ಫೆ.10ಕ್ಕೆ ದೇಶಾದ್ಯಂತ ಚಿನ್ನಾಭರಣ ಅಂಗಡಿಗಳು ಬಂದ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ,09: ನೀವು ಏನಾದರೂ ಹಬ್ಬ, ಮದುವೆ, ಹೀಗೆ ಅನೇಕ ಸಮಾರಂಭ ಪ್ರಯುಕ್ತ ಚಿನ್ನ ಕೊಳ್ಳುವ ಯೋಚನೆ ಇದ್ದರೆ, ನಿಮ್ಮ ಯೋಜನೆಯನ್ನು ಒಂದು ದಿನ ಮುಂದೂಡಿ. ಏಕೆಂದರೆ ಫೆಬ್ರವರಿ 10ರಂದು ದೇಶಾದ್ಯಂತ ಚಿನ್ನಾಭರಣ ಮಳಿಗೆಗಳು ಬಂದ್ ಆಗಲಿವೆ

ಚಿನ್ನಾಭರಣ ಖರೀದಿ ಸಂದರ್ಭದಲ್ಲಿ 2ಲಕ್ಷಕ್ಕೂ ಹೆಚ್ಚು ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ಕೇಂದ್ರ ಸರ್ಕಾರದ ನಿಯಮವನ್ನು ವಿರೋಧಿಸಿ ಚಿನ್ನಾಭರಣ ಸಂಸ್ಥೆ ಮಾಲೀಕರು ಹಾಗೂ ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಿದ್ದಾರೆ.[ಪ್ಯಾನ್ ಕಾರ್ಡ್ ಉಪಯೋಗಿಸುವವರು ಈ ನಿಯಮ ಓದಿಕೊಳ್ಳಿ]

Over one lakh jewellery shops to go on strike on February 10th

ದೇಶಾದ್ಯಂತ ಸುಮಾರು 300ಕ್ಕೂ ಹೆಚ್ಚು ಬಂಗಾರದ ಸಂಸ್ಥೆಗಳಿದ್ದು, 1ಲಕ್ಷಕ್ಕೂ ಹೆಚ್ಚು ಅಂಗಡಿಗಳಿವೆ. ಈ ಎಲ್ಲಾ ಸಂಸ್ಥೆ ಹಾಗೂ ಅಂಗಡಿಗಳ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದು, ಪಾನ್ ಕಾರ್ಡ್ ನಿಯಮವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.[ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್]

ಈ ನಿಯಮ ಜಾರಿಗೆ ಬಂದಾಗಿನಿಂದ ಒಂದು ತಿಂಗಳಲ್ಲಿ ಚಿನ್ನಾಭರಣ ಉದ್ಯಮ ಸುಮಾರು ಶೇ.೩೦ರಷ್ಟು ಕುಸಿದಿದೆ. ಇದೀಗ ಎರಡು ಲಕ್ಷಕ್ಕೆ ಸೀಮಿತವಾದ ನಿಯಮವನ್ನು 10ಲಕ್ಷಕ್ಕೆ ನಿಗದಿಪಡಿಸಬೇಕು ಎಂದು ಚಿನ್ನಾಭರಣ ಫೆಡರೇಶನ್ ಮುಖ್ಯಸ್ಥರು ಆಗ್ರಹ ಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The country's over one lakh jewellery shops and 300 associations to go on a day's strike on February 10th protest against of government decision on PAN card rule. The government rule making PAN card proof mandatory on purchases of Rs.2lakh
Please Wait while comments are loading...