ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರು ವಾರ್ಡ್ ಮಾದರಿ ಫುಟ್‌ಪಾತ್‌ಗೆ ನಿರ್ವಹಣೆ ಸಮಸ್ಯೆ

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19 : ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಫುತ್‌ ಪಾತ್ ವಾಹನ ನಿಲ್ಲಿಸುವ ಸ್ಥಳವಾಗಿದೆ. ಪಾದಚಾರಿಗಳಿಗಿಂತ ಹೆಚ್ಚಾಗಿ ವಾಹನ ಸವಾರರೇ ಅದನ್ನು ಬಳಸುತ್ತಾರೆ. ಆದರೆ, ಜಯನಗರದಲ್ಲಿ ಮಾದರಿ ಫುಟ್ ಪಾತ್ ಇದೆ. ಆದರೆ, ಅದು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಯಡಿಯೂರು ವಾರ್ಡ್‌ನ ಪಟಾಲಮ್ಮ ದೇವಾಲಯದ ರಸ್ತೆಯಲ್ಲಿರುವ ಫುಟ್‌ ಪಾತ್ ನಗರಕ್ಕೆ ಮಾದರಿ. ಇಲ್ಲಿನ ಫುಟ್ ಪಾತ್‌ಗಳಲ್ಲಿ ಮಳೆ ನೀರು ಇಂಗುವ ವ್ಯವಸ್ಥೆ ಇದೆ. ಪಾದಚಾರಿ ಮಾರ್ಗದ ತುಂಬಾ ಗಿಡಗಳಿದ್ದು, ನೋಡಲು ಸುಂದರವಾಗಿದೆ. ವಾಹನ ಸವಾರರು ಫುಟ್ ಪಾತ್ ಹತ್ತದಂತೆ ಗ್ರಿಲ್ ಅಳವಡಿಸಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಜಯನಗರದ ಮಾದರಿ ಫುಟ್ ಪಾತ್ ನೋಡಿದ್ರಾಜಯನಗರದ ಮಾದರಿ ಫುಟ್ ಪಾತ್ ನೋಡಿದ್ರಾ

Patalamma temple road footpath poor maintenance

ಸೌತ್ ಎಂಡ್ ವೃತ್ತದಿಂದ ಜಯನಗರ 3ನೇ ಬ್ಲಾಕ್ ಸಿಗ್ನಲ್ ತನಕದ ರಸ್ತೆಯಲ್ಲಿರುವ ಫುಟ್ ಪಾತ್ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಫುಟ್‌ ಪಾತ್ ಮೇಲೆ ನೀವು ನಡೆದು ಹೊರಟರೆ ಕೆಲವು ದೂರ ಸಾಗಿ ಪುನಃ ರಸ್ತೆಗಿಳಿಯಬೇಕು. ಫುಟ್ ಪಾತ್ ಮೇಲೆ ಸಾಗುವಾಗ ಅಲ್ಲಲ್ಲಿ ಅಡಚಣೆ ಉಂಟಾಗುತ್ತದೆ.

ಪುಟ್‌ಪಾತ್ ಮೇಲಿನ ಗೂಡಂಗಡಿ ತೆರವಿಗೆ ವಿನೂತನ ಪ್ರತಿಭಟನೆಪುಟ್‌ಪಾತ್ ಮೇಲಿನ ಗೂಡಂಗಡಿ ತೆರವಿಗೆ ವಿನೂತನ ಪ್ರತಿಭಟನೆ

ಪಾದಚಾರಿ ಮಾರ್ಗದ ತುಂಬಾ ಕಾಲಿಗೆ ಅಡ್ಡದಾಗಿ ಗಿಡಗಳು ಸಿಗುತ್ತವೆ. ಗಿಡಗಳನ್ನು ಸರಿಯಾಗಿ ಕತ್ತರಿಸಿಲ್ಲ, ಅವುಗಳ ಮಧ್ಯೆ ಎರಡು ದಿನ ಹಾವುಗಳನ್ನು ನೋಡಿದ್ದೇನೆ ಎನ್ನುತ್ತಾರೆ ದಿನಾ ಆ ಮಾರ್ಗದಲ್ಲಿ ಕಚೇರಿಗೆ ಸಾಗುವ ಕೆಲವರು. ಆದ್ದರಿಂದ, ಅವರು ಫುಟ್ ಪಾತ್ ಬಿಟ್ಟು ರಸ್ತೆಯಲ್ಲಿ ನಡೆಯುತ್ತಾರೆ.

Patalamma temple road footpath poor maintenance

ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಪಾದಚಾರಿ ಮಾರ್ಗದಲ್ಲಿ ಮರದ ರೆಂಬೆಗಳು ಬಿದ್ದಿವೆ. ಮಾರ್ಗದಲ್ಲಿ ಅಲ್ಲಲ್ಲಿ ಮಣ್ಣಿನ ಗುಡ್ಡೆಗಳು ಕಾಲಿಗೆ ಅಡ್ಡವಾಗುತ್ತವೆ. ಸೌತ್ ಎಂಡ್ ಸರ್ಕಲ್‌ನಿಂದ 3ನೇ ಬ್ಲಾಕ್ ಸಿಗ್ನಲ್ ತನಕ ಜನರು ಪಾದಚಾರಿ ಮಾರ್ಗದಲ್ಲಿ ಸಂಚಾರ ನಡೆಸುವುದು ಅಸಾಧ್ಯ. ಕೆಲವು ಕಡೆ ರಸ್ತೆಗೆ ಇಳಿಯುವುದು ಅನಿವಾರ್ಯ.

ಮಾದರಿ ಫುಟ್ ಪಾತ್ : ಯಡಿಯೂರು ವಾರ್ಡ್‌ನಲ್ಲಿರುವ ಈ ಪಾದಚಾರಿ ಮಾರ್ಗ ನಗರದ ಇತರ ಪ್ರದೇಶಗಳಿಗೆ ಮಾದರಿ. ಸುಮಾರು ಮುಕ್ಕಾಲು ಕಿ.ಮೀ.ತನಕ ಈ ಫುಟ್‌ ಪಾತ್ ಇದೆ. ಐದು ಅಡಿ ಅಗಲದ ಫುಟ್‌ಪಾತ್‌ ಅನ್ನು ಮೂರು ಅಡಿಗೆ ಸೀಮಿತಗೊಳಿಸಲಾಗಿದೆ. ಎರಡು ಅಡಿ ಜಾಗದಲ್ಲಿ ನೀರು ಇಂಗಲು ವ್ಯವಸ್ಥೆ ಮಾಡಲಾಗಿದೆ. ಇಂತಹ ಉತ್ತಮ ವ್ಯವಸ್ಥೆ ಇರುವ ಪಾದಚಾರಿ ಮಾರ್ಗ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.

Patalamma temple road footpath poor maintenance

ಈ ಫುಟ್‌ಪಾತ್ ಯಡಿಯೂರು ವಾರ್ಡ್ ವ್ಯಾಪ್ತಿಗೆ ಬರುತ್ತಿದ್ದು ಪೂರ್ಣಿಮಾ ರಮೇಶ್ ಈ ವಾರ್ಡ್‌ನ ಬಿಬಿಎಂಪಿ ಸದಸ್ಯರು. ಬಿಬಿಎಂಪಿ ಸಿಬ್ಬಂದಿಯಾಗಲಿ, ವಾರ್ಡ್‌ನ ಬಿಬಿಎಂಪಿ ಸದಸ್ಯರಾಗಲಿ ಇತ್ತ ಗಮನ ಹರಿಸುತ್ತಾರೆಯೇ? ಕಾದು ನೋಡಬೇಕು. ಮಾದರಿ ಫುಟ್ ಪಾತ್ ಮಾದರಿಯಾಗಿಯೇ ಉಳಿಯಲಿ.

ಯಡಿಯೂರು ವಾರ್ಡ್ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್ ಅವರ ದೂರವಾಣಿ ಸಂಖ್ಯೆ 9880011999.

English summary
Bengaluru Yediyur ward Patalamma temple road footpath model for the city. It is a first ever green footpath of the city, The footpath functions as rainwater harvesting platform. Now footpath maintenance is very poor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X