ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್‌ 1ರಿಂದ ಬೆಂಗಳೂರಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ನಗರದಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಮಾರ್ಚ್ 1ರಿಂದ ಜಾರಿಗೆ ತರಲು ನಿರ್ಧರಿಸಿದೆ. ಪ್ರಾಯೋಗಿಕವಾಗಿ 56 ರಸ್ತೆಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ.

ಬೆಂಗಳೂರು ನಗರದ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ನಿಯಮ ಜಾರಿಗೆ ತರಲು ಪಾಲಿಕೆ ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿತ್ತು. 4 ಕಂಪನಿಗಳು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದು, ಮುಂದಿನವಾರದಲ್ಲಿ ಟೆಂಡರ್ ಅಂತಿಮಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. [ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ : ಎಲ್ಲಿ, ಏನು?]

pay and park

ಟೆಂಡರ್ ಪಡೆಯುವ ಕಂಪನಿ 56 ರಸ್ತೆಗಳಲ್ಲಿ 2,500 ಕಾರು ಮತ್ತು 4000 ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಿದೆ. ನಿಯಮ ಜಾರಿಗೆ ಬರಲಿರುವ ರಸ್ತೆಗಳಲ್ಲಿ ಸಿಸಿಟಿವಿ ಆಳವಡಿಸಲಾಗುತ್ತದೆ. ಎಲೆಕ್ಟ್ರಾನಿಕ್ ಬೋರ್ಡ್‌ಗಳಲ್ಲಿ ಪಾರ್ಕಿಂಗ್ ಲಭ್ಯತೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. [ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಮೊಬೈಲ್ ಅಪ್ಲಿಕೇಶನ್]

ಹಿಂದೆಯೇ ಜಾರಿಗೆ ಬರಬೇಕಿತ್ತು : ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಪೇ ಅಂಡ್ ಪಾರ್ಕ್ ನೀತಿಯನ್ನು ರೂಪಿಸಿತ್ತು. 2015ರಲ್ಲಿಯೇ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿತ್ತು. ಜನವರಿಯಿಂದ ಈ ನಿಯಮ ಜಾರಿಗೆ ಬರಬೇಕಿತ್ತು. ಸದ್ಯ, ಮಾರ್ಚ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. [ಸಂಚಾರ ನಿಯಮ ಮುರಿದು ಪೊಲೀಸರಿಗೆ ಧಮ್ಕಿ ಹಾಕಿದ್ರೆ ಜೈಲೂಟ!]

ಪೇ ಅಂಡ್ ಪಾರ್ಕ್ ವ್ಯವಸ್ಥೆಗಾಗಿ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ), ಸಿ (ಸಾಮಾನ್ಯ) ಎಂದು ವಿಂಗಡನೆ ಮಾಡಲಾಗಿದೆ. ಎಲ್ಲಾ ರಸ್ತೆಗಳಿಗೂ ಪ್ರತ್ಯೇಕ ಶುಲ್ಕ ಜಾರಿ ಮಾಡಲಾಗುತ್ತದೆ. ಎ ಶ್ರೇಣಿಯ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು 1 ಗಂಟೆ ನಿಲ್ಲಿಸಲು 15 ರೂ., ಕಾರನ್ನು ಒಂದು ಗಂಟೆ ನಿಲ್ಲಿಸಲು 30 ರೂ. ಪಾವತಿ ಮಾಡಬೇಕು. [ಸಮ-ಬೆಸ ಸೂತ್ರದ ವಾಹನ ಸಂಚಾರ ಬೆಂಗಳೂರಿಗೆ ಬರಲಿ]

'ಎ' ಶ್ರೇಣಿಯ ರಸ್ತೆಗಳು : 'ಎ' ಶ್ರೇಣಿಯ ರಸ್ತೆಗಳ ವ್ಯಾಪ್ತಿಗೆ ಅವೆನ್ಯೂ ರಸ್ತೆ, ಎಸ್‌.ಸಿ.ರಸ್ತೆ, ರೇಸ್ ಕೋರ್ಸ್ ಲೂಪ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಕಮರ್ಷಿಯಲ್ ಸ್ಟೀಟ್, ಎಂ.ಜಿ.ರೋಡ್, ಬ್ರಿಗೇಡ್ ರೋಡ್, ರಾಜಾರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರಬಾ ರಸ್ತೆ, ಲಾಲ್ ಬಾಗ್ ರಸ್ತೆ, ಎನ್‌.ಆರ್.ರಸ್ತೆ ಸೇರಲಿವೆ.{blurb}

English summary
Bruhat Bengaluru Mahanagara Palike (BBMP) all set to re-introduce pay and parking facility in city from March 1, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X