ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭೆ ಉಪಚುನಾವಣೆ ರದ್ದು ಗೊಳಿಸಲು ಹೈಕೋರ್ಟ್‌ಗೆ ಅರ್ಜಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09: ಮಂಡ್ಯ, ಬಳ್ಳಾರಿ, ಶಿವಮೊಗ್ಗ ಕ್ಷೇತ್ರಗಳಿಗೆ ನಡೆಯುತ್ತಿರುವ ಲೋಕಸಭೆ ಉಪಚುನಾವಣೆಯನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ತುಮಕೂರಿನ ರಮೇಶ್ ನಾಯಕ್‌ ಎಂಬುವರು ಇಂದು ಹೈಕೋರ್ಟ್‌ಗೆ ಪಿಐಎಲ್‌ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿದ್ದು ವಿಚಾರಣೆ ನಡೆಯಲಿದೆ. ಲೋಕಸಭೆ ಉಪಚುನಾವಣೆಯಿಂದ ಸಾರ್ವಜನಿಕ ಹಣ ಪೋಲಾಗುತ್ತದೆ ಎಂಬುದು ಅರ್ಜಿದಾರರ ದೂರು.

ಲೋಕಸಭೆ ಉಪ ಚುನಾವಣೆ ರದ್ದುಪಡಿಸಲು ರಾಷ್ಟ್ರಪತಿಗಳಿಗೆ ಪತ್ರಲೋಕಸಭೆ ಉಪ ಚುನಾವಣೆ ರದ್ದುಪಡಿಸಲು ರಾಷ್ಟ್ರಪತಿಗಳಿಗೆ ಪತ್ರ

ಲೋಕಸಭೆ ಮುಖ್ಯ ಚುನಾವಣೆಗೆ ಇನ್ನು ಆರು ತಿಂಗಳು ಸಹ ಇಲ್ಲದೇ ಇರುವ ಸಮಯದಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ನಡೆಸಲಾಗುತ್ತದೆ. ಚುನಾವಣೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಆರು ತಿಂಗಳು ಸಹ ಕಾಲಾವಕಾಶ ಇರುವುದಿಲ್ಲ ಹಾಗಾಗಿ ಈ ಚುನಾವಣೆ ಕೇವಲ ಸಾರ್ವಜನಿಕ ಹಣದ ಪೋಲಷ್ಟೆ ಎಂದು ಅರ್ಜಿದಾರರು ಹೇಳಿದ್ದಾರೆ.

PIL submitted to Karnataka high court to cancel Lok sabha by election

ನವೆಂಬರ್ 3ರಂದು ಮಂಡ್ಯ, ಶಿವಮೊಗ್ಗ, ಬಳ್ಳಾರಿ ಕ್ಷೇತ್ರಗಳ ಲೋಕಸಭೆ ಉಪಚುನಾವಣೆ ನಡೆಯಲಿದೆ. ಇದೇ ದಿನ ರಾಮನಗರ ಮತ್ತು ಜಮಖಂಡಿ ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಸಹ ನಡೆಯಲಿದೆ.

ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ: ಆಯೋಗ ನೀಡಿದ ಸಮರ್ಥನೆ ಏನು ಗೊತ್ತೇ?ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ: ಆಯೋಗ ನೀಡಿದ ಸಮರ್ಥನೆ ಏನು ಗೊತ್ತೇ?

ಉಪಚುನಾವಣೆ ಮೂಲಕ ಆಯ್ಕೆ ಆಗುವ ಮೂರು ಜನ ಸಂಸದರಿಗೆ ಆರು ತಿಂಗಳು ಸಹ ಸಮಯಾವಕಾಶ ಇರುವುದಿಲ್ಲ. ಏಪ್ರಿಲ್‌ ಅಷ್ಟರಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ಆಗುತ್ತದೆ. ಹಾಗಾಗಿ ಲೋಕಸಭೆ ಉಪಚುನಾವಣೆಯಲ್ಲಿ ಬಹಳಷ್ಟು ಜನ ವಿರೋಧಿಸುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು?

ಲೋಕಸಭೆ ಉಪಚುನಾವಣೆಯಲ್ಲಿ ರದ್ದು ಮಾಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

English summary
Tumkur resident Ramesh Nayak submitted PIL to Karnataka high court demanding cancel the Lok Sabha by election of three constituencies. He said that it is waste of public money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X