ಮಹನೀಯರು ಕಂಡಂತೆ ಅದಮ್ಯ ಚೇತನ ಸ್ವಾಮಿ ವಿವೇಕಾನಂದ

Posted By:
Subscribe to Oneindia Kannada

ಬೆಂಗಳೂರು, ಜನವರಿ,12: "ನಿನಗೆ ಯಾರು ಸಹಾಯ ಮಾಡುತ್ತಾರೆ ಅವರನ್ನು ಮರೆಯಬೇಡ, ನಿನ್ನನ್ನು ಯಾರು ಪ್ರೀತಿಸುತ್ತಾರೆ ಅವರನ್ನು ದ್ವೇಷಿಸಬೇಡ, ಯಾರು ನಿಮ್ಮನ್ನು ನಂಬುತ್ತಾರೋ ಅವರಿಗೆ ಮೋಸ ಮಾಡಬೇಡ", 'Like me or Hate me ಎಂಬ ಎರಡು ಪದಗಳು ನನ್ನ ಜೀವನದ ಎರಡು ಮುಖ್ಯ ಪದಗಳು. ಏಕೆಂದರೆ ನೀನು ನನ್ನ ಇಷ್ಟಪಟ್ಟರೆ ನಾನು ನಿನ್ನ ಹೃದಯದಲ್ಲಿರುತ್ತೇನೆ. ದ್ವೇಷಿಸಿದರೆ ನಿಮ್ಮ ತಲೆಯಲ್ಲಿರುತ್ತೇನೆ" ಇದನ್ನು ಹೇಳಿದವರು ಮತ್ಯಾರೂ ಅಲ್ಲ ಯುವಜನತೆಯ ಚಿಲುಮೆ ಸ್ವಾಮಿ ವಿವೇಕಾನಂದ. ಇಂದು ವಿವೇಕಾನಂದರ 153ನೇ ಹುಟ್ಟು ಹಬ್ಬ.

ಜಗತ್ತು ಕಂಡ ಬಹಳ ಪ್ರಭಾವಿತ ಪ್ರಸಿದ್ಧ ತತ್ವಜ್ಞಾನಿ, ಪ್ರತಿಯೊಬ್ಬರ ಬದುಕಿನ ಅದಮ್ಯ ಚೈತನ್ಯಸದಾ ಆಶಾವಾದ, ಸಕಾರಾತ್ಮಕತೆ ಮತ್ತೊಂದು ಮೊಗವೇ ಸ್ವಾಮಿ ವಿವೇಕಾನಂದ. ಯುವಕರಿಗೆ ಮಾರ್ಗರ್ಶಕರಾಗಿ, ವಿದ್ಯಾರ್ಥಿಗಳಿಗೆ ಗುರುವಾಗಿ, ಹಿರಿಯರಿಗೆ ತತ್ತ್ವಜ್ಞಾನ, ಆಧ್ಯಾತ್ಮದ ಲೇಪನದ ಮೂಲಕ ಸದಾ ನೆಮ್ಮದಿ ನೀಡುವ ಮಗನಾಗಿ, ಬದುಕಿನ ಸಾರಂಶವನ್ನು ಸರಾಗವಾಗಿ ಎಲ್ಲರ ಎದೆಯಲ್ಲಿ ಅರಳುವಂತೆ ಮಾಡಿ ಪ್ರತಿಯೊಬ್ಬರ ಮನೆ ಮನಗೆದ್ದವರು ವಿವೇಕಾನಂದ.

ಮಹರ್ಷಿ ಶ್ರೀ ಅರವಿಂದರುಸ್ವಾಮಿ ವಿವೇಕಾನಂದರ ಬಗ್ಗೆ ಹೀಗೆ ಹೇಳುತ್ತಾರೆ, 'ನಮಗೆ ತಿಳಿದಿರುವ ಅಪಾರ ಶಕ್ತಿಯ ಏಕೈಕ ವ್ಯಕ್ತಿ ಪುರುಷರಲ್ಲಿ ಪುರುಷಸಿಂಹ. ಇಂದಿಗೂ ಅವರ ಅದಮ್ಯ ಕಾರ್ಯಶೀಲತೆ ಚಾಲನೆಯಲ್ಲಿರುವುದನ್ನು ಗುರುತಿಸಬಹುದು'.[ರಸಋಷಿ ಕುವೆಂಪು ಆಧುನಿಕ ರವೀಂದ್ರನಾಥ ಠಾಗೋರ್]

'Brothers and sisters of the America' ಎಂದು ಹೇಳಿ ಇಡೀ ಜಗತ್ತನ್ನು ನಿಬ್ಬೆರಗಾಗುವಂತೆ ಮಾಡಿದ ಸ್ವಾಮಿ ವಿವೇಕಾನಂದರ ಬಗ್ಗೆ ಮಹನೀಯರು ತಮ್ಮದೇ ನುಡಿಗಳ ಮೂಲಕ ಅವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರನ್ನು ಮೆಚ್ಚಿ ಆರಾಧಿಸಿದ್ದಾರೆ. ಬದುಕಿನ ದೀಪವಾಗಿದ್ದಾರೆ. ಬನ್ನಿ ಯಾವ ಮಹನೀಯರು ವಿವೇಕಾನಂದರ ಬಗ್ಗೆ ಏನು, ಹೇಳಿದ್ದಾರೆ ಎಂದು ಕೇಳೋಣ.

ಸ್ವಾಮಿ ವಿವೇಕಾನಂದ ಹೇಳಿದ್ದೇನು

ಸ್ವಾಮಿ ವಿವೇಕಾನಂದ ಹೇಳಿದ್ದೇನು

* ದಿನಕ್ಕೆ ಒಂದು ಬಾರಿಯಾದರೂ ನೀನು ನಿನ್ನೊಂದಿಗೆ ಮಾತಾಡು. ಇಲ್ಲದಿದ್ದರೆ ನೀನು ಜಗತ್ತಿನ ಉತ್ತಮ ವ್ಯಕ್ತಿಯೊಂದಿಗೆ ಮಾತನಾಡುವುದನ್ನೇ ಕಳೆಎದುಕೊಳ್ಳುತ್ತೀಯಾ

* ನಿನ್ನನ್ನು ಯಾವುದು ದೈಹಿಕವಾಗಿ, ಮಾನಸಿಕವಾಗಿ, ಜ್ಞಾನಾತ್ಮಕವಾಗಿ ಕುಗಿಸುತ್ತದೋ ಅದನ್ನು ನಿರ್ಲಕ್ಷಿಸಿಬಿಡು. ನಿನ್ನ ಮನದಲ್ಲಿ ನೀನು ಗಟ್ಟಿಯಾಗು.

* ಯಾವಾಗ ದೇವರು ನಿನ್ನ ಸಮಸ್ಯೆಗಳನ್ನು ಪರಿಹರಿಸುತ್ತಾನೋ ಆಗ ನೀನು ದೇವರಲ್ಲಿ ನಂಬಿಕೆ ಇಡುತ್ತೀಯಾ, ಇಲ್ಲದಿದ್ದಲ್ಲಿ ನೀನು ನಿನ್ನ ಸಾಮರ್ಥ್ಯವನ್ನು ನಂಬುತ್ತೀಯಾ.

ಮಹಾತ್ಮಾ ಗಾಂಧೀಜಿ ಹೇಳಿದ್ದೇನು?

ಮಹಾತ್ಮಾ ಗಾಂಧೀಜಿ ಹೇಳಿದ್ದೇನು?

ಸ್ವಾಮಿ ವಿವೇಕಾನಂದರ ಕೃತಿಗಳನ್ನು ನಾನು ಆಮೂಲಾಗ್ರವಾಗಿ ಓದಿದ್ದೇನೆ. ಅವುಗಳ ಅಧ್ಯಯನದ ನಂತರ ಭಾರತದ ಬಗೆಗಿದ್ದ ನನ್ನ ಪ್ರೀತಿ ಸಾವಿರ ಪಾಲು ಹೆಚ್ಚಿತು. -ಮಹಾತ್ಮಾ ಗಾಂಧೀಜಿ

ರವೀಂದ್ರನಾಥ ಠಾಗೂರ್ ಹೇಳಿದ್ದೇನು?

ರವೀಂದ್ರನಾಥ ಠಾಗೂರ್ ಹೇಳಿದ್ದೇನು?

ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು. ನೇತ್ಯಾತ್ಮಕವಾದದ್ದು ಯಾವುದೂ ಇಲ್ಲ - ಕವಿ ರವೀಂದ್ರನಾಥ ಠಾಗೂರ್

ನೇತಾಜಿ ಸುಭಾಷ್‌ಚಂದ್ರಬೋಸ್ ಹೇಳಿದ್ದೇನು?

ನೇತಾಜಿ ಸುಭಾಷ್‌ಚಂದ್ರಬೋಸ್ ಹೇಳಿದ್ದೇನು?

ಸ್ವಾಮಿ ವಿವೇಕಾನಂದರ ನುಡಿಗಳಿಂದ ನಮ್ಮ ದೇಶದ ಜನತೆ ಹಿಂದೆಂದೂ ಕಾಣದ ಆತ್ಮ ಗೌರವವನ್ನು, ಆತ್ಮ ವಿಶ್ವಾಸವನ್ನು ಹಾಗೂ ಆತ್ಮ ಬಲವನ್ನು ಪಡೆದಿದ್ದಾರೆ.
-ನೇತಾಜಿ ಸುಭಾಷ್‌ಚಂದ್ರಬೋಸ್

ರಾಷ್ಟ್ರಕವಿ ಕುವೆಂಪು ಹೇಳಿದ್ದೇನು?

ರಾಷ್ಟ್ರಕವಿ ಕುವೆಂಪು ಹೇಳಿದ್ದೇನು?

ಸ್ವಾಮಿ ವಿವೇಕಾನಂದರ ತಪಃ ಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು ! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ. - ರಾಷ್ಟ್ರಕವಿ ಕುವೆಂಪು

ಪಂಡಿತ್ ಜವಾಹರಲಾಲ್ ನೆಹರು ಹೇಳಿದ್ದೇನು?

ಪಂಡಿತ್ ಜವಾಹರಲಾಲ್ ನೆಹರು ಹೇಳಿದ್ದೇನು?

* ಗತಕಾಲದಲ್ಲಿ ನೆಲೆ ನಿಂತು ಭಾರತೀಯ ಪರಂಪರೆ ಬಗ್ಗೆ ಅತ್ಯಂತ ಹೆಮ್ಮೆ ಇದ್ದವರು ಸ್ವಾಮಿ ವಿವೇಕಾನಂದರು... ಅವರು ನಮ್ಮಲ್ಲಿ ನಮ್ಮ ಪರಂಪರೆಯ ಬಗ್ಗೆ ಸ್ವಾಭಿಮಾನವನ್ನು ಕೆರಳಿಸಿದರು. ಪಂಡಿತ್ ಜವಾಹರಲಾಲ್ ನೆಹರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Swami Vivekananda is the gratest Phylosopher of the world. Today Whole India celebrating his 153rd Birthday. Happy Birthday to you Swami Vivekananda. You are the inspiration of the Youth. you always stay in Youth hearts and mind, hats off to you. "Who is help you, Don't forget them, Who is Loving you,Don't hate them, Who is Believing you, Don't cheat them". National Leaders explained their opinion about of Swami Vivekananda
Please Wait while comments are loading...