ಆನ್ ಲೈನ್ ನಲ್ಲೇ ಪಾಸ್ ಪೋರ್ಟ್ ವೇರಿಫಿಕೇಷನ್!

Posted By:
Subscribe to Oneindia Kannada

ಬೆಂಗಳೂರು, ಮೇ 09: ಇಡೀ ದೇಶಕ್ಕೆ ಎಂ ಆಡಳಿತದ ರುಚಿ ತೋರಿಸಿದ ಕರ್ನಾಟಕ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಪಾಸ್ ಪೋರ್ಟ್ ವೆರಿಫಿಕೇಷನ್ ಈಗ ಆನ್ ಲೈನ್ ಮೂಲಕವೇ ನಡೆಯಲಿದ್ದು, 10 ದಿನದೊಳಗೆ ಪಾಸ್ ಪೋರ್ಟ್ ಕೈ ಸೇರುವ ವ್ಯವಸ್ಥೆ ಜಾರಿಗೆ ಬರಲಿದೆ.

ಅಭ್ಯರ್ಥಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ 10 ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಅರ್ಜಿ ಸಲ್ಲಿಸಿ 3 ದಿನಗಳೊಳಗಾಗಿ ಅಭ್ಯರ್ಥಿಗೆ ಸಚಿವಾಲಯದೊಂದಿಗೆ ಮಾತನಾಡಲು ಅವಕಾಶ ದೊರೆಯುತ್ತದೆ. [10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ]

ಉಳಿದ 7 ದಿನಗಳಲ್ಲಿ ಪಾಸ್ ಪೋರ್ಟ್ ಕೈ ಸೇರುತ್ತದೆ. ಬೆಂಗಳೂರು ಪೊಲೀಸರು, ಈಗ ಆನ್ ಲೈನ್ ಮೂಲಕ ವೆರಿಫಿಕೇಶನ್ ಮಾಡಲು ಮುಂದಾಗಿದ್ದು, ವಿದೇಶಾಂಗ ಸಚಿವಾಲಯ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮೂಲಕ ಅಭ್ಯರ್ಥಿಯ ವಿವರಗಳನ್ನು ಆನ್ ಲೈನ್ ಗೆ ಸೇರಿಸಲಾಗುತ್ತದೆ.

KSR Charan Reddy

'ಎಂ ಪಾಸ್ ಪೋರ್ಟ್ ಪೊಲೀಸ್ ಆಪ್' ಮೂಲಕ ಪಾಸ್ ಪೋರ್ಟ್ ವೆರಿಫಿಕೇಷನ್ ಪ್ರಕ್ರಿಯೆ ಸರಳ ಹಾಗೂ ಸುಲಭವಾಗಿದೆ. ಮೇ ತಿಂಗಳ ಅಂತ್ಯಕ್ಕೆ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಕೆಎಸ್ ಆರ್ ಚರಣ್ ರೆಡ್ಡಿ ಅವರು ಡೆಕ್ಕನ್ ಹೆರಾಲ್ಡ್ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಈ ಹಿಂದೆ ಹೈದರಾಬಾದಿನ ಪೊಲೀಸರು ಇದೇ ರೀತಿ ಅಪ್ಲಿಕೇಷನ್ ವೊಂದನ್ನು ಬಳಸಿದ್ದರೂ, ವಿದೇಶಾಂಗ ಸಚಿವಾಲಯ ಅಭಿವೃದ್ಧಿ ಪಡಿಸಿದ ಅಪ್ಲಿಕೇಷನ್ ನನ್ನು ಕರ್ನಾಟಕ ಪೊಲೀಸರೇ ಮೊದಲ ಬಾರಿಗೆ ಬಳಸುತ್ತಿದ್ದಾರೆ. 8,000ಕ್ಕೂ ಟ್ಯಾಬ್ಲೆಟ್ ಗಳನ್ನು ಬಳಸಿಕೊಂಡು ಪೊಲೀಸ್ ಸಿಬ್ಬಂದಿ, ಅರ್ಜಿದಾರರ ಮನೆಗೆ ಬಂದು ವಿವರ ಪಡೆದು ದಾಖಲೆಗಳನ್ನು ಆನ್ ಲೈನ್ ಗೆ ಸೇರಿಸುತ್ತಿದ್ದಾರೆ.

ಅರ್ಜಿ ಸಲ್ಲಿಕೆ ವೇಳೆ ನೀವು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತು ಯಾವುದೇ ಕ್ರಿಮಿನಲ್ ಕೇಸು ಬಾಕಿ ಇಲ್ಲ ಎಂದು ಬರೆದು ಅಫಿಡವಿಟ್ ನೀಡಬೇಕಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆ ಆನ್ ಲೈನ್ ನಲ್ಲಿ ಸರಿಯಾಗಿ ನಮೂದಾಗಿದ್ದರೆ ಪೊಲೀಸರ ಪರಿಶೀಲನೆ ನಂತರ ಅಫಿಡವಿಟ್ ನ್ನು ಆದ್ಯತೆ ಮೇರೆಗೆ ಪರಿಶೀಲನೆ ಮಾಡಲಾಗುತ್ತದೆ. ಎಂಥಾ ಅರ್ಜಿಯಾದರೂ 21 ದಿನದೊಳಗೆ ಎಲ್ಲಾ ರೀತಿ ವೆರಿಫಿಕೇಷನ್ ಮುಗಿಸಿರಬೇಕಾಗುತ್ತದೆ. ತಿಂಗಳಿಗೆ 20 ಸಾವಿರ ಆರ್ಜಿಗಳು ಬಂದರೆ ಅದರಲ್ಲಿ 8 ಸಾವಿರ ಅರ್ಜಿಗಳ ಪರಿಶೀಲನೆ ಆಗುತ್ತಿದೆ. ಈಗ 21ದಿನದ ಅವಧಿಯನ್ನು 10 ದಿನಕ್ಕೆ ತಗ್ಗಿಸಲು ಪೊಲೀಸರು ತಂತ್ರಜ್ಞಾನದ ಮೊರೆ ಹೊಕ್ಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru is all set to become the first city in the country to introduce online police verification of passports. The pilot project(mpassport police app) is likely to take off by the end of this month said Additional Commissioner of Police (West) KSR Charan Reddy
Please Wait while comments are loading...