೆ.

ಚರ್ಚ್ ಸ್ಟ್ರೀಟ್ ನಂತೆ ಅಭಿವೃದ್ಧಿ ಹೊಂದಲಿವೆ ಮೂರು ರಸ್ತೆಗಳು

ಪಾದಚಾರಿಗಳು ಹೆಚ್ಚಿರುವ ಪ್ರದೇಶದಲ್ಲಿ ಟೆಂಡರ್ ಶ್ಯೂರ್ ಯೋಜನೆಯಡಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದರಂತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಮುಖ 12 ರಸ್ತೆಗಳನ್ನು ಅಭಿವೃದ್ಧಿಪಡಿಸಿ ಜನರ ಬಳಕೆಗೆ ನೀಡಲಾಗಿದೆ.

Pipelines and cables cause delay of tender sure work!

ಇದೀಗ ಮೆಜೆಸ್ಟಿಕ್ ಸುತ್ತಲಿನ 5 ಹಾಗೂ ಕೆ.ಆರ್. ಮಾರುಕಟ್ಟೆ ಬಳಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ, 2017ಎ ಸೆಪ್ಟೆಂಬರ್ ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಧನ್ವಂತಿ ರಸ್ತೆ, ಡಬ್ಲ್ಯೂ ಎಚ್ ಹನುಮಂತಪ್ಪ ರಸ್ತೆ, ಗಾಂಧಿನಗರ ಸುತ್ತಲಿನ ರಸ್ತೆಗಳು, ಸುಬೇದಾರ್ ಛತ್ರಂ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಕೆ.ಆರ್. ಮಾರುಕಟ್ಟೆ ಸುತ್ತಲಿನ ರಸ್ತೆ ಒಟ್ಟು 10.50ಕಿ.ಮೀ ಉದ್ದ ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tender sure road work was delayed due to countless numbers of water pipe lines and electricity cables which were found in underground around majestic. The BBMP has taken the reconstruction of six important roads connecting majestic.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ