ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯ ಆಸ್ತಿ ವಿವರ ವೆಬ್‌ಸೈಟ್‌ನಲ್ಲಿ ಲಭ್ಯ

|
Google Oneindia Kannada News

ಬೆಂಗಳೂರು, ಮಾರ್ಚ್ 15 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ತಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡುವ 'ಪಾಲಿಕೆ ಭೂಮಿ' ವೆಬ್‌ಸೈಟ್‌ಅನ್ನು ಬಿಬಿಎಂಪಿ ಆರಂಭಿಸಿದೆ. ನಗರದಲ್ಲಿ ಪಾಲಿಕೆಗೆ ಸೇರಿದ ಸುಮಾರು 5 ಸಾವಿರಕ್ಕೂ ಅಧಿಕ ಆಸ್ತಿಗಳಿವೆ.

ಬಿಬಿಎಂಪಿ ಕಚೇರಿಯಲ್ಲಿ ಮೇಯರ್ ಮಂಜುನಾಥ ರೆಡ್ಡಿ ಅವರು ಪಾಲಿಕೆ ಭೂಮಿ ವೆಬ್‌ಸೈಟ್‌ಗೆ ಸೋಮವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 'ಪಾಲಿಕೆ ಆಸ್ತಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ' ಎಂದರು. [ಶೇ 20ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲಿದೆ ಬಿಬಿಎಂಪಿ]

bbmp

'ಪಾಲಿಕೆಯ ಸ್ವಂತ ಆಸ್ತಿಗಳು, ಗುತ್ತಿಗೆ ನೀಡಿರುವ ಆಸ್ತಿಗಳ ವಿವರ, ಬಾಡಿಗೆ ನೀಡಿರುವ ಕಟ್ಟಡಗಳು, ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣ, ಒತ್ತುವರಿ, ಮೈದಾನ ಸೇರಿದಂತೆ ಎಲ್ಲಾ ಮಾಹಿತಿ ಇಲ್ಲಿ ಲಭ್ಯವಿದೆ' ಎಂದು ಮಂಜುನಾಥ ರೆಡ್ಡಿ ಹೇಳಿದರು. [30 ಲಕ್ಷದ ಆಸ್ತಿ ಖರೀದಿಗೆ ಮುನ್ನ ಇದನ್ನು ಓದಿ]

ಬಿಬಿಎಂಪಿ ಆಯುಕ್ತ ಜಿ.ಕುಮಾರ ನಾಯಕ್ ಅವರು ಮಾತನಾಡಿ, 'ಬಿಬಿಎಂಪಿ ಆಸ್ತಿಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿದೆ. ಜಿಐಎಸ್ ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ನಿಗದಿತ ಪ್ರದೇಶದ ಹೆಸರು ನಮೂದಿಸಿ ಆಸ್ತಿ ವಿವರ ತಿಳಿಯಬಹುದು. ಸದ್ಯ, ಅಧಿಕಾರಿಗಳು ಇದನ್ನು ಬಳಸುತ್ತಿದ್ದು, ಮುಂದಿನ ಎರಡು ತಿಂಗಳಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ' ಎಂದರು. [ಆನ್ ಲೈನ್ ನಲ್ಲಿ ಆಸ್ತಿ ತೆರಿಗೆ ಪಾವತಿ ಸುಲಭ]

ಆಸ್ತಿಗಳ ವಿವರ : ಬಿಬಿಎಂಪಿಯ 8 ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 1688 ಮೈದಾನ, ಉದ್ಯಾನ ಮತ್ತು ಖಾಲಿ ಜಾಗಗಳಿವೆ. ಸುಮಾರು 12 ಆಸ್ತಿಗಳ ಒಡೆತನ ವಿವಾದ ನ್ಯಾಯಾಲಯದಲ್ಲಿದೆ. 18 ಆಸ್ತಿಗಳು ಮೆಟ್ರೋ ಮತ್ತು ರಸ್ತೆ ಅಗಲೀಕರಣದ ಪಾಲಾಗಿವೆ.

English summary
Now you can get Bruhat Bangalore Mahanagara Palike (BBMP) properties details on website. Mayor B.N.Manjunath Reddy on Monday launched 'Palike Bhoomi' website which will provide information about properties, buildings, lakes of BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X