ಚೌಡಯ್ಯದಲ್ಲಿ ಕೃಷ್ಣ ಧ್ವನಿ, ಚೌರಾಸಿಯಾ ಬಾನ್ಸುರಿ ಇನಿದನಿ

Subscribe to Oneindia Kannada

ಬೆಂಗಳೂರು, ಆಗಸ್ಟ್, 12: ಬೆಂಗಳೂರಿನ ಸಂಗೀತ ಪ್ರೇಮಿಗಳಿಗೆ ವಾರಾಂತ್ಯಕ್ಕೆ ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ವಿಶ್ವವಿಖ್ಯಾತ ಕೊಳಲು ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಆಗಸ್ಟ್ 13, ಶನಿವಾರ ಬೆಂಗಳೂರಿನ ಮಲ್ಲೇಶ್ವರಂ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಚೌರಾಸಿಯಾ ಜತೆ ಖ್ಯಾತ ತಬಲಾವಾದಕ ಪಂಡಿತ್ ವಿಜಯ್ ಘಾಟೆ, ಪಂಡಿತ್ ಪ್ರವೀಣ್ ಗೋಡ್ಖಿಂಡಿ "ಕೃಷ್ಣ ಧ್ವನಿ" ಯಲ್ಲಿ ಕಿವಿಗೆ ಮುದನೀಡಲಿದ್ದಾರೆ. ಪ್ರವೀಣ್ ಗೋಡ್ಖಿಂಡಿ ನೇತೃತ್ವದ ಸಂಜೋಗ್ ಬಾನ್ಸುರಿ ವಿದ್ಯಾಲಯವು ಪಂಡಿತ್ ವೆಂಕಟೇಶ ಗೋಡ್ಖಿಂಡಿ ನೆನಪಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.[ಪ್ರವೀಣ್ ಗೋಡ್ಖಿಂಡಿಗೆ 'ಝೆಡ್‌ಎಂಆರ್' ಸಂಗೀತ ಪ್ರಶಸ್ತಿಯ ಗರಿ]

Pandit Hariprasad Chaurasia to perform at Chowdiah Hall

ಸಂಜೋಗ್ ವಿದ್ಯಾಲಯದ 30 ವಿದ್ಯಾರ್ಥಿಗಳು ಆರಂಭದಲ್ಲಿ ಕೊಳಲು ವಾದನ ಮಾಡಲಿದ್ದಾರೆ. ಪ್ರವೀಣ್ ಗೋಡ್ಖಿಂಡಿ ಹಾಗೂ ಅವರ ಪುತ್ರ ಷಡ್ಜ್ ಗೋಡ್ಖಿಂಡಿ ಬಾನ್ಸುರಿ ಜುಗಲ್‌ಬಂದಿ ನಡೆಸಿಕೊಡುವರು. ಪ್ರವೀಣ್ ಸಹೋದರ ಕಿರಣ್ ಗೋಡ್ಖಿಂಡಿ ತಬಲಾ ಸಾಥ್ ನೀಡುವರು.[ಪಂಡಿತ್ ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ ಘೋಷಣೆ]

Pandit Hariprasad Chaurasia to perform at Chowdiah Hall

ಮೊದಲ ಸಲ:
ಒಂದೇ ವೇದಿಕೆಯಲ್ಲಿ ಚೌರಾಸಿಯಾ ಹಾಗೂ ಕನ್ನಡಿಗ ಪ್ರವೀಣ್ ಗೋಡ್ಖಿಂಡಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇಶ ಗೋಡ್ಖಿಂಡಿಯವರ ಜನ್ಮದಿನ ನಿಮಿತ್ತ ಅವರಿಗೆ ಗೌರವ ವಂದನೆ ಸಲ್ಲಿಸಲು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ತಬಲಾ ವಾದನ ವಿಶೇಷ:
ಪ್ರಖ್ಯಾತ ತಬಲಾ ವಾದಕ ಝಾಕಿರ್ ಹುಸೇನ್ ಅವರಿಂದ ಪ್ರಭಾವಿತರಾಗಿರುವ ವಿಜಯ್ ಘಾಟೆ ಮೂರು ಪ್ರಕಾರದ ಅಂದರೆ ಗಾಯನ, ವಾದ್ಯ, ನೃತ್ಯ ಮೂರೂ ಪ್ರಕಾರಗಳಿಗೆ ತಬಲಾ ನುಡಿಸಬಲ್ಲವರು. ಇವರ ತಬಲಾ ವಾದನದ ಝರಿಯೂ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರತಿಧ್ವನಿಸಲಿದೆ.

Pandit Hariprasad Chaurasia to perform at Chowdiah Hall

ಕಾರ್ಯಕ್ರಮದ ವಿವರ
ದಿನಾಂಕ: 13 ನೇ ಆಗಸ್ಟ್ , ಶನಿವಾರ
ಎಲ್ಲಿ?: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರಂ, ಬೆಂಗಳೂರು
ಸಮಯ: ಸಂಜೆ 6 ಗಂಟೆಗೆ ಆರಂಭ
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿಗೆ: ದೂ: 98453 29954 (ಕಿರಣ್ ಗೋಡ್ಖಿಂಡಿ), 77607 61394 (ಕಲ್ಯಾಣ್‌ಕುಮಾರ್) ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the memory of well-known flute artist Pandit Venkatesh Godkhindi, world famous Indian classical flutist Pandit Hariprasad Chaurasia will play flute at Chowdaiah Memorial Hall, Bengaluru on 13th August, Saturday. The event "Krishna Dhwani" is organized by Sanjog Bansuri Mahavidyalaya and TATA Capital. Come, listen to Pandit Pravin Godkhindi on jugalbandi with his son Shadaj Godkhindi . Entry Free.
Please Wait while comments are loading...