ಜೈಲಿನಲ್ಲಿ ರಾಜಾತಿಥ್ಯ: ಡಿಐಜಿ ರೂಪಾ ಮೇಲೆ ಎಚ್ಡಿಕೆ ಗಂಭೀರ ಆರೋಪ

Posted By:
Subscribe to Oneindia Kannada

ಪರಪ್ಪನ ಅಗ್ರಹಾರದ ರಾಜಾತಿಥ್ಯದ ಭ್ರಷ್ಟಾಚಾರ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ಬೆನ್ನಲ್ಲೇ ಡಿಐಜಿ ರೂಪಾ ಮೌದ್ಗೀಲ್ ಮೇಲೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಜೈಲಿಂದ ಬರುವ ಕಪ್ಪದ ಮೊತ್ತ ತನಗೆ ಬಂದಿಲ್ಲ ಎನ್ನುವ ಕಾರಣಕ್ಕಾಗಿ ರೂಪಾ ಆರೋಪ ಮಾಡುತ್ತಿದ್ದಾರೆ. ರೂಪಾ ಮತ್ತು ಡಿಜಿಪಿ ಸತ್ಯನಾರಾಯಣ ರಾವ್ ಇಬ್ಬರನ್ನೂ ರಜೆ ಮೇಲೆ ಕಳುಹಿಸಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು ಪೊಲೀಸರ ಮಾನ ಪರಪ್ಪನ ಅಗ್ರಹಾರದಲ್ಲಿ ಹರಾಜು

ಈ ನಡುವೆ ಜೈಲಿನ ರಾಜಾತಿಥ್ಯದ ಬಗ್ಗೆ ರೂಪಾ ಮಾಡಿರುವ ಆರೋಪಕ್ಕೆ ಪೂರಕ ಎನ್ನುವಂತೆ ಪರಪ್ಪನ ಅಗ್ರಹಾರದಲ್ಲಿ ಛಾಪಾ ಹಗರಣದ ಕಿಂಗ್ ಪಿನ್ ಅಬ್ದುಲ್ ಕರೀಂ ತೆಲಗಿಗೆ ಜೈಲಿನಲ್ಲಿ ನೀಡಲಾಗುತ್ತಿರುವ ವಿಐಪಿ ಸೌಲಭ್ಯದ ಸಿಸಿಟಿವಿ ತುಣುಕು ಬಹಿರಂಗಗೊಂಡಿದೆ.

ಸುದ್ದಿವಾಹಿನಿಗಳಲ್ಲಿ ಸಿಸಿಟಿವಿ ತುಣುಕು ಪ್ರಸಾರವಾಗುತ್ತಿದ್ದಂತೇ, ಹಿರಿಯ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ದೌಡಾಯಿಸಿ ತೆಲಗಿಗೆ ನೀಡಿದ್ದ ಸೌಲಭ್ಯವನ್ನು ತೆಗೆಸಿದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಪರಪ್ಪನ ಅಗ್ರಹಾರದ ಭ್ರಷ್ಟಾಚಾರ ಪ್ರಕರಣ ಸಂಬಂಧ, ನಿವೃತ್ತ ಐಪಿಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ವಾರದೊಳಗೆ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಿದ್ದಾರೆ. ಮುಂದೆ ಓದಿ..

ಭ್ರಷ್ಟಾಚಾರ ನಿಗ್ರಹ ದಳ

ಭ್ರಷ್ಟಾಚಾರ ನಿಗ್ರಹ ದಳ

ಬೆಂಗಳೂರಿನಲ್ಲಿ ಶುಕ್ರವಾರ (ಜು 14) ಮಾತನಾಡುತ್ತಿದ್ದ ಕುಮಾರಸ್ವಾಮಿ, ಸರಕಾರ ರಚಿಸಿರುವ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸಿದರೆ ನಿಜಾಂಶ ಹೊರಬರುತ್ತಿತ್ತಲ್ವೇ, ಪ್ರತ್ಯೇಕ ಸಮಿತಿ ಯಾಕೆ ರಚಿಸಬೇಕಿತ್ತು ಎಂದು ಎಚ್ಡಿಕೆ ಹೇಳಿದ್ದಾರೆ.

ಹಣ ಬಂದಿಲ್ಲ ಎನ್ನುವ ಕಾರಣಕ್ಕಾಗಿ ರೂಪಾ ಆರೋಪ

ಹಣ ಬಂದಿಲ್ಲ ಎನ್ನುವ ಕಾರಣಕ್ಕಾಗಿ ರೂಪಾ ಆರೋಪ

ಪರಪ್ಪನ ಅಗ್ರಹಾರದಿಂದ ಸಂಗ್ರಹಿಸಲಾಗುತ್ತಿದ್ದ ಕಪ್ಪದ ಹಣ 75ಲಕ್ಷದಿಂದ ಒಂದು ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎನ್ನುವ ಮಾಹಿತಿಯಿದೆ. ಇದರಲ್ಲಿ ತನಗೆ ಸಂದಾಯವಾಗ ಬೇಕಾಗಿದ್ದ ಹಣ ಬಂದಿಲ್ಲ ಎನ್ನುವ ಕಾರಣಕ್ಕಾಗಿ ರೂಪಾ ಆರೋಪ ಮಾಡುತ್ತಿದ್ದಾರೆ. ಡಿಐಜಿ ಮತ್ತು ಡಿಜಿಪಿ ಇಬ್ಬರನ್ನೂ ಸರಕಾರೀ ರಜೆಯ ಮೇಲೆ ಕಳುಹಿಸುವುದೇ ಸೂಕ್ತ - ಕುಮಾರಸ್ವಾಮಿ.

ಒಂದಂಕಿ, ಐಪಿಎಲ್ ಬೆಟ್ಟಿಂಗ್ ಕೇಸ್ ನಂತೆ ಆಗದಿರಲಿ

ಒಂದಂಕಿ, ಐಪಿಎಲ್ ಬೆಟ್ಟಿಂಗ್ ಕೇಸ್ ನಂತೆ ಆಗದಿರಲಿ

ಈ ಹಿಂದೆ ಒಂದಂಕಿ ಲಾಟರಿ, ಐಪಿಎಲ್ ಬೆಟ್ಟಿಂಗ್ ಕೇಸ್ ಹಳ್ಳಹಿಡಿದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಂತೇ ಪರಪ್ಪನ ಅಗ್ರಹಾರದ ಕೇಸೂ ಆಗದಿರಲಿ. ಚುನಾವಣೆಯ ಈ ಸಮಯದಲ್ಲಿ ಸರಕಾರ ಕಣ್ಣೊರೆಸುವ ಕೆಲಸ ಮಾಡದೇ ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಮನಗರದಿಂದಲೇ ಸ್ಪರ್ಧೆ

ರಾಮನಗರದಿಂದಲೇ ಸ್ಪರ್ಧೆ

ಮುಂದಿನ ಚುನಾವಣೆಯಲ್ಲಿ ನಾನು ರಾಮನಗರದಿಂದಲ್ಲೇ ಸ್ಪರ್ಧಿಸುತ್ತೇನೆ. ಹಾಗೆಯೇ ಉತ್ತರಕರ್ನಾಟಕದ ಒಂದು ಕ್ಷೇತ್ರದಿಂದಲೂ ಸ್ಪರ್ಧಿಸುವ ಇರಾದೆ ಇಟ್ಟುಕೊಂಡಿದ್ದೇನೆ. ಪ್ರಧಾನಿ ಮೋದಿಯೇ ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಬಹುದಾದರೆ, ನಾನ್ಯಾಕೆ ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಬಾರದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನುವ ಮಾಹಿತಿ ಬಂದಿದೆ, ಅವರು ಸಿಎಂ ಆಗೋದಿರಲಿ, ಶಾಸಕರಾಗಿಯೂ ಆಯ್ಕೆಯಾಗುವುದಿಲ್ಲ - ಕುಮಾರಸ್ವಾಮಿ.

ಯಡಿಯೂರಪ್ಪ ರಾಜ್ಯದ ಶಾಂತಿ ಕದಡಬೇಡಿ

ಯಡಿಯೂರಪ್ಪ ರಾಜ್ಯದ ಶಾಂತಿ ಕದಡಬೇಡಿ

ಯಡಿಯೂರಪ್ಪ ಮುಖ್ಯಮಂತ್ರಿ ಆಗಿಬಿಟ್ಟಿದ್ದೀನಿ ಎನ್ನುವ ಭ್ರಮೆಯಲ್ಲಿದ್ದಾರೆ. ದಲಿತರ ಮನೆಯಲ್ಲಿ ಊಟಮಾಡಿ ರಾಜಕೀಯ ಮಾಡಿದ್ದು ಸಾಕು, ಕೋಮು ಸೌಹಾರ್ದತೆಯ ವಿಚಾರದಲ್ಲಿ ಮನಬಂದಂತೇ ಹೇಳಿಕೆ ನೀಡಿ, ರಾಜ್ಯದ ಶಾಂತಿ ಕದಡಬೇಡಿ ಎಂದು ಕುಮಾರಸ್ವಾಮಿ, ಬಿಎಸ್ವೈಗೆ ಟಾಂಗ್ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DIG D Roopa allegation on Parappana Agrahara DGP Satyanarayana Rao: Karnataka unit JDS President HD Kumaraswamy reaction.
Please Wait while comments are loading...