ಕನ್ನಡದ ಗಂಧಗಾಳಿಯಿಲ್ಲದ ಗಣೇಶೋತ್ಸವ ಯಾರಿಗೆ ಬೇಕು?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22 : ಬೆಂಗಳೂರು ಗಣೇಶ ಉತ್ಸವ ಎನ್ನುವ ಹೆಸರಿನಲ್ಲಿ ಕನ್ನಡದ ಜೊತೆ ಕನ್ನಡೇತರ(ಹಿಂದೀ, ತಮಿಳು, ತೆಲುಗು) ಭಾಷೆಗಳ ಕಾರ್ಯಕ್ರಮಗಳನ್ನು ಕನ್ನಡಿಗರ ವಿರೋಧದ ನಡುವೆಯೂ ಪ್ರತಿ ವರ್ಷ ಆಯೋಜಿಸಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ.

ಗೌರಿ-ಗಣೇಶ ಹಬ್ಬ, ಕೆಎಸ್ಆರ್‌ಟಿಸಿಯಿಂದ1000 ಹೆಚ್ಚುವರಿ ಬಸ್

ಈತ್ತೀಚೆಗಂತೂ ಈ ಉತ್ಸವವು ಹೊರಗಿನ ಹಾಡುಗಾರರು, ಸಂಗೀತಗಾರರನ್ನು ಕರೆಸಿ ನಡೆಸುತ್ತಿರುವ ವ್ಯಾವಹಾರಿಕ ಚಟುವಟಿಕೆಯಂತಾಗಿದೆ. ಈ ನಡೆಯನ್ನು ಪ್ರಶ್ನಿಸಿದವರಿಗೆ ಇವರು ಕೊಡುವ ಅಸಡ್ಡೆಯ ಉತ್ತರ ಕನ್ನಡವೂ ಇದೆಯಲ್ಲ ಎನ್ನುವುದಾಗಿದೆ.

Oppose Bengaluru Ganesha Utsav for anti Kannada stand

ಆದರೆ ಇದು ನಾಡಿನ ರಾಜಧಾನಿಯಲ್ಲಿ ಕನ್ನಡದ ಬಳಕೆಯ ಪ್ರಶ್ನೆಯಾಗಿದೆ. ಹೊರಜಗತ್ತಿಗೆ ಬೆಂಗಳೂರಿನಲ್ಲಿ ಎಲ್ಲಾ ಭಾಷೆಗಳೂ ನಡೆಯುತ್ತವೆ ಎನ್ನುವ ಸಂದೇಶವನ್ನು ಕೊಡುತ್ತಿದೆ.

In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ

ಇವರ ಕನ್ನಡ ವಿರೋಧಿ ಧೋರಣೆಗೆ ಸಾಕ್ಷಿಯಾಗಿ ಇವರ ಮಿಂಬಲೆ - (ಬೆಂಗಳೂರು ಗಣೇಶ ಉತ್ಸವ), ಇವರು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕೊಡುವ ಮಾಹಿತಿ ಎಲ್ಲಿಯೂ ಕನ್ನಡದ ಬಳಕೆಯಿಲ್ಲ. ಹಾಗೂ ಇವರು ಹಮ್ಮಿಕೊಂಡಿರುವ 55ನೇ ಉತ್ಸವ ಕುರಿತ ಜಾಹೀರಾತಿನ ವಿಡಿಯೋದಲ್ಲಿಯೂ ಕನ್ನಡವಿಲ್ಲ

ಗೌರಿ-ಗಣೇಶ, ಬಕ್ರೀದ್ ಹಬ್ಬ : ಪೊಲೀಸರೊಂದಿಗೆ ಸಿದ್ದರಾಮಯ್ಯ ಸಭೆ

ಒಟ್ಟಾರೆಯಾಗಿ ಉತ್ಸವದ ನೆಪದಲ್ಲಿ ಕನ್ನಡವನ್ನು ಬದಿಗೊತ್ತಿ ಕನ್ನಡದ ಬಳಕೆಗೆ ಧಕ್ಕೆ ತರುವ ಇವರ ಕನ್ನಡ ವಿರೋಧಿ ನಡೆಯನ್ನು ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಿ ತಕ್ಕ ಸಂದೇಶ ಕೊಡಬೇಕಿದೆ.

ಕೆಳಗಿನ ವಿಳಾಸಗಳಿಗೆ ಮಿಂಚೆ ಬರೆದು ಇವರ ಕನ್ನಡ ವಿರೋಧಿ ನಡೆಯನ್ನು ವಿರೋಧಿಸೋಣ.

ಇಲ್ಲಿಗೆ ಮಿಂಚೆ ಬರೆಯಿರಿ : info@bgu.co.in

ಅವರ ಫೇಸ್ ಬುಕ್ ಖಾತೆಯಲ್ಲೂ ಬರೆದು ವಿರೋಧಿಸಿ:

ಟ್ವಿಟ್ಟರ್ ನಲ್ಲೂ ಬರೆದು ವಿರೋಧಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Ganesha Utsav is one of the biggest festival in Bengaluru. But, it's being opposed for anti Kannada stand. The organizers invite people who don't know Kannada. Angadiyalli Kannada Nudi has asked the Kannadigas to oppose such initiatives.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ