ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶನನ್ನು ಪ್ರತಿಷ್ಠಾಪಿಸಬೇಕೆ? ಬಿಬಿಎಂಪಿ ಅನುಮತಿ ಬೇಕೇ ಬೇಕು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಗಣೇಶ ಚತುರ್ಥಿಯು ಇನ್ನೇನು ಬಂದೇಬಿಡುತ್ತೆ, ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದಿದ್ದೀರಾ ಹಾಗಾದರೆ ಈ ಸುದ್ದಿ ಓದಿ

ಇನ್ನುಮುಂದೆ ನಗರದೆಲ್ಲೆಡೆ ಗಣೇಶನನ್ನು ಪ್ರತಿಷ್ಠಾಪಿಸಬೇಕೆಂದರೆ ಬಿಬಿಎಂಪಿಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈಗಾಗಲೇ ಈ ಕುರಿತು ಬಿಬಿಎಂಪಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಘೋಷಿಸಿದೆ. ಇನ್ನುಮುಂದೆ ಮನಸ್ಸಿಗೆ ಬಂದಂತೆ ಎಲ್ಲೆಂದರಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವಂತಿಲ್ಲ. ಎಲ್ಲಿ ಪ್ರತಿಷ್ಠಾಪಿಸಬೇಕಿದ್ದರೂ ಬಿಬಿಎಂಪಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇ ಬೇಕಾಗಿದೆ.

ಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮ

ಬೆಂಗಳೂರಿನಲ್ಲಿ‌ ಭಾಗಶಃ ಬಿಬಿಎಂಪಿ ರಸ್ತೆಗಳಲ್ಲೇ ಪೆಂಡಾಲ್ ಹಾಕಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗಾಗಿ ಪ್ರತಿಷ್ಠಾಪನೆ‌ ಮಾಡುವವರು ಬಿಬಿಎಂಪಿ ಪರ್ಮಿಶನ್ ಪಡೆದು ಬಾಡಿಗೆ ಕಟ್ಟಬೇಕು. ಎಷ್ಟು ಅಗಲ ಪೆಂಡಾಲ್ ಹಾಕುತ್ತಾರೋ ಅಷ್ಟು ಅಗಲ ಜಾಗಕ್ಕೆ ಬಾಡಿಗೆ ಕಟ್ಟಬೇಕು. ಬಿಬಿಎಂಪಿಯು ಒಂದಡಿ ಜಾಗಕ್ಕೆ ಈಗಾಗಲೇ ಬಾಡಿಗೆ ಫಿಕ್ಸ್ ಮಾಡಿದೆ.

Permission mandatory for Ganesha idol installation in Bengaluru

ಬೀದಿಗೆ ಬಿದ್ದಿವೆ ನೀವೇ ಪೂಜೆ ಮಾಡಿದ ಗಜಮುಖಬೀದಿಗೆ ಬಿದ್ದಿವೆ ನೀವೇ ಪೂಜೆ ಮಾಡಿದ ಗಜಮುಖ

ಮೂರು ದಿನಕ್ಕೆ ,ಐದು ದಿನಕ್ಕೆ ,ಏಳು ದಿನಕ್ಕೆ, ಹೀಗೆ ದಿನದ ಲೆಕ್ಕದಲ್ಲಿ ಬಾಡಿಗೆ ಫಿಕ್ಸ್ ಮಾಡಿದೆ ಬಿಬಿಎಂಪಿ. ಒಂದುವೇಳೆ ಪರ್ಮಿಶನ್, ಹಣ ಕಟ್ಟದಿದ್ದರೆ ಗಣೇಶ ಮೂರ್ತಿ ಸೀಜ್ ಮಾಡಲಾಗುತ್ತದೆ. ಬಿಬಿಎಂಪಿ ಈ ಬಾರಿ ಫುಲ್‌ ಸ್ಟ್ರಿಕ್ಟ್‌ ಆಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೂ ಮುಂದಾಗಿದೆ.

English summary
BBMP has made mandatory for taking permission of Ganesha idol installation during this Ganesha celebration. The authority has also fixed minimum rent on installing pendals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X