ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಧಿಕೃತ ಫಲಕ ತೆರವಿಗೆ ಮುಹೂರ್ತ ಫಿಕ್ಸ್ ಮಾಡಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಮಾರ್ಚ್ 08: ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳು ಮತ್ತು ಫ್ಲೆಕ್ಸ್ ಗಳ ತೆರವಿಗೆ ಮಾ.16ರಂದು ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

ಮೇಯರ್, ಉಪಮೇಯರ್, ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ನಾಯಕರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗುತ್ತಿದೆ. ಪ್ರತಿ ತಂಡದಲ್ಲಿ 25 ಮಂದಿ ಕಾರ್ಪೊರೇಟರ್ ಗಳು ಹಾಗೂ ಅಧಿಕಾರಿಗಳು ಇರಲಿದ್ದಾರೆ. ಪ್ರತಿಯೊಂದು ತಂಡವೂ ಬೇರೆ ಬೇರೆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.

ಜೆಸಿಬಿ, ಕ್ರೇನ್ ಮತತ್ತು ಅಗತ್ಯ ಸಲಕರಣೆಗಳೊಂದಿಗೆ ತೆರಳಿ ಹೋರ್ಡಿಂಗ್ಸ್ ಗಳನ್ನು ಬುಡ ಸಮೇತ ತೆರವು ಮಾಡಲಾಗುವುದು. ಹಾಎಗಯೇ ಫ್ಲೆಕ್ಸ್ ಗಳನ್ನು ತೆಗೆಯಲಾಗುತ್ತದೆ. ಈ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗುತ್ತದೆ ಎಂದರು.

ಕೊನೆಗೂ ಕಣ್ಣುಬಿಟ್ಟ ಬಿಬಿಎಂಪಿ: ಅನಧಿಕೃತ ಫ್ಲೆಕ್ಸ್ ತೆರವುಕೊನೆಗೂ ಕಣ್ಣುಬಿಟ್ಟ ಬಿಬಿಎಂಪಿ: ಅನಧಿಕೃತ ಫ್ಲೆಕ್ಸ್ ತೆರವು

ಬಿಜೆಪಿಯ ಕೆ. ಉಮೇಶ್ ಶೆಟ್ಟಿ ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 5 ಕಿ.ಮೀ ಸುತ್ತಳತೆ ಹೊಂದಿದೆ. ಇಲ್ಲಿ ವಾರ್ಷಿಕ 200 ಕೋಟಿ ರೂ ಜಾಹಿರಾತು ಶುಲ್ಕ ಸಂಗ್ರಹವಾಗುತ್ತದೆ ಎಂದು ಹೇಳಿದರು.

ಎಲ್ಲಾ ವಾರ್ಡ್ ಕಚೇರಿಗಳಲ್ಲಿ ಆಧಾರ್ ಕೇಂದ್ರ

ಎಲ್ಲಾ ವಾರ್ಡ್ ಕಚೇರಿಗಳಲ್ಲಿ ಆಧಾರ್ ಕೇಂದ್ರ

ಬಿಬಿಎಂಪಿಯ ಎಲ್ಲ ವಾರ್ಡ್ ಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲಾಗುತ್ತದೆ, ಇಲ್ಲಿ ಹೆಸರು, ವಿಳಾಸ ಬದಲಾವಣೆ ಮತ್ತು ಇನ್ನಿತರೆ ತಿದ್ದುಪಡಿಗಳನ್ನು ಮಾಡಿಕೊಡಲಾಗುತ್ತದೆ. ಆಧಾರ್ ತಿದ್ದುಪಡಿಗೆ ಪಾಲಿಕೆ ಸದಸ್ಯರ ದೃಢೀಕರಣ ಪತ್ರಗಳನ್ನು ಪರಿಗಣಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ, ಪಾಲಿಕೆಯ ಕಾರ್ಪೊರೇಟರ್ ಗಳು ಜನರಿಗೆ ನೀಡಿದ ದೃಢೀಕರಣ ಪತ್ರಗಳನ್ನು ಪರಿಗಣಿಸಲು ಕೋರಿ-ಇ ಆಡಳಿತ ಇಲಾಖೆಗೆ ಆಯುಕ್ತರು ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೌನ್ಸಿಲ್ ಸಭೆಯು ನಿರ್ಣಯ ಕೈಗೊಂಡಿದೆ.

ನಾಗರಬಾವಿ ಮುಖ್ಯರಸ್ತೆಯಲ್ಲಿ ವೈಫೈ ಸೌಲಭ್ಯ

ನಾಗರಬಾವಿ ಮುಖ್ಯರಸ್ತೆಯಲ್ಲಿ ವೈಫೈ ಸೌಲಭ್ಯ

ನಾಗರಬಾವಿ ಮುಖ್ಯ ರಸ್ತೆಯ ಕಾನೂನು ಕಾಲೇಜಿನವರೆಗೆ 3ಕಿ.ಮೀ ಉದ್ದವಿದ್ದು, ಜಿಯೋ ಕಂಪನಿಯಿಂದ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೇವಲ 1.50-2 ಕೋಟಿ ರೂ ವೆಚ್ಚದಲ್ಲಿ ಮಾದರಿ ಫುಟ್ ಪಾತ್ ನಿರ್ಮಿಸಿದ್ದು, ಇಲ್ಲಿ ಜನರಿಗೆ ಉಚಿತ ವೈಫೈ ಸೇವೆ ಒದಗಿಸಲಾಗುತ್ತಿದ್ದು, ಶೀಘ್ರದಲ್ಲಿ ಉದ್ಘಾಟಿಸಲಾಗುತ್ತದೆ.

ಒಂಟಿ ಮನೆ ನಿರ್ಮಾಣಕ್ಕೆ ಎರಡು ಹಂತದಲ್ಲಿ ಹಣ ಮಂಜೂರು

ಒಂಟಿ ಮನೆ ನಿರ್ಮಾಣಕ್ಕೆ ಎರಡು ಹಂತದಲ್ಲಿ ಹಣ ಮಂಜೂರು

ಒಂಟಿ ಮನೆಗಳ ನಿರ್ಮಾಣಕ್ಕೆ ತಲಾ 2.50 ಲಕ್ಷ ರೂ ನಂತೆ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಬೇಕು. ಬಡ ನಿರ್ಗತಿಕರ ಸಂಖ್ಯೆ ಹೆಚ್ಚಿದ್ದು, ತಳಹದಿ ನಿರ್ಮಾಣಕ್ಕೂ ಹಣವಿರುವುದಿಲ್ಲ. ಹೀಗಾಗಿ, ಪಾಲಿಕೆಯಿಂದಲೇ ಮನೆ ಕಟ್ಟಿಸಿಕೊಡಬೇಕು, ಇಲ್ಲವೇ ಮುಂಗಡವಾಗಿ ನೆರವು ನೀಡಬೇಕು ಎಂದು ಬಿಜೆಪಿ ಸದಸ್ಯರ ನರಸಿಂಹ ನಾಯಕ ಒತ್ತಾಯಿಸಿದರು.

ಬಿಬಿಎಂಪಿಯ ವಿಕಾಸ ಸೌಧ ನಿರ್ಮಿಸಲು ಚಿಂತನೆ

ಬಿಬಿಎಂಪಿಯ ವಿಕಾಸ ಸೌಧ ನಿರ್ಮಿಸಲು ಚಿಂತನೆ

ಕೇಂದ್ರ ಕಚೇರಿ ಆವರಣದಲ್ಲೇ ಪಾಲಿಕೆ ವಿಕಾಸಸೌಧವನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಅದೇ ರೀತಿ ಬಿಬಿಎಂಪಿ ಗಡಿ ಭಾಗದಲ್ಲಿ ನಗರಕ್ಕೆ ಸ್ವಾಗತ ಕೋರುವ ಕಮಾನುಗಳನ್ನು ನಿರ್ಮಿಸಲಾಗುತ್ತದೆ. ಅಲ್ಲದೇ ಕೆಂಪೇಗೌಡ ಗಡಿ ಗೋಪುರ ನಿರ್ಮಾಣ ಕಾಮಗಾರಿಗೂ ಚಾಲನೆ ಕೊಡಲಾಗುವುದು ಎಂದು ಮೇಯರ್ ಹೇಳಿದ್ದಾರೆ.

ಬೆಂಗಳೂರಿನ ಎಲ್ಲಾ ಬೀದಿಗೂ ಎಲ್‌ಇಡಿ ಬೆಳಕು!ಬೆಂಗಳೂರಿನ ಎಲ್ಲಾ ಬೀದಿಗೂ ಎಲ್‌ಇಡಿ ಬೆಳಕು!

English summary
BBMP will start operation to evacuation of Unauthorized flexes on March 16 in Bengaluru. The BBMP has formed four teams of 25 members each including corporators and officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X