ನೋಟು ನಿಷೇಧದ ನೆನಪಿಗೆ ಇಟ್ಟುಕೊಂಡ ಆ 500ರ ನೋಟು!

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 08 : 500 ಮತ್ತು 100 ರೂ. ನೋಟು ಇತಿಹಾಸ ಸೇರಿ ವರ್ಷಗಳು ಉರುಳಿತು. ನೋಟುಗಳ ನಿಷೇಧದ ಕುರಿತು ಇಂದಿಗೂ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.

ದೂರದ ಶಿವಮೊಗ್ಗದಿಂದ ಬೆಂಗಳೂರಿಗೆ ದುಡಿಯಲು ಬಂದು ಪಿಜಿಯಲ್ಲಿರುವ ಶುಭ, ನ.8ರಂದು ನೋಟು ನಿಷೇಧವಾದ ದಿನದ ಅನುಭವವನ್ನು ಕಟ್ಟಿ ಕೊಟ್ಟಿದ್ದಾರೆ. ಆರೋಗ್ಯ ಹದಗೆಟ್ಟು, ನೋಟು ನಿಷೇಧವಾಗಿ ಹಣಕಾಸಿನ ಸ್ಥಿತಿಯೂ ಹದಗೆಟ್ಟಾಗ ಆದ ಅನುಭವ ವಿವರಿಸಿದ್ದಾರೆ ಓದಿ...

ಅಪನಗದೀಕರಣದಿಂದ ಚೀನಾ ವಸ್ತುಗಳ ಆಮದು ಹೆಚ್ಚಳ: ಮನಮೋಹನ್ ಸಿಂಗ್

Only 500 notes in hand how i struggled during demonetisation

ಆವತ್ತು ಸೋಮವಾರ ಅನ್ಸತ್ತೆ ಸಂಜೆ ಕಚೇರಿಯಿಂದ ಬರುವಾಗ ಪರ್ಸ್‌ನಲ್ಲಿ ಚಿಲ್ಲರೆ ಖಾಲಿಯಾಗಿತ್ತು. ನಾಲ್ಕು 500 ರೂ. ನೋಟುಗಳಿದ್ದವು, ಸಂಬಳವಾಗಿ ನಾಲ್ಕು ಮಾತ್ರವಾಗಿದ್ದರಿಂದ ಪರ್ಸ್‌ನಲ್ಲಿ ದೊಡ್ಡನೋಟುಗಳು ಭದ್ರವಾಗಿದ್ದವು. ಎಟಿಎಂಗೆ ಹೋಗಿ 100 ರೂ. ನೋಟುಗಳನ್ನು ತರಬೇಕು ಅಂದುಕೊಂಡೆ. ಆದರೆ, ತಲೆ ನೋವು ಬಹಳ ಇತ್ತು ಆದ್ದರಿಂದ ಪಿಜಿಗೆ ಬಂದು ನಿದ್ದೆಗೆ ಜಾರಿದೆ.

ಅಪನಗದೀಕರಣದ ಸಕಾರಾತ್ಮಕ ಸಂಗತಿಗಳು

ಮೊದಲೇ ನ್ಯೂಸ್ ನೋಡೋ ಅಭ್ಯಾಸ ನಂಗಿಲ್ಲ. ಜೊತೆಗೆ ತಲೆ ನೋವು ಬೇರೆ. ಪೋನ್ ದೂರಕ್ಕೆ ಎಸೆದು, ದಿಂಬಿಗೆ ತಲೆ ಕೊಟ್ಟೆ. ಮಧ್ಯರಾತ್ರಿ ಎಚ್ಚರವಾಯಿತು. ತಲೆ ನೋವು ಹೆಚ್ಚಾಗಿತ್ತು, ಜ್ವರ ಬಂದಿತ್ತು. ಬೆಳಗ್ಗೆ ಕ್ಲಿನಿಕ್‌ಗೆ ಹೋದರೆ ಆಯಿತು ಎಂದು ಮಲಗಿದೆ.

ಬೆಳಗ್ಗೆ ಎದ್ದರೆ ಪಿಜಿಯಲ್ಲಿ ಎಲ್ಲರ ಬಾಯಲ್ಲೂ ನೋಟು ನಿಷೇಧದ್ದೇ ಮಾತು. ಪ್ರಧಾನಿ ಮೋದಿ ರಾತ್ರಿ ಭಾಷಣ ಮಾಡಿ 500 ಮತ್ತು 1000 ರೂ. ನೋಟುಗಳನ್ನು ಇತಿಹಾಸ ಸೇರಿಸಿದ್ದರು. ಡಾಕ್ಟರ್ ಬಳಿಗೆ ಹೋಗಬೇಕು ಅಂದುಕೊಂಡ ನನಗೆ ಶಾಕ್ ಆಗಿತ್ತು. ಕಚೇರಿಗೆ ರಜೆ ಹಾಕಿ ಪಿಜಿಯಲ್ಲಿ ಉಳಿದೆ.

ಅಪನಗದೀಕರಣದ ಆಘಾತಕ್ಕೆ ಮೊದಲ ವಾರ್ಷಿಕೋತ್ಸವ: ಗೆಲುವೋ, ಸೋಲೋ?!

ಪರ್ಸ್‌ನಲ್ಲಿದ್ದ 500 ರೂ. ನಾಲ್ಕು ನೋಟುಗಳು ಯಾವುದೇ ಚಿಂತೆ ಇಲ್ಲದಂತೆ ಕುಳಿತಿದ್ದವು. ಫ್ರೆಂಡ್ಸ್ ಬಳಿ ಕೆಳೋಣ ಎಂದರೆ ಎಲ್ಲರ ಕೈಯಲ್ಲಿ ಇದ್ದಿದ್ದು ಕೆಲವು ರೂಪಾಯಿಗಳ ಚಿಲ್ಲರೆ ಮಾತ್ರ. ನೋಟು ನಿಷೇಧದಿಂದಾಗಿ ಅದನ್ನು ಕೊಡಲು ಅವರು ಹಿಂದೇಟು ಹಾಕಿದರು.

ಏನೂ ಮಾಡಲು ತೋಚದೆ, ಪಿಜಿಯಲ್ಲಿದ್ದ ಮಾತ್ರೆ ತಿಂದು ಸುಮ್ಮನೆ ಕುಳಿತಿದ್ದಾಯಿತು. ಜ್ವರ ಏರ ತೊಡಗಿತು. ಜೊತೆ ಕೈಯಲ್ಲಿ ದುಡ್ಡಿಲ್ಲ ಎಂಬ ನೋವು ಜ್ವರವನ್ನು ಇನ್ನಷ್ಟು ಹೆಚ್ಚಿಸಿತು. ಮಧ್ಯಾಹ್ನದ ವೇಳೆಗೆ ಸ್ವಲ್ಪ ಸುಧಾರಿಸಿಕೊಂಡ ಮೇಲೆ ಸ್ನೇಹಿತನಿಗೆ ಕರೆ ಮಾಡಿದೆ.

ನವೆಂಬರ್ 8ರಂದು ಬಿಜೆಪಿಯಿಂದ ಕಪ್ಪು ಹಣ ವಿರೋಧಿ ದಿನ

ಆತ ಜರ್ನಲಿಸ್ಟ್, ನೋಟು ನಿಷೇಧವಾದ ಬಳಿಕ ಕೆಲಸದಲ್ಲಿ ಬಹಳ ಬ್ಯುಸಿಯಾಗಿದ್ದ. ಮಾತಾಡಿದ ಕೆಲವೇ ನಿಮಿಷದಲ್ಲಿ ಎಲ್ಲವನ್ನು ವಿವರಿಸಿದೆ. ಸರಿ ಎಂದಷ್ಟೇ ಹೇಳಿ, ಆ ಮೇಲೆ ಪೋನ್ ಮಾಡುವೆ ಎಂದ. ಸಂಜೆ 6 ಗಂಟೆಗೆ ಮೆಸೇಜ್ ಬಂತು. '100 ರೂ.ಗಳ 20 ನೋಟಿದೆ, ಬೆಳಗ್ಗೆ ಸಿಕ್ತಿನಿ...ಟೇಕ್ ಕೇರ್‌. ಸ್ವಲ್ಪ ಜೀವ ಬಂತು.

ಮೆಸೇಜ್ ಮಾಡಿದಂತೆ ನ.9ರಂದು ಬೆಳಗ್ಗೆ ಸಿಕ್ಕ, ಪದ್ಮನಾಭನಗರದಲ್ಲಿ ಭೇಟಿ. ಎರಡು ಇಡ್ಲಿ ಕೊಡಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋದ. ಇಂಜೆಕ್ಷನ್ ಕೊಡಿಸಿ, ಡಾಕ್ಟರ್ ಕೊಟ್ಟ ಮಾತ್ರೆಯನ್ನೆಲ್ಲ ತಂದು ಕೈಗಿಟ್ಟ. ಟಿಕೆಟ್ ಬುಕ್ ಮಾಡಿಕೊಡು ಊರಿಗೆ ಹೋಗ್ತಿನಿ ಅಂದೆ. ಪಿಜಿಗೆ ಹೋಗು ಸಂಜೆ ಹೊರಡು ಎಂದು ಹೇಳಿ ಆಫೀಸಿಗೆ ಹೋದ.

ಸಂಜೆ ಇಬ್ಬರು ಒಟ್ಟಿಗೆ ಮೆಜೆಸ್ಟಿಕ್‌ಗೆ ಹೋದ್ವಿ. ಬಸ್ ಹತ್ತುವ ಮುನ್ನ 100 ರೂ.ಗಳ 20 ನೋಟು ಕೊಟ್ಟ. ಪರ್ಸ್‌ನಲ್ಲಿದ್ದ 500 ರೂ.ಗಳ 4 ನೋಟನ್ನು ಅವನಿಗೆ ಕೊಟ್ಟೆ. ಬಸ್ ಹೊರಟಿತು.

ಅಂದು ನಾನು ಕೊಟ್ಟ ನೋಟುಗಳಲ್ಲಿ ಒಂದು ನೋಟನ್ನು ಇನ್ನೂ ಹಾಗೆ ಇಟ್ಟುಕೊಂಡಿದ್ದಾನೆ. ಅದೇನಕ್ಕೆ ಪರ್ಸನಲ್ಲಿದೆ ಅಂದ್ರೆ? ಇದು ನಿನ್ನ ನೆನೆಪಿಗಲ್ಲ ನೋಟು ನಿಷೇಧದ ನೆನಪಿಗೆ ಎಂದು ಯಾವಾಗಲೂ ಹೇಳ್ತಾ ಇರ್ತಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A private company employee in Bengaluru Shuba shared her experience about demonetisation. In the time of demonetisation she is suffered from fever and struggled for treatment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ