ಬೆಂಗಳೂರಿನಲ್ಲಿ ಮೇ 7, 14ರಂದು ಪಾಸ್‌ಪೋರ್ಟ್‌ ಮೇಳ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 29 : ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಮೇ 7 ಮತ್ತು 14 ರಂದು ಪಾಸ್‌ಪೋರ್ಟ್ ಮೇಳ ಆಯೋಜಿಸಿದೆ. ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಯ ಜನರಿಗೆ ನೆರವಾಗಲು ಪಾಸ್‌ಪೋರ್ಟ್ ಸೇವಾ ಶಿಬಿರವನ್ನು ಏರ್ಪಡಿಸಿದೆ.

ಬೆಂಗಳೂರಿನ ಲಾಲ್‌ಬಾಗ್ ಮತ್ತು ಮಾರತ್‌ಹಳ್ಳಿಯಲ್ಲಿರುವ ಪಾಸ್‌ಪೋರ್ಟ್ ಕೇಂದ್ರಗಳಲ್ಲಿ ಮೇ 7 ಮತ್ತು 14ರಂದು ಪಾಸ್‌ಪೋರ್ಟ್ ಮೇಳ ನಡೆಯಲಿದೆ. ಈ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವವರು ಭೇಟಿಯ ಸಮಯವನ್ನು ನಿಗದಿ ಮಾಡಿಕೊಳ್ಳಬೇಕು. [ಪಾಸ್ ಪೋರ್ಟ್ ಪಡೆಯಲು 4 ದಾಖಲೆಗಳು ಸಾಕೇ ಸಾಕು]

passport

ಕೊಡಗು, ಮೈಸೂರು ಮತ್ತು ಹಾಸನ ಭಾಗದ ಜನರಿಗೆ ನೆರವಾಗಲು ಮೇ 7 ಮತ್ತು 8 ರಂದು ಮಡಿಕೇರಿಯ ಹಳೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಶಿಬಿರವನ್ನು ಏರ್ಪಡಿಸಲಾಗಿದೆ. [ಪೊಲೀಸ್ ವೆರಿಫಿಕೇಶನ್ ಇಲ್ಲದೇ ಕೈಗೆ ಪಾಸ್ ಪೋರ್ಟ್]

ಈ ಮೇಳ ಮತ್ತು ಶಿಬಿರಗಳು ನಡೆಯುವ 5 ದಿನ ಮೊದಲು ಆಸಕ್ತರಿಗೆ ನಿಗದಿತ ಸಮಯವನ್ನು ತಿಳಿಸಲಾಗುತ್ತದೆ. ಮೊದಲೇ ಭೇಟಿಯನ್ನು ನಿಗದಿ ಮಾಡಿಕೊಳ್ಳದೆ ನೇರವಾಗಿ ಬರುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ನೋಡಬಹುದಾಗಿದೆ. [ವೆಬ್ ಸೈಟ್ ವಿಳಾಸ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru passport seva kendra organized Passport mela at Marathahalli and Lalbagh Bengaluru on May 7 and 14, 2016.
Please Wait while comments are loading...