ಅಡುಗೆ ಅನಿಲ ವಿತರಣೆ: ಮಹತ್ವದ ಬದಲಾವಣೆಗೆ ಬಿರುಸಿನ ಸಿದ್ದತೆ

Written By:
Subscribe to Oneindia Kannada

ಬೆಂಗಳೂರು, ಡಿ 27: ಪ್ರಧಾನಮಂತ್ರಿಯವರ ನಗದುರಹಿತ ಆರ್ಥಿಕ ವ್ಯವಹಾರದ ಕನಸಿಗೆ ಸ್ಪಂಧಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಪ್ರಾಯೋಗಿಕವಾಗಿ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಅನ್ವಯವಾಗುವಂತೆ ಮಹತ್ವದ ಬದಲಾವಣೆ ತರಲು ಮುಂದಾಗಿದೆ.

ಅಡುಗೆ ಅನಿಲ ವಿತರಣೆಗೆ ಸಂಬಂಧಿಸಿದಂತೆ ಗರಿಷ್ಠ ಮುಂದಿನ ಮೂವತ್ತು ದಿನದೊಳಗೆ, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗಳಿಗೆ 'ಪಿಓಎಸ್' (ಸ್ವೈಪಿಂಗ್ ಮೆಷಿನ್) ಖರೀದಿಸುವಂತೆ ಸಚಿವಾಲಯ ಸೂಚಿಸಿದೆ. (ಸಬ್ಸಿಡಿಯುಳ್ಳ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ)

Petroleum ministry all set to implement cashless LPG distribution in Bengaluru

ಆ ಮೂಲಕ ಸಂಪೂರ್ಣ ನಗದುರಹಿತ ವ್ಯವಹಾರವನ್ನು ಬೆಂಗಳೂರು ನಗರದಲ್ಲಿ ಆರಂಭಿಸಲು ಸಚಿವಾಲಯ ನಿರ್ಧರಿಸಿದ್ದು, ಎಲ್ಲಾ ಇಲಾಖೆಯ ಯೋಜನೆ ಪ್ರಕಾರ ನಡೆದರೆ ಮುಂದಿನ 20-30ದಿನದೊಳಗೆ ಗ್ರಾಹಕರು ಪಿಓಎಸ್ ಮೂಲಕ ಹಣ ಪಾವತಿಸಬಹುದಾಗಿದೆ.

ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸೂಚನೆಯ ಮೇರೆಗೆ ಮೂರು ಅನಿಲ ವಿತರಕ ಸಂಸ್ಥೆಯ ಅಧಿಕಾರಿಗಳು ಮತ್ತು ಏಜೆನ್ಸಿಗಳ ಮಾಲೀಕರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವಾಲಯದ ಉಪಕಾರ್ಯದರ್ಶಿಗಳು ತಿಳಿಸಿದ್ದಾರೆ,

ಕ್ಯಾಷ್ ಲೆಸ್ ವ್ಯವಹಾರ ನಡೆಸಿದರೆ ಗ್ರಾಹಕರಿಗೆ ಮತ್ತು ಏಜೆನ್ಸಿ ಇಬ್ಬರಿಗೂ ಅನುಕೂಲವಾಗಲಿದೆ. ಪ್ರಮುಖವಾಗಿ ಕಳ್ಳನೋಟು ಸಮಸ್ಯೆ ವಿತರಕರಿಗೆ ತಪ್ಪಲಿದೆ.

ಇನ್ನು ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ತಪ್ಪುವುದು ಒಂದೆಡೆಯಾದರೆ, ಸಿಲಿಂಡರಿನ ನಿಖರವಾದ ಮೊತ್ತವನ್ನು ಮಾತ್ರ ಪಾವತಿಸಲು ಸುಲಭವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Petroleum ministry all set to implement cashless LPG distribution in Bengaluru Metro limit in next 20-30 days.
Please Wait while comments are loading...