ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಊಬ್ಲೋ ವಾಚ್: ಪಿಐಎಲ್ ಹಿಂಪಡೆದ ಅನುಪಮಾ ಶೆಣೈ

By Nayana
|
Google Oneindia Kannada News

ಬೆಂಗಳೂರು, ಜೂನ್ 11: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಾಪಾಸ್ ಪಡೆಯಲಾಗಿದ್ದು, ಊಬ್ಲೋ ವಾಚ್ ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಊಬ್ಲೋ ವಾಚ್ ವಿವಾದ ಕುರಿತ ಸಮಗ್ರ ಲೇಖನಗಳು

ಸಿದ್ದರಾಮಯ್ಯ ಸುಬಾರಿ ವಾಚ್ ಉಡುಗೊರೆ ಪಡೆದಿದ್ದ ಪ್ರಕರಣ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಹಿಂಪಡೆದಿದ್ದಾರೆ.

ಸಿದ್ದರಾಮಯ್ಯ ಊಬ್ಲೋ ವಾಚ್‌ ಪ್ರಕರಣ ಮುಂದೂಡಿದ ಹೈಕೋರ್ಟ್ ಸಿದ್ದರಾಮಯ್ಯ ಊಬ್ಲೋ ವಾಚ್‌ ಪ್ರಕರಣ ಮುಂದೂಡಿದ ಹೈಕೋರ್ಟ್

ಇದನ್ನು ಸಾರ್ವಜನಿಕ ಹಿತಾಸಕ್ತಿ ಆಗಿ ಪರಿಗಣಿಸುವುದು ಹೇಗೆ ಎಂದು ಪ್ರಶ್ನಿಸಿದ ಹೈಕೋರ್ಟ್ ಬೇರೆ ಯಾವುದಾದರೂ ಮಾರ್ಗದ ಅಡಿಯಲ್ಲಿ ಕ್ರಮಕ್ಕೆ ಮುಂದಾಗಲು ಹೈಕೋರ್ಟ್ ಅರ್ಜಿದಾರರಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಅನುಪಮಾ ಶೆಣೈ ಪರ ವಕೀಲ ಪಿಐಎಲ್‌ನ್ನು ಹಿಂಪಡೆದಿದ್ದಾರೆ.

PIL withdrawn on former CM Hublot watch

ಡಾ. ಗಿರೀಶ್ ಚಂದ್ರವರ್ಮಾ ಎಂಬವರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪವಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಅನುಪಮಾ ಶೆಣೈ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮೋದಿ ವಿರುದ್ಧ 100 ಕೋಟಿ ಕೇಸ್ ಹಾಕಲು ಸಿದ್ದರಾಮಯ್ಯ ನೋಟಿಸ್ ಮೋದಿ ವಿರುದ್ಧ 100 ಕೋಟಿ ಕೇಸ್ ಹಾಕಲು ಸಿದ್ದರಾಮಯ್ಯ ನೋಟಿಸ್

ಇದೇ ವಾಚ್ ವಿಚಾರವಾಗಿ ಸಿದ್ದರಾಮಯ್ಯ ಊಬ್ಲೋ ವಾಚ್ ಪ್ರಕರಣ ಎಂಬ ಮೋದಿ ಆರೋಪ ವಿಚಾರ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ನೂರು ಕೋಟಿ ಮಾನನಷ್ಟ ಮೊಕದ್ದಮೆಹಾಕಿದ್ದರು.

English summary
Former DYSP Anupama Shenoy has withdrawn Public Interest Litigation in the high court against former chief minister Siddaramaiha had Hublot watch allegedly illegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X