'ಕರ್ನಾಟಕ ಸೇರಿ ದೇಶದ 6 ಕಡೆ ಫಾರ್ಮಾಪಾರ್ಕ್ ಸ್ಥಾಪನೆ'

Posted By:
Subscribe to Oneindia Kannada

ಬೆಂಗಳೂರು, ಜ. 07: ಔಷಧಿ ತಯಾರಿಕೆ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಕರ್ನಾಟಕ ಸೇರಿದಂತೆ ದೇಶದ 6 ಕಡೆ ಫಾರ್ಮಾಪಾರ್ಕ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್‌ಕುಮಾರ್ ಘೋಷಿಸಿದ್ದಾರೆ. ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಸಭಾಂಗಣದಲ್ಲಿ ಔಷಧಿ ಮೇಳ ಉದ್ಘಾಟಿಸಿದರು.

ಔಷಧಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಹಲವಾರು ನೆರವುಗಳನ್ನು ನೀಡುತ್ತಿದೆ. ಔಷಧಿ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 90ರ ದಶಕದಲ್ಲಿ ಒಂದು ಬಿಲಿಯನ್ ಡಾಲರ್ ಇದ್ದ ಇದರ ವಹಿವಾಟು ಈಗ 30 ಬಿಲಿಯನ್ ಡಾಲರ್‌ಗೆ ತಲುಪಿದೆ. ಮುಂದಿನ 10 ವರ್ಷದಲ್ಲಿ ಇದರ ವಹಿವಾಟು 50 ಬಿಲಿಯನ್ ಡಾಲರ್‌ಗೆ ಹೆಚ್ಚುವ ಸಾಧ್ಯತೆ ಇದೆ ಎಂದರು.[ಔಷಧಿ ಖರೀದಿಸಿ 'ಪ್ಲಸ್' ಮನೆಗೆ ತರಿಸಿಕೊಳ್ಳಿ!]

ಭಾರತೀಯ ಔಷಧಿ ಉತ್ಪಾದನಾ ಕ್ಷೇತ್ರ ವಿಶ್ವದ ಗಮನ ಸೆಳೆದಿದೆ. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಬಳಸುವ ಐದು ಔಷಧಿಗಳ ಪೈಕಿ ಒಂದು ಭಾರತದಲ್ಲಿ ಉತ್ಪಾದನೆ ಯಾಗಿರುವ ಔಷಧಿಯಾಗಿದೆ. ಅಷ್ಟರ ಮಟ್ಟಿಗೆ ನಮ್ಮ ದೇಶ ಔಷಧಿ ವಿಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.

6 ಕಡೆ ಫಾರ್ಮಪಾಕ್ ಎಲ್ಲೆಲ್ಲಿ?

6 ಕಡೆ ಫಾರ್ಮಪಾಕ್ ಎಲ್ಲೆಲ್ಲಿ?

ರಾಜಸ್ತಾನ, ಗುಜರಾತ್, ಮಧ್ಯಪ್ರದೇಶ, ಹೈದರಾಬಾದ್, ಕರ್ನಾಟಕ, ಛತ್ತೀಸ್‌ಗಡ ಸೇರಿ 6 ಕಡೆ ಫಾರ್ಮಪಾಕ್ ಸ್ಥಾಪಿಸಲು ನಿರ್ಧರಿಸಲಾಗಿದೆ.

ದೇಶದ 12 ಕಡೆ ಔಷಧಿ ಶಿಕ್ಷಣ ಸಂಶೋಧನಾ ಸಂಸ್ಥೆ

ದೇಶದ 12 ಕಡೆ ಔಷಧಿ ಶಿಕ್ಷಣ ಸಂಶೋಧನಾ ಸಂಸ್ಥೆ

ದೇಶದ 12 ಕಡೆ ಔಷಧಿ ಶಿಕ್ಷಣ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಬಜೆಟ್‌ನಲ್ಲಿ ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶದಲ್ಲೂ ಔಷಧಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಅನುದಾನ ನಿಗದಿಪಡಿಸಲಾಗುವುದು ಎಂದು ಹೇಳಿದರು.

ಫಾರ್ಮಾಪಾರ್ಕಿಗಾಗಿ 100 ಎಕರೆ ಮೀಸಲು

ಫಾರ್ಮಾಪಾರ್ಕಿಗಾಗಿ 100 ಎಕರೆ ಮೀಸಲು

ಕರ್ನಾಟಕ ಸರ್ಕಾರ ಈ ಪಾರ್ಕಿಗಾಗಿ 100 ಎಕರೆ ಜಾಗ ಮತ್ತು ತೆರಿಗೆ ವಿನಾಯಿತಿ ನೀಡಲು ಸಹಮತ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ನಡೆಯುವ ಇನ್‌ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಈ ಪಾರ್ಕ್ ಸ್ಥಾಪನೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಕೇಂದ್ರ ಸರ್ಕಾರ ಫಾರ್ಮಪಾಕ್ ಸ್ಥಾಪನೆ ಸಂಬಂಧ ಚರ್ಚೆ ನಡೆಸುತ್ತಿದೆ ಎಂದು ತಿಳಿಸಿದರು.

ಔಷಧಿ ವಿಜ್ಞಾನಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯ

ಔಷಧಿ ವಿಜ್ಞಾನಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯ

ಔಷಧಿ ವಿಜ್ಞಾನ ಇಲಾಖೆ ಬೇರೆ ಬೇರೆ ಇಲಾಖೆಗಳ ಅಧೀನದಲ್ಲಿದ್ದು, ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಇದಕ್ಕಾಗಿಯೇ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಔಷಧಿ ಉದ್ಯಮಕ್ಕೆ ತೆರಿಗೆ ವಿನಾಯಿತಿ ಸೇರಿದಂತೆ ಹಲವಾರು ಸೌಲಭ್ಯ ನೀಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.

ವೈದ್ಯಕೀಯ ಉಪಕರಣಗಳ ಉತ್ಪಾದನಾ ಪಾರ್ಕ್

ವೈದ್ಯಕೀಯ ಉಪಕರಣಗಳ ಉತ್ಪಾದನಾ ಪಾರ್ಕ್

ಹಣಕಾಸು ಸಚಿವರ ಗಮನ ಸೆಳೆಯಲು ಶೀಘ್ರವೇ ಉದ್ಯಮಿಗಳ ನಿಯೋಗವೊಂದನ್ನು ಕರೆದೊಯ್ಯುವುದಾಗಿ ಅನಂತ್‌ಕುಮಾರ್ ಹೇಳಿದರು. ಗುಜರಾತ್‌ನಲ್ಲಿ ವೈದ್ಯಕೀಯ ಉಪಕರಣಗಳ ಉತ್ಪಾದನಾ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಡಾ.ಕಟೋಜಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಔಷಧ ವಿಜ್ಞಾನದಲ್ಲಿಭಾರತ ನಾಯಕತ್ವ ವಹಿಸಲಿದೆ

ಔಷಧ ವಿಜ್ಞಾನದಲ್ಲಿಭಾರತ ನಾಯಕತ್ವ ವಹಿಸಲಿದೆ

ಮುಂದಿನ ದಿನಗಳಲ್ಲಿ ಭಾರತ ಔಷಧ ವಿಜ್ಞಾನದಲ್ಲಿ ನಾಯಕತ್ವ ವಹಿಸಲಿದ್ದು, ಈಗಿರುವ ಔಷಧಿ ದರದಲ್ಲಿ ಶೇ.30ರಷ್ಟು ಕಡಿಮೆ ಮಾಡಿದರೆ, ಜಾಗತಿಕ ಸ್ಪರ್ಧೆ ನೀಡಲು ಸಾಧ್ಯವಾಗುತ್ತಿದೆ

ವೈದ್ಯಕೀಯ ಶಿಕ್ಷಣ ಸಚಿವ ಶರಣ್‌ಪ್ರಕಾಶ್ ಪಾಟೀಲ್

ವೈದ್ಯಕೀಯ ಶಿಕ್ಷಣ ಸಚಿವ ಶರಣ್‌ಪ್ರಕಾಶ್ ಪಾಟೀಲ್

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಪೂರೈಸಲು ಟೆಂಡರ್ ಕರೆದರೆ ಪ್ರಮುಖ ಕಂಪೆನಿಗಳು ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ವಿಷಾದಿಸಿದರು. ದೇಶೀಯವಾಗಿ ಔಷಧಿ ಉತ್ಪಾದನೆ ಹೆಚ್ಚಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್

ರೋಗಿಗಳಿಗೆ ಗುಣಮಟ್ಟ ಔಷಧಿ ಪೂರೈಸುವುದು ಸರ್ಕಾರದ ಆದ್ಯತೆ ಎಂದರಲ್ಲದೆ, ಔಷಧಿ ಕಂಪೆನಿಗಳು ಸಿಎಸ್‌ಆರ್ ನಿದಿಯನ್ನು ಆರೋಗ್ಯ ಮತ್ತು ನೈರ್ಮಲ್ಯ ನಿಯಂತ್ರಣಕ್ಕೆ ಬಳಸುವಂತೆ ಮನವಿ ಮಾಡಿದರು. ಕೇಂದ್ರ ಸಚಿವ ಹನ್ಸರಾಜ್, ಸಚಿವ ಆರ್.ವಿ.ದೇಶಪಾಂಡೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Minister of Chemicals and Fertilizers Shri Ananth Kumar inaugurated an international exhibition and conference on Pharma industry, medical electronics and devices sector at Bengaluru today. Government of India is coming up with Pharma clusters/parks where common facilities and infrastructure will be provided.
Please Wait while comments are loading...