ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಕ್ರೋಶ್ ದಿವಸಕ್ಕೆ ಕೂಲಾಗಿ ಉತ್ತರಿಸಿದ ಬೆಂಗಳೂರಿಗರು

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 28: ಆಕ್ರೋಶ್ ದಿವಸ್ ಆಚರಿಸಿ ಭಾರತ್ ಬಂದ್ ಮಾಡಬೇಕು ಎಂದು ತೀರ್ಮಾನಿಸಿದ್ದ ರಾಜ್ಯಸರ್ಕಾರ ಕೇವಲ ಪ್ರತಿಭಟನೆ ಮಾಡಿದರೆ ಸಾಕು ಎಂದು ಸುಮ್ಮನಾಗಿದೆ. ಅಕ್ರೋಶ್ ದಿವಸ್ ಏಕೆ ಮಾಡಬೇಕು ನಮಗೇನು ತೊಂದರೆಯಾಗಿಲ್ಲವಲ್ಲ ಎಂದು ಜನರೂ ಪ್ರತಿಕ್ರಿಯಿದ್ದಾರೆ.

ನವೆಂಬರ್ 28 ರಂದು ಅಪನಗದೀಕರಣ ವಿರುದ್ಧ ದೇಶದಲ್ಲಿ ಆಕ್ರೋಶ್ ದಿವಸ್ ಆಚರಿಸಬೇಕು ಎಂದು ಕಾಂಗ್ರೆಸ್ ಕರೆ ನೀಡಿತ್ತು. ಜನರಿಗೆ ಹಣ ಬದಲಾವಣೆ, ಹಣ ಚಲಾವಣೆ ಸೇರಿದಂತೆ ಅನೇಕ ತೊಂದರೆಗಳಾಗಿವೆ. ಹೀಗಾಗಿ ಬಸ್ ಸಂಚಾರ ಸ್ಥಗಿತಗೊಳಿಸಬೇಕು, ಶಾಲಾ ಕಾಲೇಜುಗಳನ್ನು ಮುಚ್ಚಬೇಕು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕು ಎಂದು ಕಾಂಗ್ರೆಸ್ ಹೇಳಿತ್ತು.[ಆಕ್ರೋಶ ದಿವಸದಂದು ಕರ್ನಾಟಕದಲ್ಲಿ ಏನಿರುತ್ತೆ? ಏನಿಲ್ಲ?]

ರಾಜ್ಯದಲ್ಲಿ ಆಕ್ರೋಶ್ ದಿವಸದ ಯಾವ ವಾತಾವರಣವೂ ಕಂಡು ಬಂದಿಲ್ಲ. ಬಸ್‌, ಆಂಗಡಿ, ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕಾಂಗ್ರೆಸ್ ಸರ್ಕಾರ ಮಾತ್ರ ಪ್ರತಿಭಟನೆಗೆ ಮುಂದಾಗಿದೆ. ಜನರ ಬೆಂಬಲವಂತೂ ಇಲ್ಲ ಈ ಬಗ್ಗೆ ಜನರು ಏನಂತಾರೆ ನೋಡೋಣ[ಬಂದ್ ಅಥವಾ ಪ್ರತಿಭಟನೆ: ಒಡೆದ ಪ್ರತಿಪಕ್ಷಗಳಲ್ಲೇ ಗೊಂದಲ]

ಐದು ವರ್ಷಕ್ಕೊಮ್ಮೆ ನೋಟ್ ಬ್ಯಾನ್ ಆಗಲಿ

ಐದು ವರ್ಷಕ್ಕೊಮ್ಮೆ ನೋಟ್ ಬ್ಯಾನ್ ಆಗಲಿ

ಮೋದಿಯವರು ಮಾಡಿದ್ದು ಒಳ್ಳೆಯದೇ ಆಗಿದೆ. ಇದು ಈ ಬಾರಿ ಮಾತ್ರ ಆಗಬಾರದು ಪ್ರತಿ ಐದುವರ್ಷಕ್ಕೆ ಎಲೆಕ್ಷನ್ ಟೈಮಿನಲ್ಲಿ ಅಪನಗದೀಕರಣವಾದರೆ ಒಳ್ಳೆಯದು ಆಗ ಕಪ್ಪು ಹಣ ಯಾರ ಬಳಿಯೂ ಇರುವುದೇ ಇಲ್ಲ. ಪ್ರಸ್ತುತ ಜನರಿಗೆ ತೊಂದರೆಯಾಗುತ್ತಿದೆ. ಸಹನೆಯಿಂದ ಸಕರಿಸಿದರೆ ಮುಂದೆ ಉತ್ತಮ ದಿನ ಬರಲಿದೆ ಎನ್ನುತ್ತಾರೆ ಜಯನಗರದ ನಿವಾಸಿ ಶ್ರೀನಿವಾಸ್,

ಅಭಿವೃದ್ದಿಗಾಗಿ ಎಲ್ಲ, ಬಂದ್ ಬೇಕಿಲ್ಲ

ಅಭಿವೃದ್ದಿಗಾಗಿ ಎಲ್ಲ, ಬಂದ್ ಬೇಕಿಲ್ಲ

ದೇಶದ ಅಭಿವೃದ್ದಿಗಾಗಿ ಮಾಡಿರುವ ಅಪನಗದೀಕರಣ ವೈಯಕ್ತಿಕವಾಗಿ ಒಳ್ಳೆಯದು. ಅಕ್ರೋಶ್ ದಿವಸ್ ಕಾಂಗ್ರೆಸ್ ಬೇಕಿದ್ದರೆ ಮಾಡಿಕೊಳ್ಳಲಿ ಇದಕ್ಕೆ ನಮ್ಮ ಬೆಂಬಲವೇನೂ ಇಲ್ಲ. ಬೆಂಬಲ ನೀಡುವವರು ಕಪ್ಪುಹಣ ಇರುವವರು ಮಾತ್ರ ಎಂದು ಹೇಳುತ್ತಾರೆ ಪ್ರೈವೇಟ್ ಕಂಪನಿ ನೌಕರ ಪ್ರಾನ್ಸಿಸ್.

ನಾವೇನು ಸಮಾಜ ಘಾತುಕರೇ?

ನಾವೇನು ಸಮಾಜ ಘಾತುಕರೇ?

ನಾವೇನು ಸಮಾಜ ಘಾತುಕರೇ? ಕಾಂಗ್ರೆಸ್, ಆಗಲಿ ಬಿಜೆಪಿ ಆಗಲಿ ಯಾವುದೇ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಸಹಕಾರ ನೀಡಬೇಕು. ಅವರು ಮಾಡಿದರು ನಾವು ಮಾಡಲಿಲ್ಲ. ಜನರಿಗೆ ತೊಂದರೆ ಅಂದು ಕೊಂಡರೆ ಹೇಗೆ? ಯಾವುದೇ ಒಳ್ಳೆಯ ಕೆಲಸವನ್ನು ತೊಂದರೆಯಾಗದಂತೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ ಜಯನಗರ ನಂದಿನಿ ಹಾಲಿನ ಮಳಿಗೆ ಯೋಗೇಶ್,

ಆಕ್ರೋಶ್ ದಿವಸದ ಅವಶ್ಯಕತೆಯೇನಿದೆ?

ಆಕ್ರೋಶ್ ದಿವಸದ ಅವಶ್ಯಕತೆಯೇನಿದೆ?

ಬ್ಲಾಕ್ ಮನಿ ಇದ್ದವರು ಮಾತ್ರ ಆಕ್ರೋಶ್ ದಿವಸ್ ಆಚರಿಸಬೇಕು. ನಾವೇಕೆ ಅಚರಿಸಬೇಕು ನೋಟು ಬದಲಾವಣೆಯಿಂದ ನಮಗೇನು ತೊಂದರೆಯೇ ಆಗಿಲ್ಲ. ಅಷ್ಟಕ್ಕೂ ನಮ್ಮಹತ್ತಿರ ಕಪ್ಪು ಹಣ ಎಲ್ಲಿದೆ. ಚಿನ್ನ, ಬೆಳ್ಳಿ ಬಂಗಾರ ಇವೆಲ್ಲಾ ಹೆಚ್ಚು ಹೆಚ್ಚು ಇಟ್ಟುಕೊಳ್ಳಬೇಕೆಂಬ ಆಂಬೋಣ ನಮ್ಮದಲ್ಲ ಎಂಬುದು ಜಯನಗರದ ಬೇಕರಿ ವ್ಯಾಪಾರಿ ರಾಜಾರಾಂ ಮಾತು.

ಬಂದ್ ವಿರುದ್ಧ ಆಟೋ ಚಾಲಕ ಸಮ್ಮತಿ

ಬಂದ್ ವಿರುದ್ಧ ಆಟೋ ಚಾಲಕ ಸಮ್ಮತಿ

ಬಂದ್ ಮಾಡದೇ ಇರೋದೇ ಒಳ್ಳೆಯದು, ನಮಗೆ ಏಕೆ ಬಂದ್ ಮಾಡಬೇಕು ಪ್ರಧಾನಿ ಮೋದಿ ಅವರು ಮಾಡಿರುವುದು ಒಳ್ಳೆಯದಕ್ಕೆ ಹೀಗಾಗಿ ಅವರಿಗೆ ನಮ್ಮ ಸಹಕಾರ ಇದೆ. ಮಿಡ್ಲು ಕ್ಲಾಸ್ ಜನಕ್ಕೆ ತೊಂದರೆಯಾಗಿದೆ ಅನ್ನೋದು ಬಿಟ್ಟರೆ ಬೇರೆ ಯಾವ ವ್ಯತ್ಯಾಸವೂ ಆಗಿಲ್ಲ. ಸರ್ಕಾರ ಪ್ರತಿಭಟನೆ ಮಾಡಲಿ ಹೋಗವವರು ಯಾರು? ಎಂದು ಪ್ರಶ್ನೆ ಮಾಡುತ್ತಾರೆ ಆಟೋ ಚಾಲಕ ರಾಮಣ್ಣ

ಜನರ ಸ್ವಾಗತ, ರಾಜ್ಯ ಸರ್ಕಾರದ ಆಕ್ರೋಶ

ಜನರ ಸ್ವಾಗತ, ರಾಜ್ಯ ಸರ್ಕಾರದ ಆಕ್ರೋಶ

ಕ್ಲೂಮ್ಯಾಕ್ಸ್ ಡಯಾಗ್ನಾಸ್ಟಿಕ್ ಸೆಂಟರಿನ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ್ ಕುಮಾರ್, ಜನರಿಗೆ ಒಳ್ಳೆಯದಾಗ ಬೇಕಾದರೆ ಕೆಲವು ದಿನ ಕಷ್ಟ ಸಹಿಸಿಕೊಳ್ಳಲೇ ಬೇಕು ಆದರೆ ಇದೇ ಸ್ಥಿತಿ ಇರುವುದಿಲ್ಲ. ಜನರಿಗಾಗಿಯೇ ಮಾಡಿರುವ ತೆಗೆದುಕೊಂಡಿರುವ ನಿರ್ಧಾರಕ್ಕೆ ಜನರ ಮಾನ್ಯತೆ ಮತ್ತು ಸಹಭಾಗಿತ್ವ ಮುಖ್ಯ. ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಸರ್ಕಾರ ಮಾತ್ರ ಅದಕ್ಕೆ ವಿರೋಧ ಒಡ್ಡಿದರೆ ಕೇಳುವವರು ಯಾರು?

ಮೋದಿ ನಿರ್ಧಾರ ಕೂಲ್ ಕೂಲ್

ಮೋದಿ ನಿರ್ಧಾರ ಕೂಲ್ ಕೂಲ್

ವಿಜಯ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಮಯೂರ್, ಕಾರ್ತೀಕ್, ರಕ್ಷಿತಾ, ಚೇತನ ಅವರನ್ನು ಮಾತಿಗೆಳೆದರೆ ಮೋದಿಜೀ ಅವರು ನೋಟ್ ಬ್ಯಾನ್ ಮಾಡಿರುವುದಕ್ಕೆ ಬಲವಾದ ಕಾರಣ ಕೊಟ್ಟಿದ್ದಾರೆ.
ನಮಗೂ ಅದರ ಅರಿವಿದೆ. ಕಾರಣ ಇಲ್ಲದೆ ಮಾಡಿದ್ದಿದ್ದರೆ ನಮ್ಮ ಸಹಕಾರ ಇರುತ್ತಿರಲಿಲ್ಲ. ನಮಗೆ ಆಕ್ರೋಶ ದಿವಸ್, ಬಂದ್ ಅಂತ ಅನ್ನಿಸುತ್ತಲೇ ಇಲ್ಲ ನಗರವೆಲ್ಲಾ ಮಾಮೂಲಿನಂತೆಯೇ ಇದೆ ಎನ್ನುವುದು ಅವರ ಅನಿಸಿಕೆ.

ಆಕ್ರೋಶಗೊಂಡ ಪಾಪಮ್ಮ

ಆಕ್ರೋಶಗೊಂಡ ಪಾಪಮ್ಮ

ಕೆ.ಆರ್ ರೋಡ್ ಎ.ಕೆ.ಕಾಲೋನಿಯಲ್ಲಿರುವ ತರಕಾರಿ ವ್ಯಾಪಾರಸ್ಥೆ ಪಾಪಮ್ಮ, ಬಂದ್ ಮಾಡಬೇಕಿತ್ತು. ಇಷ್ಟು ದಿನ ಇಷ್ಟು ಸರ್ಕಾರಗಳು ಉರುಳಿದರೂ ಬಡವರು ಬಡವರೇ ಆಗುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮಗೆ ಆಸೆ ತೋರಿಸಿ ಮೋಸ ಮಾಡುತ್ತಾರೆ. ನಮಗೆ ಮನೆ ಮಠ ಇಲ್ಲ. ಪತಿ ಅನಾರೋಗ್ಯದಿಂದ ಹಾಸಿಗೆ ಇಡಿದಿದ್ದಾರೆ. ಒಂದು ತಿಂಗಳಿನಿಂದ ಈ ನೋಟು ಬ್ಯಾನಿನಿಂದಾಗಿ ವ್ಯಾಪಾರವೇ ಆಗಿಲ್ಲ ಹಾಸಿಗೆ ಹಿಡಿದಿರುವ ಗಂಡನಿಗೆ ಔಷಧ ಕೊಡಿಸುವುದಾದರೂ ಹೇಗೆ, ಜೀವನ ಮಾಡುವುದು ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
Public opinion to Akrosh Diwas in Bengaluru. Opposition have called for nationwide protest against demonetisation by Narendra Modi government on 28th November. But, Bengaluru residents have not shown any interest in participating in the protest. Life is normal in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X