ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಆಡಳಿತ ಶೈಲಿ, ಪಾಲಿಸಿ ಶ್ಲಾಘಿಸಿದ ಆಸ್ಟ್ರೇಲಿಯಾ ಪ್ರತಿನಿಧಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಆಸ್ಟ್ರೇಲಿಯನ್ ಡೆಪ್ಯುಟಿ ಕಾನ್ಸಿಲೆಟ್ ಜನರಲ್ ಜಾನ್ ಬೋನರ್ ಅವರು ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದರು.

ಭೇಟಿ ಬಳಿಕ ಎಚ್.ಡಿ. ದೇವೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಟ್ರೇಲಿಯಾದವರು ನಮ್ಮ ದೇಶವನ್ನು ಅರ್ಥಮಾಡಿಕೊಂಡಿದ್ದಾರೆ ಆದರೆ ನಮ್ಮವರಿಗೇ ಇದು ಅರ್ಥವಾಗಿಲ್ಲ ಇದು ನಮ್ಮ ದೌರ್ಭಾಗ್ಯ ಎಂದು ವಿಷಾದ ವ್ಯಕ್ತಪಡಿಸಿದರು.

ದೇವೇಗೌಡರ ಬದುಕಿನ ಒಂದೇ ಒಂದು ಕೊರಗು ಅಂದ್ರೆ...ದೇವೇಗೌಡರ ಬದುಕಿನ ಒಂದೇ ಒಂದು ಕೊರಗು ಅಂದ್ರೆ...

ಚುನಾವಣೆ ಸಂದರ್ಭದಲ್ಲಿ ರಾಜ್ಯಗಳಿಗೆ ಭೇಟಿಕೊಟ್ಟು ಪರಿಸ್ಥಿತಿ ಅವಲೋಕನ ಮಾಡುತ್ತಾರೆ, ಇದು ಸಹಜ ಪ್ರಕ್ರಿಯೆ ಭೇಟಿ ವೇಳಿ ರಾಜ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ ನಮ್ಮ ಆಡಳಿತದ ವೇಳೆ ಸಾಕಷ್ಟು ಒಳ್ಳೆ ಕೆಲಸ ಆಗಿದೆ ಎಂದು ಆಸ್ಟ್ರೇಲಿಯಾ ಪ್ರತಿನಿಧಿ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.

Oz ambassador applause Devegowda administration

ಅಭ್ಯರ್ಥಿಗಳ ಗೊಂದಲ ಎಲ್ಲ ಮುಗಿದ ವಿಚಾರ, ಕೆಲವು ಕ್ಷೇತ್ರಗಳಲ್ಲಿ ಭಿನ್ನಮತ ಇರುವುದನ್ನು ಮಾತನಾಡಿ ಸರಿಪಡಿಸುತ್ತಿದ್ದೇವೆ. ಇನ್ನು ಎಟಿಎಂ ನಲ್ಲಿ ಹಣ ಕೊರತೆ ವಿಚಾರರ ಕುರಿತು ಪ್ರತಿಕ್ರಿಯಿಸಿದ ಅವರು ನಗದು ಅಮಾನ್ಯೀಕರಣವೇ ಸಂಪೂರ್ಣ ವಿಫಲ ಅದರ ಬಗ್ಗೆ ಅಂದೇ ಹೇಳಿದ್ದೇನೆ. ಏನೋ ಸುಧಾರಣೆ ಮಾಡುತ್ತೇನೆ ಎಂದು ಹೊರಟಿದ್ದರು ಆದರೆ ವಿಫಲವಾಗಿದ್ದಾರೆ ಎಂದು ಹೇಳಿದರು

English summary
Australian deputy consulate general John Boner has former prime minister H.D. Devegowda on Wednesday and applauded gowda's skill of administration and policies as he was prime minister of India in 1996.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X