ಬೆಂಗಳೂರಲ್ಲಿ ಇನ್ಮುಂದೆ ನಾಯಿಗೂ ಲೈಸೆನ್ಸ್ ಬೇಕು!

Subscribe to Oneindia Kannada

ಬೆಂಗಳೂರು, ಜನವರಿ20: 'ಇನ್ನು ಮುಂದೆ ಬೆಂಗಳೂರಿನಲ್ಲಿ ನಾಯಿ ಸಾಕುವವರು ಲೈಸನ್ಸ್ ಪಡೆಯಬೇಕು. ಮತ್ತು ಅಪಾರ್ಮೆಂಟುಗಳಲ್ಲಿ ದೊಡ್ಡ ಗಾತ್ರದ ನಾಯಿಗಳನ್ನು ಸಾಕುವಂತಿಲ್ಲ' ಅಂತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಯಮಾವಳಿ ಜಾರಿಗೆ ತಂದಿದೆ.[ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]

ಅಪಾರ್ಟ್ಮೆಂಟುಗಳಲ್ಲಿ ವಾಸಿಸುವ ನಾಗರಿಕರು ದೊಡ್ಡ ಗಾತ್ರದ ಗ್ರೇಟ್ ಡೇನ್, ಇಂಗ್ಲಿಷ್ ಮ್ಯಾಸ್ಟಿಫ್, ಬುಲ್ ಡಾಗ್, ಬಾಕ್ಸರ್, ರಾಟ್ ವೀಲರ್, ಸೈಂಟ್ ಬರ್ನಾರ್ಡ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೀವರ್ ಮುಂತಾದ ನಾಯಿಗಳನ್ನು ಸಾಕುವಂತಿಲ್ಲ ಎಂದು ಬಿಬಿಎಂಪಿ ಹೊಸ ನಿಯಮಾವಳಿ ಜಾರಿಗೊಳಿಸಿದೆ. ಬೆಂಗಳೂರಿನ ಅಪಾರ್ಟ್ಮೆಂಟುಗಳಲ್ಲಿ ಸಾಕಬಹುದಾದ ನಾಯಿಗಳ ಪಟ್ಟಿಯಲ್ಲಿ ಈ ನಾಯಿಗಳ ಹೆಸರನ್ನು ಅದು ಕೈ ಬಿಟ್ಟಿದೆ.[ಬೀದಿ ನಾಯಿ ದತ್ತು ಪಡೆವ ಅಭಿಯಾನಕ್ಕೆ ಭಾರೀ ಸ್ಪಂದನೆ]

People must have license for their pets in Bengaluru!

ಅಷ್ಟೆ ಅಲ್ಲದೆ ವಸತಿ ಸಮುಚ್ಚಯಗಳಲ್ಲಿ ಇರುವವರು ಎರಡು ಮಧ್ಯಮ ಗಾತ್ರದ ನಾಯಿಗಳನ್ನು ಸಾಕುವಂತಿಲ್ಲ. ಒಂದು ಮಾತ್ರ ಸಾಕಬಹುದು ಎಂಬುದಾಗಿಯೂ ನಿಯಮಾವಳಿಯಲ್ಲಿ ಹೇಳಲಾಗಿದೆ.

ಇದರ ಜತೆಗೆ ಬೆಂಗಳೂರಿನಲ್ಲಿ ಸಾಕುವ ನಾಯಿಗಳಿಗೆ ಇನ್ನು ಮುಂದೆ ಲೈಸನ್ಸ್ ಪಡೆಯುವುದನ್ನು ಬಿಬಿಎಂಪಿ ಕಡ್ಡಾಯ ಮಾಡಿದೆ. ಮಾತ್ರವಲ್ಲ ಸಾರ್ವಜನಿಕ ಸ್ಥಳದಲ್ಲಿ ನಾಯಿಗಳು ಮಲ ಮೂತ್ರ ವಿಸರ್ಜನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಹೇಳಿದೆ.[ಬೆಂಗಳೂರಲ್ಲಿ ಮನೆಗೊಂದೇ ಸಾಕು ನಾಯಿ ನಿಯಮ ಜಾರಿಗೆ!]

ಬಿಬಿಎಂಪಿಯ ಈ ನಿಯಮಾವಳಿಗಳಿಂದಾಗಿ ನಗರದಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದುಕೊಳ್ಳಲಾಗಿದೆ.

ಬಿಬಿಎಂಪಿಯ ಈ ನಿಯಮಾವಳಿಯ ಬೆನ್ನಿಗೆ ನಗರದಲ್ಲಿ ಸಾಕಲು ಸಾಧ್ಯವಿಲ್ಲದ ನಾಯಿಗಳನ್ನು ಮಾರಾಟ ಮಾಡುವವರ ಮೇಲೆಯೂ ಬಿಬಿಎಂಪಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಗರದಲ್ಲಿರುವ ಅನಧಿಕೃತನಾಯಿ ತಳಿ ವರ್ಧನೆ ಕೇಂದ್ರಗಳನ್ನು ಮುಚ್ಚಬೇಕು ಎಂದು ಪ್ರಾಣಿದಯಾ ಸಂಘಗಳು ಬೇಡಿಕೆ ಇಟ್ಟಿವೆ. 2016ರ ಕಂಪಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ನಗರದಲ್ಲಿ ಒಟ್ಟು 16 ಅನಧಿಕೃತ ತಳಿ ವರ್ಧನೆ ಕೇಂದ್ರಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BBMP has issued a new set of guidelines forbidding people who live in apartments from raising large dog breeds as pets. And also made it mandatory for people to acquire a license for their pets
Please Wait while comments are loading...