402 ಮೊಬೈಲ್ ಕದ್ದ ಖತರ್ನಾಕ್ ಕಳ್ಳರು, ಸೆರೆಗೆ ಸಿಕ್ಕರು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಬಿಎಂಟಿಸಿ, ಕೆಎಸ್ಐಟಿಸಿ ಪ್ರಯಾಣಿಕರ ದುಬಾರಿ ಬೆಲೆಯ ಮೊಬೈಲ್ ಗಳನ್ನು ಅಪಹರಿಸಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಖದೀಮರನ್ನು ಉತ್ತರ ವಲಯದ ಪೊಲೀಸರು ಬಂದಿಸಿದ್ದಾರೆ. ಜಗಜೀವನನಗರದ ಗೋರಿಪಾಳ್ಯದ ಆರೀಫ್ ಪಾಷ ಅಲಿಯಾಸ್ ಆರೀಫ್(40) ಕೇರಳದ ಪಾಲಕ್ಕಾಡ್ ನಗರದ ಸುಬೇರ್(45)ಬಂಧಿತ ಆರೋಪಿಗಳು.

ಅವರು ಕದ್ದಿರುವ ಮೊಬೈಲ್ ಗಳಲ್ಲಿ 40 ಲಕ್ಷ ಮೌಲ್ಯದ 53 ಐ-ಪೋನ್, 87 ಸ್ಯಾಮ್ ಸಂಗ್, 35 ಸೋನಿ, 50 ಮೈಕ್ರೋಮ್ಯಾಕ್ಸ್, 20 ಹೆಚ್‍ಟಿಸಿ, 16 ಲೆನೋವೊ, 10 ಮೊಟರೊಲ, 10 ಕಾರ್ಬನ್, 17 ನೋಕಿಯೊ, 8 ಎಲ್ಜಿ ಹಾಗೂ ಇತರೆ 170 ಒಟ್ಟಾರೆ 402 ವಿವಿಧ ಬಗೆಯ ಮೊಬೈಲ್‍ ಗಳನ್ನು ವಶಪಡಿಸಿಕೊಳ್ಳಲಾಗಿದೆ.[ಫ್ಲಿಪ್‌‌ಕಾರ್ಟ್‌ನಿಂದ ಮೊಬೈಲ್‌ ಕದ್ದ ಕಳ್ಳ ಸಿಕ್ಕಿಬಿದ್ದ]

phone theif arrested: 402 mobile theft

ಆರೋಪಿಗಳು ನಗರದ ಸಾರಿಗೆ ಬಸ್ ಗಳಲ್ಲಿ ಸಂಚರಿಸುತ್ತಾ ಪ್ರಯಾಣಿಕರ ಬೆಲೆ ಬಾಳುವ ಮೊಬೈಲ್ ಗಳನ್ನು ಕಳವು ಮಾಡಿ ಇಲ್ಲವೇ ಕಳ್ಳತನ ಮಾಡಿಸಿ ಇಎಂಇಐ ನಂಬರ್‍ಗಳ ಬದಲಾಯಿಸಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಮಾಡುತ್ತಿದ್ದರು. ಇಲ್ಲಿಯವರೆಗೆ ಇಷ್ಟೊಂದು ಪ್ರಮಾಣದ ಬಾಳುವ ಪೋನ್ ಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಅವರು ತಿಳಿಸಿದರು.[ಮುನ್ಸಿಪಲ್ ಆಫೀಸಿನಲ್ಲಿ ಮೊಬೈಲ್ ಕದ್ದ ಪತ್ರಕರ್ತ]

ಆರೋಪಿಗಳು ಸುಮಾರು 1 ವರ್ಷದಿಂದ ಮೊಬೈಲ್ ಕಳವು ಕೃತ್ಯದಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡುಬಂದಿದೆ ವಿದ್ಯಾರಣ್ಯಪುರ ಪೊಲೀಸ್ ಇನ್ಸ್ ಪೆಕ್ಟರ್ ಆರ್.ಪುನೀತ್‍ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿರವುದಾಗಿ ಆಯುಕ್ತ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mobile Phone theif two Arrested in bengaluru, This theif theft 402 mobiles on bengaluru bus stand and other place. Change the Mobile EMEI number and sale the other state.
Please Wait while comments are loading...