ಮಾಜಿ ಜೇಮ್ಸ್ ಬಾಂಡ್ 'ಪಾನ್ ' ತಿಂದು ಕಾಮಿಡಿ ಸ್ಟಾರ್ ಆಗ್ಬಿಟ್ಟ

Posted By:
Subscribe to Oneindia Kannada

ಲಾಸ್ ಏಂಜಲೀಸ್, ಅಕ್ಟೋಬರ್ 21: ಹಾಲಿವುಡ್ ನ ಸ್ಟಾರ್, ಮಾಜಿ ಜೇಮ್ಸ್ ಬಾಂಡ್ ಪಿಯರ್ಸ್ ಬ್ರೋಸ್ನನ್ ಗರಂ ಆಗಿದ್ದಾರೆ. ಪಾನ್ ಮಸಾಲ ಪರ ಪ್ರಚಾರ ನಡೆಸಿ ರಾಯಭಾರಿ ಎನಿಸಿಕೊಂಡಿದ್ದ ಮಾಜಿ ಜೇಮ್ಸ್ ಬಾಂಡ್ ಅವರು ಪಾನ್ ಬಹಾರ್ ವಿರುದ್ಧ ಕಿಡಿಕಾರಿದ್ದಾರೆ.

ಪಾನ್ ಬಹಾರ್ ಜಾಹೀರಾತು ನೋಡುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ನಗೆ ಪಟಾಲಿಗೆ ಈಡಾಗಿದ್ದು ಹಳೆ ಸಂಗತಿ. ಈಗ ಕ್ಯಾನ್ಸರ್ ಕಾರಕ ಉತ್ಪನ್ನದ ಬಗ್ಗೆ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕೆ ಕಂಪನಿ ವಿರುದ್ಧ ನಟ ಪಿಯರ್ಸ್ ಬ್ರೋಸ್ನನ್ ಕೋಪ ವ್ಯಕ್ತಪಡಿಸಿದ್ದಾರೆ.

Pierce Brosnan shocked by deceptive use of his image in Pan Bahar ad

ಇದಕ್ಕಿಂತ ಹೆಚ್ಚಾಗಿ, ಪಾನ್‌ಬಾಹರ್ ಗುತ್ತಿಗೆ ನಿಯಮ ಉಲ್ಲಂಘಿಸಿ, ತಂಬಾಕು ಮಿಶ್ರಿತ ಮೌತ್ ಫ್ರೆಶ್ನರ್ ಸೇರಿದಂತೆ ಎಲ್ಲ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯನ್ನಾಗಿ ತನ್ನನ್ನು ಬಳಸಿಕೊಂಡಿರುವುದು ಪಿಯರ್ಸ್‌ ಬ್ರೋಸ್ನನ್ ಗೆ ಕೋಪ ತಂದಿದೆ. ಈಗ ಪಾನ್ ಬಾಹರ್ ಕಂಪೆನಿ ವಿರುದ್ಧ ಕಿಡಿಕಾರಿದ್ದಾರೆ.

ಭಾರತದ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ, ಅಲ್ಲಿನ ಜನರಿಗೆ ಮಾರಕವಾಗುವ ಇಂಥ ಉತ್ಪನ್ನಗಳ ಪರ ನಾನು ಪ್ರಚಾರಕನಾಗಿ ಕಾಣಿಸಿಕೊಂಡಿರುವುದು ಅಪರಾಧವಾಗಿದೆ. ಇದಕ್ಕಾಗಿ ಹೃದಯಪೂರ್ವಕ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಭಾರತದಲ್ಲಿ ತಂಬಾಕು ಉತ್ಪನ್ನಗಳು "ಕ್ಯಾನ್ಸರ್‌ಗೆ ಕಾರಣವಾಗುತ್ತದೆ" ಎಂದ ಎಚ್ಚರಿಕೆಯೊಂದಿಗೆ ಮಾರಾಟವಾಗುತ್ತವೆ.

'ನನ್ನ ಮೊದಲ ಪತ್ನಿ, ಮಗಳು ಹಾಗೂ ಅಸಂಖ್ಯಾತ ಸ್ನೇಹಿತರು ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಮಹಿಳೆಯರ ಆರೋಗ್ಯ ಸುರಕ್ಷೆಗೆ ನಾನು ಬದ್ಧ. ಮಾನವ ಆರೋಗ್ಯ ಸುಧಾರಿಸುವ ಉದ್ದೇಶದ ಸಂಶೋಧನಾ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾನ್ ಬಾಹರ್ ಅವರು ಸಂಪೂರ್ಣ ನೈಸರ್ಗಿಕ, ತಂಬಾಕು, ಅಡಿಕೆ ಹಾಗೂ ಯಾವುದೇ ಹಾನಿಕಾರಕ ಅಂಶಗಳಿಲ್ಲದ ಉತ್ಪನ್ನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಂಡಿದ್ದಾರೆ. ಆದ್ದರಿಂದ ತಕ್ಷಣವೇ ಕಂಪೆನಿಯ ಜಾಹೀರಾತುಗಳಿಂದ ತಮ್ಮನ್ನು ತೆಗೆದುಹಾಕಬೇಕು ಎಂದು 63ವರ್ಷ ವಯಸ್ಸಿನ ನಟ ಕೋರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hollywood star Pierce Brosnan says he is distressed by the deceptive use of his image in Indian pan masala brand's advertisement.
Please Wait while comments are loading...