ಅಮಾನತುಗೊಂಡ ಬಿಬಿಎಂಪಿ ಎಂಜಿನಿಯರ್ ಗಳು ಸದ್ದಿಲ್ಲದೆ ಹಾಜರ್

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06 : ಬೆಂಗಳೂರಿನ ಗುಳಿ ಬಿದ್ದ ರಸ್ತೆಗಳ ತಗ್ಗುಗಳನ್ನು ಮುಚ್ಚಲು ಮುಗಿದು ಹೋಗಿದ್ದ ಡೆಡ್ ಲೈನ್ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ನಾಲ್ವರು ಸಹಾಯಕ ಎಂಜಿನಿಯರ್ ಗಳು ಸದ್ದಿಲ್ಲದೆ ಕೆಲಸಕ್ಕೆ ಹಾಜರಾಗಿದ್ದಾರೆ.

ರಸ್ತೆಗುಂಡಿ ಮುಚ್ಚದ ಬಿಬಿಎಂಪಿ ಮೂವರು ಇಂಜಿನಿಯರ್ ಅಮಾನತು

ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ 6ಕ್ಕೆ ಗಡುವು ಮುಗಿದಿತ್ತು ಆದರೂ ಕೆಲಸ ಮುಗಿಯದ ಕಾರಣ ಮೇಯರ್ ಸಂಪತ್ ರಾಜ್ ಅವರು ನವೆಂಬರ್ 7 ರಂದು ಸಹಾಯಕ ಎಂಜಿನಿಯರ್ ಗಳಾದ ಸಿವಿ ರಾಮನ್ ನಗರ ವಲಯದ ಅಮೃತ್ ಕುಮಾರ್ ಸೌಳಂಕಿ ಹಾಗೂ ಶಿವಾಜಿನಗರ ಉಪ ವಿಭಾಗದ ಎಂಜಿನಯರ್ ಶೈಫುದ್ದೀನ್, ಬಾಣಸವಾಡಿ ಎಂಜಿನಿಯರ್ ಮಲ್ಲಿನಾಥ ಮಲ್ಕಾಪುರ, ಮೂಲಸೌಕರ್ಯ ವಿಭಾಗದ ಬಿಜ್ಜಳರಾಜ ಅವರನ್ನುಎನ್ನುವವರನ್ನು ಅಮಾನತು ಮಾಡುವಂತೆ ಎರಡು ದಿನಗಳ ಬಳಿಕ ಪ್ರಸ್ತಾವ ಸಲ್ಲಿಸಿದ್ದರು.

Pathole deadline:Suspended Engineers safe now

ಇದೀಗ ಎಂಜಿನಿಯರ್ ಗಳ ಅಭಾವವಿರುವ ಕಾರಣ ಪ್ರಸ್ತಾವವನ್ನು ತಳ್ಳಿಹಾಕಿ ಎಂಜಿನಿಯರ್ ಗಳನ್ನು ಪುನಹ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಲಾಗಿದೆ. ಕೌನ್ಸಿಲ್ ಸದಸ್ಯರು ಎಂಜಿನಿಯರ್ ಗಳ ಅಭಾವವಿದೆ ಯಾವ ಕೆಲಸವೂ ಪೂರ್ಣವಾಗುತ್ತಿಲ್ಲ ಎಂದು ದೂರಿದ್ದರು. ಹಾಗೆಯೇ ಆಡಳಿತ ಮಂಡಳಿಯು ಅಮಾನತು ಅದೇಶವನ್ನು ತಳ್ಳಿಹಾಕಿದ್ದಾರೆ. ಇದರ ಪರಿಣಾಮ ಎಂಜಿನಿಯರು ಗಳನ್ನು ಹಿಂಡಪಡೆಯಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಆನಂದ್ ರಾವ್ ವೃತ್ತದಲ್ಲಿ ಸಾಕಷ್ಟು ಗುಂಡಿಗಳಿದ್ದವು. ಎಂಜಿನಿಯರ್ ಬಾಲ್ ರಾಜ್ ಅದನ್ನು ವೀಕ್ಷಣೆ ಕೂಡ ಮಾಡಿದ್ದರು. ಆದರೆ ಉನ್ನತ ಅಧಿಕಾರಿಗಳು ತಕ್ಷಣವೇ ಆ ಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದರು ಆದರೆ ಆದೇಶ ಪಾಲಿಸುವುದರಲ್ಲಿ ಬಾಲ ರಾಜ್ ಸೋತಿದ್ದರು. ಹಾಗಾಗಿ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಒತ್ತಾಯಿಸಲಾಯಿತು. ನಂತರ ಬಾಲ್ ರಾಜ್ ಅವರನ್ನು ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಗೆ ವರ್ಗಾವಣೆ ಮಾಡಲಾಗಿದೆ ಅಕ್ಟೋಬರ್ 21ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದು ಅಧಿಕಾರಿ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Four BBMP Engineers who were to be shown the door for missing the deadline are back at work beacause of Staff shortage. BBMP is quite leterally unmoved the four assistant engineers who were to be suspended for missing the November 6deadline to fill up the pathholes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ