ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಬಿ ತುಳುಕುತ್ತಿದೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌: ಇನ್ನೊಂದು ರೈಲಿಗೆ ಆಗ್ರಹ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 9 : ಬೆಂಗಳೂರು ಬೆಳಗಾವಿ ಮಧ್ಯೆ ನಿತ್ಯ ಸಂಚರಿಸುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಿತಿಮೀರಿದ ಪ್ರಯಾಣಿಕರ ಸಂದಣಿಯಿಂದ ತೊಂದರೆಯಾಗುತ್ತಿದ್ದು, ಮತ್ತೊಂದು ರೈಲನ್ನು ಆರಂಭಿಸಬೇಕೆಂದು ಬೆಳಗಾವಿ ಹಾಗೂ ಹುಬ್ಬಳ್ಳಿ ಭಾಗದ ಪ್ರಯಾಣಿಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು-ಚೆನ್ನೈ ರೈಲನ್ನು ಮೈಸೂರು ವರೆಗೂ ಓಡಿಸಲು ಮನವಿ ಬೆಂಗಳೂರು-ಚೆನ್ನೈ ರೈಲನ್ನು ಮೈಸೂರು ವರೆಗೂ ಓಡಿಸಲು ಮನವಿ

ಈ ಕುರಿತು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ಸಂಸದ ಪ್ರಹ್ಲಾದ್‌ ಜೋಶಿ, ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕರು,ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ಪ್ರಬಂಧಕರಿಗೆ ಪತ್ರ ಬರೆದಿದ್ದು, ಪ್ರತಿದಿನ ರಾತ್ರಿ ಈ ಮಾರ್ಗದಲ್ಲಿ ಮತ್ತೊಂದು ಎಕ್ಸ್‌ಪ್ರೆಸ್‌ ರೈಲನ್ನು ಓಡಿಸಬೇಕೆಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಿಂದ ಮಹಾರಾಷ್ಟ್ರದ ಕೊಲ್ಹಾಪುರದ ನಡುವೆ ಸಂಚರಿಸುವ ಈ ಎಕ್ಸ್ ಪ್ರೆಸ್ ರೈಲು ಪ್ರತಿದಿನ ಬೆಳಗಾವಿಯಿಂದ ಹೊರಡುವಾಗಲೇ ಸಂಪೂರ್ಣವಾಗಿ ತುಂಬಿ ಹೋಗಿರುತ್ತದೆ. ಇದರಿಂದ ಮುಂದೆ ಹತ್ತುವ ಪ್ರಯಾಣಿಕರಿಗೆ ಅನನುಕೂಲ ಉಂಟಾಗುತ್ತಿದೆ. ಅದರಲ್ಲಿಯೂ ವೃದ್ಧರು, ಮಕ್ಕಳು ಸಂಚರಿಸುವುದೂ ತುಂಬಾ ಕಷ್ಟವಾಗಿದೆ ಎಂದು ಕರ್ನಾಟಕ ರೈಲ್ವೆ ಬಳಕೆದಾರರ ಸಂಘ ತಿಳಿಸಿದೆ.

Passengers urge new train between Belgaum and Bengaluru

ಇದರಿಂದ ಖಾಸಗಿ ಬಸ್‌ಗಳ ಮಾಫಿಯಾವನ್ನು ತಡೆಗಟ್ಟಬಹುದು ಎಂದು ಕರ್ನಾಟಕ ರೈಲ್‌ ಯೂಸರ್ಸ್‌ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಟ್ಯಾಗ್‌ ಮಾಡುವ ಮೂಲಕ ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಸಾವಿರಾರು ಪ್ರಯಾಣಿಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ತೆರಳಲು 340ರೂ. ದರವಿದೆ, ಅದೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳಲು 569 ರೂ. ತೆರಬೇಕಾಗುತ್ತದೆ.

English summary
Over crowded and non availability of reservation seats in Rani Chenaama Express which runs between Belgaum and Bengaluru, hundreds of passengers urged South Western Railway officials and public representatives to provide another train in the same route every night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X