ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಸ್ತೆಯಲ್ಲಿ ವಾಹನ ಪಾರ್ಕ್ ಮಾಡೋದಾದ್ರೆ ಹಣ ತೆರಬೇಕಾಗುತ್ತೆ!

ಪಾರ್ಕಿಂಗ್ ಸಂಬಂಧಿಸಿದಂತೆ ಇದೀಗ ಪೇ ಅಂಡ್ ಪಾರ್ಕ್ ಪದ್ಧತಿಯನ್ನು ಬಿಬಿಎಂಪಿ ಮತ್ತೊಮ್ಮೆ ಪರಿಚಯಿಸುತ್ತಿದೆ. ಈ ಮೊದಲೇ ಚಾಲ್ತಿಯಲ್ಲಿದ್ದ ಈ ಪದ್ಧತಿ ಪಾರ್ಕಿಂಗ್ ಮಾಫಿಯಾಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಇದನ್ನು 2005 ರಲ್ಲಿ ನಿಲ್ಲಿಸಲಾಗಿತ್ತು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 17: ಬೆಂಗಳೂರಿನ ಬಹುದೊಡ್ಡ ಸಮಸ್ಯೆಗಳಲ್ಲಿ ಪಾರ್ಕಿಂಗ್ ಕೂಡ ಒಂದು. ಮಾರ್ಕೆಟ್ ನಲ್ಲಿ ಹತ್ತು ನಿಮಿಷದ ಕೆಲಸವಿದ್ದರೆ, ನಿಮ್ಮ ವಾಹನ ಪಾರ್ಕ್ ಮಾಡುವುದಕ್ಕೆ ಅರ್ಧ ಗಂಟೆ ವ್ಯಯಿಸಬೇಕಾದ ಅನುಭವ ಹಲವರಿಗೆ ಈಗಾಗಲೇ ಆಗಿರಬಹುದು.

ಪಾರ್ಕಿಂಗ್ ಸಂಬಂಧಿಸಿದಂತೆ ಇದೀಗ ಪೇ ಅಂಡ್ ಪಾರ್ಕ್ ಪದ್ಧತಿಯನ್ನು ಬಿಬಿಎಂಪಿ ಮತ್ತೊಮ್ಮೆ ಪರಿಚಯಿಸುತ್ತಿದೆ. ಇದಕ್ಕೂ ಮೊದಲೂ ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕ್ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ ಈ ಪದ್ಧತಿ ದುರುಪಯೋಗವಾಗಿ ಪಾರ್ಕಿಂಗ್ ಮಾಫಿಯಾಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ 2005 ಏಪ್ರಿಲ್ 1 ರಿಂದ ಈ ಪದ್ಧತಿಯನ್ನು ನಿಲ್ಲಿಸಲಾಗಿತ್ತು.[1200 ಚದರ ಅಡಿಯಲ್ಲಿ ಕಟ್ಟಿದ ಮನೆಯೂ ಸಕ್ರಮವಾಗಲಿದೆ!]

Pay and Park system will be reintroducing by BBMP soon

ಇದೀಗ ಮತ್ತೆ ಈ ಪದ್ಧತಿಯನ್ನು ಜಾರಿಗೆ ತರಲು ಸರ್ಕಾರ ಚಿಂತಿಸಿದೆ. ಬೆಂಗಳೂರಿನ ಒಟ್ಟು 85 ರಸ್ತೆಗಳಲ್ಲಿ ಪಾರ್ಕಿಂಗ್ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಪ್ರೀಮಿಯಂ ಸ್ಟ್ರೀಟ್ ಪಾರ್ಕಿಂಗ್ (ದ್ವಿಚಕ್ರ ಸವಾರರಿಗೆ 15, ನಾಲ್ಕು ಚಕ್ರದ ವಾಹನ ಸವಾರರಿಗೆ 30), ನಾರ್ಮಲ್ ಸ್ಟ್ರೀಟ್ ಪಾರ್ಕಿಂಗ್ (ದ್ವಿಚಕ್ರ ಸವಾರರಿಗೆ 10, ನಾಲ್ಕು ಚಕ್ರದ ವಾಹನ ಸವಾರರಿಗೆ 20), ಮಿಯರ್ಲಿ ಸ್ಟ್ರೀಟ್ ಪಾರ್ಕಿಂಗ್ (ದ್ವಿಚಕ್ರ ಸವಾರರಿಗೆ 05 ನಾಲ್ಕು ಚಕ್ರದ ವಾಹನ ಸವಾರರಿಗೆ 15) ಎಂದು ಮೂರು ವಿಭಾಗ ಮಾಡಲಾಗಿದೆ.

ಪೆ ಅಂಡ್ ಪಾರ್ಕ್ ಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಕರೆದಿದ್ದು, ಪಾರ್ಕಿಂಗ್ ಸ್ಥಳಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಇದರಿಂದಾಗಿ ವಾಹನ ಕಳ್ಳತನದಂಥ ಪ್ರಕರಣಗಳೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿವೆ.

English summary
Pay and Park system will be reintroducing by BBMP soon. The system will be applicable to 85 roads in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X