ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸತ್ ಚುನಾವಣೆಗೆ ಸೀಟು ಹಂಚಿಕೆ ಫೈನಲ್ ಆಗಿಲ್ಲ: ಪರಂ ಸ್ಪಷ್ಟನೆ

By Nayana
|
Google Oneindia Kannada News

ಬೆಂಗಳೂರು, ಜೂನ್ 2: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದ್ದೇವೆ, ಖಾತೆ
ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಕಾಂಗ್ರೆಸ್‌ ಚುನಾವಣಾ ಪೂರ್ವ ಮೈತ್ರಿ ಕುರಿತು ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸುವ ಸಲುವಾಗಿ ಮೈತ್ರಿ ಮಾಡಿಕೊಂಡಿದ್ದೇವೆ, ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎಂದು ಮಾಹಿತಿ ನೀಡಿದರು.

ಡಿಸಿಎಂ ಹುದ್ದೆ ಅಸಾಂವಿಧಾನಿಕ: ಹೈಕೋರ್ಟ್‌ಗೆ ಪಿಐಎಲ್‌ಡಿಸಿಎಂ ಹುದ್ದೆ ಅಸಾಂವಿಧಾನಿಕ: ಹೈಕೋರ್ಟ್‌ಗೆ ಪಿಐಎಲ್‌

ಸೀಟು ಹಂಚಿಕೆ ಕುರಿತು ಇನ್ನು ಅಂತಿಮವಾಗಿಲ್ಲ, ಮುಂದಿನ ದಿನಗಳ್ಲಲಿ ಎರಡು ಪಕ್ಷದ ಮುಖಂಡರು ಕುಳಿತು ಚರ್ಚೆ ಮಾಡುತ್ತೇವೆ. ಎರಡು ಪಕ್ಷಗಳು ಪ್ರಾಭಲ್ಯ ಇರುವ ಕಡೆ ನಾನು ಮತ್ತು ಮುಖ್ಯಮಂತ್ರಿ ಕುಳಿತು ಮಾತನಾಡುತ್ತೇವೆ, ಯಾವುದೇ ಗೊಂದಲಕ್ಕೆ ಅವಕಾಶ ಕೊಡುವುದಿಲ್ಲ, ಮೈತ್ರಿ ಸರ್ಕಾರದಲ್ಲಿ ಪಕ್ಷಗಳು ಕೊಟ್ಟು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದರು.

Parameshwar clarifies seat sharing not yet finalized for parliament poll

22 ಸ್ಥಾನಗಳಲ್ಲಿ ಪಕ್ಷೇತರರಿಗೂ ಕೊಡಬಹುದು ಇನ್ನು ಎಲ್ಲ ಸ್ಥಾನಗಳನ್ನು ತುಂಬದೇ ಕೆಲ ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ. ಇನ್ನು ಸಿಎಂ ಸಭೆಗಳಲ್ಲಿ ಮೊಬೈಲ್ ಫೋನ್ ರದ್ದು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಸಭೆಯಗಳಲ್ಲಿ ಮೊಬೈಲ್‌ನಿಂದಾಗಿ ಕಿರಿಕಿರಿ ಉಂಟಾಗುತ್ತದೆ. ಜತೆಗೆ ಕೆಲಸ ಸುಗಮವಾಗಿ ನಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಮೊಬೈಲ್ ನಿಷೇಧ ಮಾಡಬೇಕಾಗಿದೆ ಎಂದರು.

English summary
Deputy Chief minister Dr. G.Parameshwar has clarified that seat sharing not let been finalized for parliament poll between Congress and JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X