ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಶಿನಾಥ್ ನಿಧನ: ಕಲಾಯೋಗಿಗೆ ಅಭಿಮಾನಿಗಳ ಕಂಬನಿ

|
Google Oneindia Kannada News

Recommended Video

ಕಾಶೀನಾಥ್, ಕನ್ನಡದ ಹಿರಿಯ ನಟ ನಿರ್ದೇಶಕ ವಿಧಿವಶ | Oneindia Kannada

ಚಂದನವನದಲ್ಲಿ ತಮ್ಮದೇ ಆದ ವಿಶಿಷ್ಟ ನಟನಾ ಶೈಲಿಯಿಂದ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದ ಕಾಶಿನಾಥ್(65) ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವೇ.

ಹಲವು ವಿಮರ್ಶಕರಿಂದ 'ಅಶ್ಲೀಲ'ಸಂಭಾಷಣಕಾರ ಎಂದೂ ಟೀಕಿಸಿಕೊಂಡಿದ್ದ ಕಾಶಿನಾಥ್, ಇಂಥ ಟೀಕೆಗಳಿಗೆಲ್ಲ ಎಂದಿಗೂ ತಲೆಕೆಡಿಸಿಕೊಂಡವರಲ್ಲ. ಬದುಕಿನಲ್ಲಿ ದಿನ ದಿನವೂ ನಡೆಯುವ ಚಿಕ್ಕ ಪುಟ್ಟ ಸಂಗತಿಗಳನ್ನು ಹೆಕ್ಕಿ ಚಿತ್ರವಾಗಿಸಿದ ಕಾರಣಕ್ಕೆ ಅವರ ಸಿನೆಮಾಗಳು ಜನಸಾಮಾನ್ಯನಿಗೆ ಹೆಚ್ಚು ಆತ್ಮೀಯ ಎನ್ನಿಸಿದ್ದವು.

ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನು ನೆನಪು ಮಾತ್ರಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನು ನೆನಪು ಮಾತ್ರ

'ಅನುಭವ'ವಿರಬಹುದು, ಅವಳೇ ನನ್ನ ಹೆಂಡ್ತಿ, ಅವನೇ ನನ್ನ ಗಂಡ, ಅನಂತನ ಅವಾಂತರ, ಕಲಿಯುಗ ಕೃಷ್ಣ... ಹೀಗೇ ಪ್ರತಿ ಚಿತ್ರದ ಮೂಲಕವೂ ಸಿನಿ ರಸಿಕರನ್ನು ನಗೆಗಡಲಲ್ಲಿ ಮುಳುಗೇಳಿಸುವ ಕಲೆ, ಕಾಶಿನಾಥ್ ಅವರಿಗೆ ಚೆನ್ನಾಗಿ ಸಿದ್ಧಿಸಿತ್ತು.

ಅವರ ಅಗಲಿಕೆಯ ಸುದ್ದಿ ಕೇಳುತ್ತಿದ್ದಂತೆಯೇ, 'ಹಲವು ತಲೆಮಾರಿಗೆ ನಗುವನ್ನು ಹಂಚಿದ ನಟ, ನಿರ್ದೇಶಕ ಇನ್ನು ನೆನಪು ಮಾತ್ರ' ಎಂದು ಹಲವರು ಕಂಬನಿ ಮಿಡಿದಿದ್ದಾರೆ.

ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಇಂದು (ಜ.18) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

Array

ನಾವು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ!

ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡಿ, ಬೆಳೆಸಿದ ಸರಳ ವ್ಯಕ್ತಿ ಕಾಶಿನಾಥ್ ಅವರು. ಅವರು ಎಂದಿಗೂ ಮತ್ತೊಬ್ಬರಿಂದ ಅನುಕಮಪ ನಿರೀಕ್ಷಿಸಿದವರಲ್ಲ. ಒಟ್ಟಿನಲ್ಲಿ ನಾವೊಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವೀರೇಶ್ ದೇವಿಶೆಟ್ಟಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ

ತುಂಬದಲಾರದ ನಷ್ಟ

ಬಹುಮುಖ ಪ್ರತಿಭೆಯ ನಟ, ನಿರ್ದೇಶಕ ಕಾಶಿನಾಥ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ದಯಪಾಲಿಸಲಿ ಎಂದು ಶ್ರೀರಾಮ್ ಎಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ನಗಲು ಕಲಿಸಿದ ಚೈತನ್ಯ

ಹಲವು ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ! ಕಾಶಿನಾಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸುಧಾರಕ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅಮೂಲ್ಯ ರತ್ನ ಕಳೆದುಕೊಂಡಿದ್ದೇವೆ!

'ಹಿರಿಯ ನಟ, ನಿರ್ದೇಶಕ ಕಾಶಿನಾಥ್ ನಮ್ಮನ್ನಗಲಿದ್ದಾರೆ. ದಶಕಗಳಿಂದ ನಮ್ಮನ್ನು ರಂಜಿಸಿದ ವ್ಯಕ್ತಿ ಇನ್ನಿಲ್ಲ ಎಂಬುದನ್ನು ಊಹಿಸಿಕೊಳ್ಳಲಿಕ್ಕೇ ಅಸಾಧ್ಯ.‌ ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ನಾಡು ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ' ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ ಲಕ್ಷ್ಮಿಕಾಂತ್ ಹಿಂದೊಡ್ಡಿ.

ಕನ್ನಡಿಗರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ!

ನಿಮ್ಮ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಬಹುದೊಡ್ಡ ನಷ್ಟವೇ ಸರಿ. ನಿಮ್ಮ ನಿಧನದ ಸುದ್ದಿ ತಿಳಿದು ತುಂಬಾ ನೋವಾಯಿತು. ಕನ್ನಡಿಗರು ನಿಜಕ್ಕೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ ಅಮನ್ ಮಾಶೆಟ್ಟಿ.

ಆಯಾಮ ಬದಲಿಸಿದ ದಂತಕತೆ

ಕನ್ನಡ ಚಿತ್ರರಂಗದ ಆಯಾಮ ಬದಲಿಸಿದ ದಂತಕತೆ, ಕಾಶಿನಾಥ್ ಅವರು. ಅವರಿಗೆ ನನ್ನ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದಾರ್ಥಾಚಾರಿ.

English summary
Veteran Kannada actor, Director Kashinath(65) passed away on Jan 18th in Shankara Cancer hospital, Chamarajpet Bengaluru. He was suffering from Cancer. Many people offer their sincere condolences to Kashinath's demise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X