ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್ ಇಂಡಿಯಾ ವಿಮಾನದಲ್ಲಿ ತಿಗಣೆಗಳು ಸಾರ್ ತಿಗಣೆಗಳು!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಾದ ರಾಜಹಂಸ ಇನ್ನಿತರೆ ಬಸ್‌ಗಳಲ್ಲಿ ತಿಗಣೆ ಹೆಚ್ಚಾಗಿದೆ ಎನ್ನುವ ಸುದ್ದಿಯಾಗಿತ್ತು, ಆದರೆ ಆಕಾಶದೆತ್ತರಕ್ಕೆ ಹಾರುವ ವಿಮಾನದಲ್ಲೂ ತಿಗಣೆ ಕಾಟ ಹೆಚ್ಚಾಗಿದೆಯಂತೆ.

ಕಳೆದ ವಾರ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ತಿಗಣೆಗಳು ಕಚ್ಚುತ್ತಿವೆ ಎಂದು ಏರ್ ಇಂಡಿಯಾ ಪ್ರಯಾಣಿಕರೊಬ್ಬರು ದೂರಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ತಿಗಣೆಗಳಿರುವ ಬಗ್ಗೆ ಇದೇ ಮೊದಲ ಬಾರಿಗೆ ದೇಶೀ ಪ್ರಯಾಣಿಕರು ಆರೋಪಿಸಿದ್ದಾರೆ.

ಹವಾಮಾನ ವೈಪರೀತ್ಯ: ನವದೆಹಲಿಯಲ್ಲಿ ಭೂ ಸ್ಪರ್ಶ ಮಾಡದ ವಿಮಾನಗಳು ಹವಾಮಾನ ವೈಪರೀತ್ಯ: ನವದೆಹಲಿಯಲ್ಲಿ ಭೂ ಸ್ಪರ್ಶ ಮಾಡದ ವಿಮಾನಗಳು

ಈ ಕುರಿತು ಪ್ರಯಾಣಿಕರೊಬ್ಬರು ಮಾತನಾಡಿ ಮೊದಲಿಗೆ ಸೊಳ್ಳೆಗಳಿರಬಹುದು ಎಂದುಕೊಂಡಿದ್ದೆ ಆದರೆ ಮನೆಗೆ ಬಂದು ನೋಡಿದಾಗ ತಿಗಣೆಯಿಂದ ಕಚ್ಚಿಸಿಕೊಂಡಿದ್ದು ಗೊತ್ತಾಗಿದೆ. ಈ ಬಗ್ಗೆ ಪ್ರಯಾಣಿಕರು ಯಾವುದೇ ದೂರು ನೀಡಿಲ್ಲ.

Passengers complaint on bed bugs in Air India plane

ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ!ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ!

ತಿಗಣೆ ಕಡಿತದಿಂದ ಬೆನ್ನಿನ ಮೇಲೆ ಆಗಿರುವ ಗಾಯದ ರೀತಿಯ ಮಚ್ಚೆಯ ಗುರುನ್ನು ಪ್ರಯಾಣಿಕನ ಪುತ್ರಿ ಟ್ವಿಟ್ಟರ್ ಮೂಲಕ ಏರ್‌ಲೈನ್ಸ್‌ ಗೆ ಟ್ಯಾಗ್ ಮಾಡಿದ್ದಾರೆ, ಆದರೆ ವಿಮಾನಯಾನ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
Passengers have objected to authorities through social media that there were intolerable bed bugs in Air Indian plane which was flew between Delhi and Bengaluru in the last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X