ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ನೌಕರರ ವೇತನ ಶೇ.30 ರಷ್ಟು ಹೆಚ್ಚಳಕ್ಕೆ ಆಯೋಗ ಶಿಫಾರಸು

|
Google Oneindia Kannada News

ಬೆಂಗಳೂರು, ಜನವರಿ 31 : ಸುಮಾರು 5.20 ಲಕ್ಷ ಸರ್ಕಾರಿ ನೌಕರರ ವೇತನ ಶೇ. 30 ರಷ್ಟು ಹೆಚ್ಚಳ ಮಾಡುವಂತೆ 6 ನೇ ವೇತನ ಆಯೋಗದ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಎಂ.ಆರ್.ಶ್ರೀನಿವಾಸ್ ಮೂರ್ತಿ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಸರ್ಕಾರ ರಚಿಸಿದ್ದ ಆರನೇ ವೇತನ ಆಯೋಗ ತನ್ನ ವರದಿಯ ಮೊದಲ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು.

6ನೇ ವೇತನ ಆಯೋಗ ವರದಿ ಸಲ್ಲಿಕೆ: ಭರ್ಜರಿ ಕೊಡುಗೆ ನಿರೀಕ್ಷೆ6ನೇ ವೇತನ ಆಯೋಗ ವರದಿ ಸಲ್ಲಿಕೆ: ಭರ್ಜರಿ ಕೊಡುಗೆ ನಿರೀಕ್ಷೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 10,208 ಕೋಟಿ ಹೆಚ್ಚಿನ ಹೊರೆಯಾಗಲಿದೆಆಯೋಗದ ವರದಿ ಪರಿಶೀಲಿಸಿ ಜಾರಿಗೆ ಕ್ರಮ ಕೈಗೊಳ್ಳುತ್ತೇವೆ, ವರದಿಯ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಬಳಿಕ ಅಧಿವೇಶನದಲ್ಲಿ ಘೋಷಣೆ ಮಾಡುತ್ತೇವೆ. ಎಂದರು.

Pay Commission recommends 30percent hike for govt employees

ವೇತನದಲ್ಲಿನ ಈ ಹೆಚ್ಚಳವು ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ ಮತ್ತು ಪದವಿ ಶಿಕ್ಷಣ ವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73,000 ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ.

ವರದಿಯಲ್ಲಿ ರಾಜ್ಯ ಸರ್ಕಾರದ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಸ್ಥಳೀಯ ಸಂಸ್ಥೆಗಳ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ 2017ರ ಜುಲೈ 1 ರಿಂದ ಜಾರಿಗೆ ಬರುವಂತೆ ಪಿಂಚಣಿ ಶೇ.30 ರಷ್ಟು ಹೆಚ್ಚಳ ಮಾಡಲು ಆಯೋಗವು ಶಿಫಾರಸು ಮಾಡಿದೆ. ಇದು ಸುಮಾರು5.73 ಲಕ್ಷ ಪಿಂಚಣಿದಾರರು ಮತ್ತು ಕುಟುಂಬಕ್ಕೆ ಲಾಭದಾಯಕವಾಗುತ್ತದೆ.

ಸಿದ್ದು ಸರ್ಕಾರದಿಂದ ಪ್ರಬಲ ಅಸ್ತ್ರ, ಸರ್ಕಾರಿ ನೌಕರರ ವೇತನ ಹೆಚ್ಚಳ?ಸಿದ್ದು ಸರ್ಕಾರದಿಂದ ಪ್ರಬಲ ಅಸ್ತ್ರ, ಸರ್ಕಾರಿ ನೌಕರರ ವೇತನ ಹೆಚ್ಚಳ?

ಪರಿಷ್ಕರಣೆ ನಂತರ, ಪರಿಷ್ಕೃತವೇತನ ಶ್ರೇಣಿಗಳಲ್ಲಿ ಕನಿಷ್ಠ ವೇತನವು 17 ಸಾವಿರ ರೂ ಮತ್ತು ಗರಿಷ್ಠ ವೇತನವು1,50,600 ಮತ್ತು ಭತ್ಯೆಗಳು ಇರಲಿದೆ. ಕನಿಷ್ಠ ಪಿಂಚಣಿ ಮಾಹೆಯಲ್ಲಿ 8,500 ರೂ ಗರಿಷ್ಠ ಪಿಂಚಣಿ ಮಾಹೆಯಾನ 75,300ರಷ್ಟು ತುಟ್ಟಿ ಭತ್ಯೆ, ಕುಟುಂಬ ಪಿಂಚಣಿಯ ಗರಿಷ್ಠ ಮಿತಿಯು ಮಾಹೆಯಾನ 45,180 ತುಟ್ಟಿ ಭತ್ಯೆ ಇರಲಿದೆ.

English summary
State sixth pay commission headed by former IAS officer MR srinivas murthy has been recommended 30 percent hike for state employees salary effective from July 1,2017. The commission has been submitted report chief minister Siddaramaiah on Wednesday at CM's residence office Krishna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X