ಅ.1, 2ರಂದು ನ್ಯಾಟ್ ವಿನ್ ಫೋಟೋ ಪ್ರದರ್ಶನ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಅಕ್ಟೋಬರ್ 1, 2ರಂದು ನ್ಯಾಟ್ ವಿನ್ ಫೋಟೋ ಪ್ರದರ್ಶನ ಏರ್ಪಡಿಸಲಾಗಿದೆ. 106 ಅದ್ಭುತ ಫೋಟೋಗಳನ್ನು ಪ್ರದರ್ಶಿಸಲಾಗುವುದು. ಅಕ್ಟೋಬರ್ 1ರಂದು ಬೆಳಗ್ಗೆ 11ಕ್ಕೆ ಫೋಟೋಗ್ರಾಫರ್ ಸುಬ್ರಮಣಿಯನ್ ಮಣಿ ಹಾಗೂ ಅಶೋಕ್ ಹಲ್ಲೂರ್ ಪ್ರದರ್ಶನಕ್ಕೆ ಚಾಲನೆ ನೀಡುತ್ತಾರೆ.

ಹರ್ಷ ನರಸಿಂಹಮೂರ್ತಿ, ರಾಜೇಶ್ ವಿಷ್ಣು ಕಂಬಯ್ಯ, ನಿಖಿಲೇಶ್ ರಾಜೇಶ್ ಭಾಗವಹಿಸುವರು. ಕುಮಾರಕೃಪಾದ ಚಿತ್ರಕಲಾ ಪರಿಷತ್ ನಲ್ಲಿ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಪ್ರದರ್ಶನ ಇರುತ್ತದೆ. ಅಕ್ಟೋಬರ್ 2ರಂದು ಸಂಜೆ 5ಕ್ಕೆ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.

Photo exibhition, drama on saturday and sunday

ಇನ್ನು ಸಂಚಾರಿ ಥಿಯೇಟರ್ ಅರ್ಪಿಸುವ ವಸುಧೇಂದ್ರ ಅವರ ಕಥೆಯಾಧಾರಿತ ಎನ್.ಮಂಗಳ ನಿರ್ದೇಶನದ ನಾಟಕ 'ಶ್ರೀದೇವಿ ಮಹಾತ್ಮೆ' ಪ್ರದರ್ಶನ ಇದೇ ಭಾನುವಾರ, 2/10/2016ರಂದು ರಂಗಶಂಕರದಲ್ಲಿ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಇದೆ. ಎರಡು ವರ್ಷಗಳ ನಂತರ ಈ ನಾಟಕದಲ್ಲಿ ಸಂಚಾರಿ ವಿಜಯ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A photo exibhition by Natwin on October 1st and 2nd in Karnataka chitrakala parishath. The drama called Sridevi Mahatme by sanchari theatres in Rangashankara on October 2nd.
Please Wait while comments are loading...