ಸಿಎಂ ಯಾತ್ರೆಗೆ ಜನರೇ ಬರುತ್ತಿಲ್ಲ: ದೇವೇಗೌಡ ಟಾಂಗ್

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 30 : ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಜನರು ಬರುತ್ತಿಲ್ಲ. 4 ವರ್ಷಗಳ ಕಾಲ ಸಿಎಂ ಏನು ಮಾಡುತ್ತಿದ್ದರು ಜನರ ವಿಶ್ವಾಸವನ್ನು ಪಡೆದಿಲ್ಲವೇ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪ್ರಶ್ನಿಸಿದ್ದಾರೆ.

ಮಾತು ಹದ್ದು ಮೀರುತ್ತಿದೆ ಎಂದು ಸಿದ್ದುಗೆ ಗುದ್ದು ನೀಡಿದ ದೇವೇಗೌಡರು

ಜೆಡಿಎಸ್ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆ ಪ್ರವಾಸ ಮಾಡುತ್ತಿದ್ದಾರೆ. ಜಿ.ಪರಮೇಶ್ವರ್ ಒಂದು ಕಡೆ ಪ್ರವಾಸ ಮಾಡುತ್ತಿದ್ದಾರೆ ನಮ್ಮದು ಹಾಗಲ್ಲ, ನಾನು, ಕುಮಾರಸ್ವಾಮಿ ಒಟ್ಟಿಗೆ ಪ್ರವಾಸ ಮಾಡುತ್ತೇವೆ ಎಂದರು.

People not responding for CM Yatra: Devegowda defines

ಸಿಎಂ, ಪರಮೇಶ್ವರ್ ಪ್ರವಾಸಕ್ಕೆ ಎಷ್ಟು ಜನ ಸೇರಿದ್ದಾರೆಂದು ನೋಡಿದ್ದೇನೆ. ಅವರದ್ದು ಸರ್ಕಾರಿ ಕಾರ್ಯಕ್ರಮವೋ, ಪ್ರಚಾರ ಕಾರ್ಯಕ್ರಮವೋ ಎಂದು ತಿಳಿಯುವುದಿಲ್ಲ. ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿ ನೋಡೋಣ. ಸಿದ್ದರಾಮಯ್ಯ ಅವರನ್ನೇ ಸಿಎಂ ಎಂದು ಘೋಷಿಸಲಿ ನೋಡೋಣ ಎಂದು ಸವಾಲೆಸೆದರು.

ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಹಾಗಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಬಗ್ಗೆ ಎಲ್ಲಿಯೂ ಲಘುವಾಗಿ ಮಾತನಾಡಿಲ್ಲ. ಮೋದಿಯವರ ಬಗ್ಗೆಯೂ ನಾನು ಮಾತನಾಡಿಲ್ಲ. ನಮ್ಮ ಕೆಲಸ ಬೇರೆ ಇದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Prime minister HD Devegowda has asked chief minister Siddaramaiah that waht he has done for the people in the last four years and also defined that people were not responding for Nava Karnataka Nirmana Yatra.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ