ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಶುಲ್ಕ ಕಟ್ಟಬೇಕು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 01 : ಮೈಸೂರು ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಲು ಶುಲ್ಕ ಪಾವತಿ ಮಾಡಬೇಕು. ಬೈಕ್‌ಗಳಿಗೆ 15 ರೂ., ಕಾರುಗಳಿಗೆ 30 ರೂ. ಶುಲ್ಕ ನಿಗದಿ ಮಾಡಿದ್ದು, ಭಾನುವಾರದಿಂದಲೇ ಶುಲ್ಕ ಪಾವತಿ ಆರಂಭವಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸೈಕಲ್, ಬೈಕ್, ಕಾರುಗಳಿಗೆ ಪಾರ್ಕಿಂಗ್ ಶುಲ್ಕಗಳನ್ನು ವಸೂಲಿ ಮಾಡಲು ಆರಂಭಿಸಿದೆ. ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದ ಸುತ್ತ-ಮುತ್ತ ಎರಡು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯವಿದ್ದು, 1,700 ಬೈಕ್ ಮತ್ತು 250 ಕಾರುಗಳನ್ನು ನಿಲ್ಲಿಸಲು ಅವಕಾಶವಿದೆ.[ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ 6 ನಿಮಿಷಕ್ಕೊಂದು ರೈಲು]

namma metro

ಪ್ರತಿನಿತ್ಯ ಮೈಸೂರು ರಸ್ತೆ (ನಾಯಂಡಹಳ್ಳಿ)-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸುಮಾರು 1 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಇವರಲ್ಲಿ ಅಧಿಕ ಜನರು ಮೈಸೂರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ನಂತರ ಮೆಟ್ರೋದಲ್ಲಿ ತೆರಳುತ್ತಾರೆ. ಪಾರ್ಕಿಂಗ್ ಶುಲ್ಕ ಪಾವತಿ ಮಾಡುವುದರಿಂದ ಮೆಟ್ರೋ ಸವಾರರಿಗೆ ಹೊರೆಯಾಗಲಿದೆ.[ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭ]

ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದ ಮೆಟ್ರೋ ಸಂಚಾರ ದರ 40 ರೂ., ಜನರು ಕಾರನ್ನು ದಿನಪೂರ್ತಿ ನಿಲ್ದಾಣದಲ್ಲಿ ಬಿಟ್ಟು ಮೆಟ್ರೋದಲ್ಲಿ ಸಂಚಾರ ನಡೆಸಿದರೆ 40 ರೂ. ಮೆಟ್ರೋ ದರದ ಜೊತೆ 60 ರೂ. ಪಾರ್ಕಿಂಗ್ ಶುಲ್ಕ ಪಾವತಿ ಮಾಡಬೇಕು.[ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ]

ಪಾರ್ಕಿಂಗ್ ಶುಲ್ಕಗಳು

* ಸೈಕಲ್ - 1 ರೂ.(4 ತಾಸು), 10 ರೂ. (ದಿನದ ಶುಲ್ಕ)
* ಬೈಕ್ - 15 ರೂ. (4 ತಾಸು), 30 ರೂ. (ದಿನದ ಶುಲ್ಕ)
* ಕಾರು - 30 ರೂ. (4 ತಾಸು), 60 ರೂ. (ದಿನದ ಶುಲ್ಕ)
* ಎಲ್‌ಸಿವಿ - 75 ರೂ. (4 ತಾಸು), 150 ರೂ. (ದಿನದ ಶುಲ್ಕ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Now you should pay money to park vehicles at Mysuru road Namma Metro station. The station can accommodate 1,700 two-wheelers and 250 four-wheelers.
Please Wait while comments are loading...