ಬಿಸಿ-ಬಿಸಿ ಕಾಫಿ, ಟೀ ನಾಲಿಗೆ ಜೊತೆ ಜೇಬು ಸುಡುತ್ತೆ!

Posted By:
Subscribe to Oneindia Kannada

ಬೆಂಗಳೂರು, ಜನವರಿ 06 : ಬನ್ನಿ ಕಾಫಿಗೆ ಹೋಗೋಣ...ಎಂದು ಸ್ನೇಹಿತರ ಜೊತೆ ಹೋಟೆಲ್‌ಗೆ ಹೋಗುವ ಮುನ್ನ ಜೇಬು ನೋಡಿಕೊಳ್ಳಿ. ನಂದಿನಿ ಹಾಲಿನ ದರ ಏರಿಕೆಯಾದ ತಕ್ಷಣ ಬೆಂಗಳೂರಿನಲ್ಲಿ ಹೋಟೆಲ್‌ಗಳು ಕಾಫಿ, ಟೀ ದರವನ್ನು ಹೆಚ್ಚಳ ಮಾಡಿವೆ.

ಜನವರಿ 5ರ ಮಂಗಳವಾರದಿಂದ ಜಾರಿಗೆ ಬರುವಂತೆ ಕೆಎಂಎಫ್ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದೆ. ಇದರಿಂದಾಗಿ ಬೆಂಗಳೂರಿನ ಹೋಟೆಲ್‌ಗಳಲ್ಲಿ ಮಾಲೀಕರು ಹೊರೆ ತಪ್ಪಿಸಿಕೊಳ್ಳಲು ಕಾಫಿ, ಟೀ ದರದಲ್ಲಿ 2 ರೂ. ಹೆಚ್ಚಳ ಮಾಡಿದ್ದಾರೆ. [ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?]

coffee

'ಹೋಟೆಲ್‌ಗಳಲ್ಲಿ ದರ ಹೆಚ್ಚಳ ಮಾಡುವ ವಿಚಾರ ಮಾಲೀಕರಿಗೆ ಬಿಟ್ಟಿದ್ದು. ದರ ಏರಿಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ' ಎಂದು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಸುಬ್ರಮಣ್ಯ ಹೊಳ್ಳ ಸ್ಪಷ್ಟಪಡಿಸಿದ್ದಾರೆ. ["ಹಾಲಿನ ದರ ಏರಿಸಿಯೂ ಮೋಸ ಮಾಡುತ್ತಿರುವ ಸರ್ಕಾರ"]

'ಆಯಾ ಹೋಟೆಲ್‌ಗಳ ನಿರ್ವಹಣೆ ಆಧಾರದ ಮೇಲೆ ಕಾಫಿ, ಟೀ ದರವನ್ನು 1 ರಿಂದ 2 ರೂ. ಹೆಚ್ಚಳ ಮಾಡಲಾಗುತ್ತದೆ' ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ಅವರು ಹೇಳಿದ್ದರು.

ಬುಧವಾರದಿಂದಲೇ ಜಾರಿಗೆ ಬರುವಂತೆ ಹೋಟೆಲ್‌ಗಳು ಕಾಫಿ, ಟೀ ದರಗಳನ್ನು ಹೆಚ್ಚಳ ಮಾಡಿವೆ. ಕೆಲವು ಹೋಟೆಲ್‌ಗಳಲ್ಲಿ ಕಾಫಿಯ ಜೊತೆ ಇಡ್ಲಿ, ವಡೆ, ದೋಸೆಗಳ ಬೆಲೆಗಳನ್ನು ಹೆಚ್ಚಳ ಮಾಡಲಾಗಿದೆ. ಎರಡು ಇಡ್ಲಿ ಬೆಲೆ 24 ರಿಂದ 26ಕ್ಕೆ ಏರಿಕೆಯಾಗಿದೆ. 18 ರೂ. ಇದ್ದ ವಡೆ 20ಕ್ಕೆ ಹೆಚ್ಚಾಗಿದೆ. ಉದ್ದಿನ ಬೇಳೆ ಬೆಲೆ ಹೆಚ್ಚಾದಾಗ ಬೆಲೆ ಏರಿಕೆ ಮಾಡಿರಲಿಲ್ಲ. ಈಗ ಕಾಫಿ ಜೊತೆ ಇಡ್ಲಿ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಮಾಲೀಕರು ಸಮರ್ಥನೆ ನೀಡಿದ್ದಾರೆ.

ದರ ಎಷ್ಟು ಹೆಚ್ಚಳವಾಗಿದೆ : ದರ್ಶಿನಿ, ಕಾಫಿ ಬಾರ್‌ಗಳಲ್ಲಿ 16 ರಿಂದ 22ರ ತನಕ ವಿದ್ದ ಕಾಫಿ, ಟೀ ದರ 18 ರಿಂದ 14 ರೂ.ಗಳ ತನಕ ಏರಿಕೆಯಾಗಿದೆ. ಕೆಲವು ಹೋಟೆಲ್‌ಗಳಲ್ಲಿ 14 ರೂ. ಇದ್ದ ಕಾಫಿ, ಟೀ ದರ 16ಕ್ಕೆ ಏರಿಕೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Several darshinis and hotels across the Bengaluru city have increased the price of coffee and Tea price after Karnataka Milk Federation (KMF) hiked milk prices by Rs 4 per liter from January 5, 2016.
Please Wait while comments are loading...