ಆರ್ಡರ್ಲಿ ಪದ್ಧತಿಯಿಂದ ಪೇದೆಗಳಿಗೆ ಸಿಗಲಿದೆಯೇ ಮುಕ್ತಿ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ವಿಷಯ ಸಂಬಂಧ ಅಹೋರಾತ್ರಿ ಐಪಿಎಸ್ ಅಧಿಕಾರಿಗಳ ಮನೆ ಕಾಯುವ ಪೊಲೀಸ್ ಪೇದೆಗಳಿಗೆ ಆರ್ಡರ್ಲಿ(ಶಿಷ್ಯ ಪಾಲಕ) ಪದ್ಧತಿಯಿಂದ ಮುಕ್ತಿ ಸಿಗಲಿದೆ. ಈ ಪದ್ಧತಿಯನ್ನು ವಿರೋಧಿಸಿದ್ದ ಕೆಲ ಐಪಿಎಸ್ ಅಧಿಕಾರಿಗಳೂ ಈಗ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಸರ್ಕಾರದ ಅನುಮತಿ ಬೇಕಿದೆ.

ಬ್ರಿಟಿಷರ ಕಾಲದಲ್ಲಿ ಅಧಿಕಾರಿಗಳ ಮೇಲೆ ಹೋರಾಟಗಾರರಿಂದ ತೊಂದರೆಗಳಾಗಬಹುದು ಎಂಬ ಕಾರಣಕ್ಕೆ ಇದ್ದ ಆರ್ಡರ್ಲಿ ಅನಿಷ್ಟ ಪದ್ಧತಿಯನ್ನು ಬಹಳಷ್ಟು ಚಿಂತಕರು ತೊಲಗಿಸಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕೆಲ ಐಪಿಎಸ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಡಿ ದರ್ಜೆ ನೌಕರರರನ್ನು ಪ್ರತ್ಯೇಕವಾಗಿ ನೇಮಿಸಲು ಸರ್ಕಾರ ಮುಂದಾಗಿದ್ದು ಆರ್ಡರ್ ಲಿ ಪದ್ಧತಿಯನ್ನು ರದ್ದುಪಡಿಸಬಹುದೆಂದು ಡಿಜಿಪಿ ಓಂಪ್ರಕಾಶ್ ಸರ್ಕಾರಕ್ಕೆ ಪತ್ರ ಮೂಲಕ ತಿಳಿಸಿದ್ದಾರೆ.

Order li system: DGP write a letter to Government

ತರಬೇತಿ ಹೊಂದಿದ ಕಾನ್ಸ್ ಸ್ಟೆಬಲ್ ಗಳು ಆರ್ಡರ್ಲಿ ಗಳಾಗಿ ಬಳಕೆಯಾಗುತ್ತಿದ್ದಾರೆ. ಇದರಿಂದ ಆರಕ್ಷಕ ಬೊಕ್ಕಸದಲ್ಲಿ ಹೆಚ್ಚ ಹಣ ವ್ಯಯವಾಗುತ್ತಿದೆ. ರಾಜ್ಯದಲ್ಲಿ 3 ಸಾವಿರ ಹುದ್ದೆಗಳು ಹಿರಿಯಪೊಲೀಸ್ ಅಧಿಕಾರಿಗಳ ಆರ್ಡರ್ಲಿಗಳಿಗೆ ಮೀಸಲಾಗಿವೆ. ನಿಯೋಜನೆಗೊಂಡ ಆರ್ಡರ್ಲಿಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಪೊಲೀಸ್ ಮಾನವ ಶಕ್ತಿ ಹೆಚ್ಚುತ್ತದೆ ಎಂದು ವಿವರಿಸಿದ್ದಾರೆ.
ಆದರೆ ಏಕಾಏಕಿ ಆರ್ಡರ್ಲಿ ಸೇವೆಯಿಂದ ನೌಕರರನ್ನು ಹಿಂಪಡೆಯಲಾಗದಿದ್ದರೂ ಹಂತ ಹಂತವಾಗಿ ಪಡೆಯಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರ್ಡರ್ಲಿ ನೌಕರರ ಕೆಲಸವೇನು
ಅಧಿಕಾರಿಗಳಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸುವುದು, ತುರ್ತು ಸಂದೇಶಗಳಿದ್ದಲ್ಲಿ ಅಧಿಕಾರಿಗಳಿಗೆ ತಿಳಿಸುವುದು, ವಿದೇಶ ಪ್ರವಾಸ ಕೈಗೊಂಡಾಗ ಸಹಾಯಕ್ಕೆ ಜತೆಗೆ ಹೋಗುವುದು, ಅಧಿಕಾರಿಗಳ ಪತ್ನಿಯರು ಹೇಳುವ ಕೆಲಸ ನಿರ್ವಹಿಸುವುದು, ತರಕಾರಿ, ದಿನಸಿ ಪದಾರ್ಥ ತರುವುದು, ಮಕ್ಕಳನ್ನು ಶಾಲೆಗೆ ಕರೆದೊಯ್ದು, ವಾಪಸ್ ಕರೆ ತರುವುದು. ಕೇರಳ ಮತ್ತು ತಮಿಳುನಾಡಿನಲ್ಲಿ ಈ ಪದ್ಧತಿ ನಿಷೇಧಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Officers house weaiting police constable post of orderly is cancel to thinking to aprove officers. DGP Om praksh write a letter to government.
Please Wait while comments are loading...