ಬೆಲೆ ಹೆಚ್ಚಳ, ಬೆಂಗಳೂರಲ್ಲಿ ಇಂದು ಪೆಟ್ರೋಲ್,ಡೀಸೆಲ್ ಸಿಗೋಲ್ಲ?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 05 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಮೂಲ ಸೌಕರ್ಯ ಒದಗಿಸಬೇಕೆಂದು ತೈಲ ಸಾಗಣೆ ಟ್ಯಾಂಕರ್ ಚಾಲಕರು ಮುಷ್ಕರ ಆರಂಭಿಸಿದ್ದು, ಬೆಂಗಳೂರು ನಗರಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆ 2.19 ಮತ್ತು ಡೀಸೆಲ್ ಬೆಲೆ 98 ಪೈಸೆ ಏರಿಕೆಯಾಗಿದೆ. ಜನವರಿ ಬಳಿಕ ಪೆಟ್ರೋಲ್ ದರವನ್ನು ಎರಡನೇ ಬಾರಿ, ಡೀಸೆಲ್ ದರವನ್ನು 4ನೇ ಬಾರಿ ಪರಿಷ್ಕರಣೆ ಮಾಡಿದಂತಾಗಿದೆ. [ಮೋದಿ ಸೌದಿ ಭೇಟಿ ಹಿಂದಿನ ಗುಟ್ಟೇನು?]

petrol

ಮಾರ್ಚ್ 17ರಂದು ಪೆಟ್ರೋಲ್ 3.07 ರೂ. ಮತ್ತು ಡೀಸೆಲ್ 1.90 ರೂ. ಏರಿಕೆಯಾಗಿತ್ತು. ಡಾಲರ್ ಮೌಲ್ಯ ಪರಿಷ್ಕರಣೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯೂ ಏರಿಕೆಯಾಗಿದೆ. ಈ ಹೆಚ್ಚಳವನ್ನು ತೈಲ ಕಂಪನಿಗಳು ಗ್ರಾಹಕರ ಮೇಲೆ ಹೇರಿವೆ. [20 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡಿ : ಸಿದ್ದರಾಮಯ್ಯ]

ನಗರದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ : ಬೆಂಗಳೂರು ನಗರದಲ್ಲಿ ಮಂಗಳವಾರದಿಂದ ಪೆಟ್ರೋಲ್, ಡೀಸೆಲ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಮೂಲಸೌಕರ್ಯ ಕಲ್ಪಿಸಿ ಎಂದು ಒತ್ತಾಯಿಸಿ ತೈಲ ಸಾಗಣೆ ಟ್ಯಾಂಕರ್​ ಚಾಲಕರು ಮತ್ತು ಕ್ಲೀನರ್​ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ತೈಲ ಸರಬರಾಜು ಸ್ಥಗಿತಗೊಂಡಿದೆ. [ಭಾರತದಲ್ಲಿ ತೈಲ ದರ ಯಾಕೆ ಇಳಿಯುತ್ತಿಲ್ಲ? ಇಲ್ಲಿದೆ ಉತ್ತರ]

ದೇವನಹಳ್ಳಿ ಮತ್ತು ಹೊಸಕೋಟೆ ಪೆಟ್ರೋಲ್ ಟ್ಯಾಂಕರ್ ಟರ್ವಿುನಲ್​ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಚಾಲಕರು ಮತ್ತು ಕ್ಲೀನರ್‌ಗಳು ಸೋಮವಾರ ರಾತ್ರಿಯಿಂದ ದಿಢೀರ್ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದಾಗಿ ಸೋಮವಾರ ನಗರಕ್ಕೆ ಕೇವಲ 60 ರಿಂದ 70 ಟ್ಯಾಂಕರ್ ತೈಲ ಪೂರೈಕೆಯಾಗಿದೆ.

ಪ್ರತಿಭಟನೆ ನಡೆಸುತ್ತಿರುವ ಚಾಲಕರ ಜೊತೆ ಇಂದು ಬೆಳಗ್ಗೆ ಸಭೆ ನಡೆಯಲಿದ್ದು, ಬೇಡಿಕೆಗೆ ಒಪ್ಪಿಗೆ ಕೊಟ್ಟರೆ ಟ್ಯಾಂಕರ್‌ಗಳು ಸಂಚಾರ ಆರಂಭಿಸಲಿವೆ. ಇಲ್ಲವಾದಲ್ಲಿ, ನಗರದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಎದುರಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Petrol price was on Tuesday, April 5 hiked by Rs 2.19 a liter and diesel by 98 paise per liter.
Please Wait while comments are loading...