ಬೆಂಗಳೂರು: ಕಾಲೇಜುಗಳ ಬಳಿ ಗುಲಾಬಿ ಪೊಲೀಸ್ ಚೌಕಿ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 09: ಮಹಿಳಾ ದಿನದ ಪ್ರಯುಕ್ತ ನಗರದಲ್ಲಿ ಎರಡು ಪಿಂಕ್ ಪೊಲೀಸ್ ಚೌಕಿಗಳನ್ನು ಆರಂಭಿಸಲಾಗಿದೆ.

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಎನ್‌ಎಂಕೆಆರ್ ವಿ ಮಹಿಳಾ ಕಾಲೇಜಿನ ಬಳಿ ಮತ್ತು ಬಸವನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಂಎಸ್ ಮಹಿಳಾ ಕಾಲೇಜಿನ ಬಳಿ ತಲಾ ಒಂದೊಂದು ಮಹಿಳಾ ಪೊಲೀಸ್ ಚೌಕಿಗಳನ್ನು ನಿರ್ಮಿಸಲಾಗಿದೆ.

ಪಿಂಕ್ ಹೊಯ್ಸಳ ಚುರುಕು ಕಾರ್ಯಾಚರಣೆ: ಹತ್ತೇ ನಿಮಿಷದಲ್ಲಿ ಕಾಮುಕ ಬಂಧನ

ಕಾಲೇಜಿನ ಬಳಿ ಸುಳಿದಾಡುವ ಬೀದಿ ಕಾಮಣ್ಣರು ಮತ್ತು ಯುವತಿಯರನ್ನು ಚುಡಾಯಿಸುವ ಕಿಡಿಗೇಡಿಗಳ ಮೇಲೆ ನಿಗಾ ಇಡಲು ಮತ್ತು ಕ್ಷಿಪ್ರವಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಉದ್ದೇಶದಿಂದ ಈ ಚೌಕಿಗಳನ್ನು ನಿರ್ಮಿಸಲಾಗಿದೆ.

Pink police Chowky in the city colleges

ಪಿಂಕ್ ಚೌಕಿ ವಿಸ್ತರಣೆ: ಈ ಎರಡು ಚೌಕಿಗಳ ಫಲಿತಾಂಶ ಅರಿತು ಈ ವ್ಯವಸ್ಥೆಯನ್ನು ಇನ್ನಷ್ಟು ಮಹಿಳಾ ಕಾಲೇಜುಗಳ ಬಳಿ ವಿಸ್ತರಿಸುವ ಉದ್ದೇಶವೂ ಇದೆ. ಯಾವುದೇ ಕಾಲೇಜಿನ ವಿದ್ಯಾರ್ಥಿನಿಯರಾದರೂ ಇಲ್ಲಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ: ಈ ಚೌಕಿಗಳಲ್ಲಿ ಪೊಲೀಸರು ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಸಿಸಿಟಿವಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ಅಳವಡಿಸುವ ಮೂಲಕ ತೀವ್ರ ನಿಗಾ ಇಡುವ ಕಾರ್ಯವನ್ನು ಈ ಚೌಕಿಗಳ ಸಿಬ್ಬಂದಿಗಳು ಮಾಡಲಿದ್ದಾರೆ. ಕಾಲೇಜಿನ ಬಳಿ ಮಾದಕವಸ್ತು ಮಾರಾಟಗಾರರು, ವ್ಯಸನಿಗಳು ಇದ್ದರೆ ಸಿಬ್ಬಂದಿ ತಕ್ಷಣ ಗುರುತಿಸಿ ಕ್ರಮ ಜರುಗಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To curb the eve teasers in Bengaluru colleges. City police opened two pink place chowky. The police have planning to extend this initiative to some more colleges in the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ