ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 120ರುಗೆ ನಿಗದಿ ಪಡಿಸಿ"

By Mahesh
|
Google Oneindia Kannada News

ಬೆಂಗಳೂರು, ಮಾ. 06: ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್ ದರ ನಿಗದಿಪಡಿಸಲು ಆಗ್ರಹಿಸಲಾಗಿದೆ. ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಮಲ್ಟಿಪೆಕ್ಸ್ ಚಿತ್ರಮಂದಿರದ ಪ್ರದರ್ಶಕರು ಟಿಕೆಟ್ ದರವನ್ನು ಸರಿಯಾಗಿ ನಿಗದಿ ಪಡಿಸಿಲ್ಲ. 120 ರು ನಿಂದ 450 ರು ತನಕ ಟಿಕೆಟ್ ಬೆಲೆ ಇದೆ. ಕನ್ನಡ ಸಿನಿಮಾ ಟಿಕೆಟ್ ಬೆಲೆ ವಾರದ ದಿನಗಳಲ್ಲಿ ಮಾತ್ರ 120 ರು ನಷ್ಟಿರುತ್ತದೆ.

ವಾರಾಂತ್ಯದಲ್ಲಿ ಟಿಕೆಟ್ ದರದಲ್ಲಿ ಭಾರಿ ವ್ಯತ್ಯಾಸ ಕಂಡು ಬರುತ್ತದೆ. ಇದು ಜನ ಸಾಮಾನ್ಯರಿಗೆ ಭಾರಿ ತೊಂದರೆ ಉಂಟು ಮಾಡುತ್ತಿದೆ. ಸರಿಯಾದ ಕಲೆಕ್ಷನ್ ಇಲ್ಲ ಎಂದು ಹೇಳಿ ಪ್ರದರ್ಶಕರು ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುತ್ತಿದ್ದಾರೆ. [ಕಾಂಗ್ರೆಸ್ ಸರ್ಕಾರದಿಂದ 'ಜನತಾ ಥಿಯೇಟರ್' ಸ್ಥಾಪನೆ]

Online petition to fix the ticket cost as 120/- for all films Multiplexes in Karnataka

ತಮಿಳುನಾಡಿನಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಬೆಲೆ ಗರಿಷ್ಠ 120 ರು ನಷ್ಟಿದೆ. ಇದು ಎಲ್ಲಾ ಸಿನಿಮಾ ಹಾಗೂ ವಾರದ ಎಲ್ಲಾ ದಿನಗಳಿಗೂ ಅನ್ವಯವಾಗುತ್ತದೆ. ಇದೇ ರೀತಿ ಏಕರೂಪ ಟಿಕೆಟ್ ನಿಗದಿ ನಿಯಮವನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು. [ಅಗ್ಗದ ದರದಲ್ಲಿ ಕೇಬಲ್ ಸೇವೆ ನೀಡಲಿದೆ ಸರ್ಕಾರ]

ವಾರದ ಎಲ್ಲಾ ದಿನಗಳಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಒಂದೇ ರೂಪದ ಟಿಕೆಟ್ ದರವನ್ನು ಜಾರಿಗೊಳಿಸುವಂತೆ ಈ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದು ಚಿತ್ರಕರ್ಮಿ ದಯಾಳ್ ಪದ್ಮನಾಭನ್ ಅವರು ತಮ್ಮ ಪಿಟೀಷನ್ ನಲ್ಲಿ ಹೇಳಿದ್ದಾರೆ.['ಆಕ್ಟರ್' ಅಂತರಂಗ ಕಂಡ ವಿಮರ್ಶಕರು ನೀಡಿದ ಮಾರ್ಕ್ಸ್ ಎಷ್ಟು?]

ದಯಾಳ್ ಪದ್ಮನಾಭನ್ ಅವರ ಆನ್ ಲೈನ್ ಅರ್ಜಿಗೆ ನಿರ್ಮಾಪಕ ಕೆಎಂ ವೀರೇಶ್, ನಟ ನವೀನ್ ಕೃಷ್ಣ, ಧನಂಜಯ್ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ದಯಾಳ್ ಅವರ ಮನವಿಗೆ ಸಮ್ಮತಿಸುವವರು ಆನ್ ಲೈನ್ ಅರ್ಜಿಗೆ ಸಹಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

English summary
The mulplexes in Karnataka do not have fixed rate on the ticket cost. They vary the ticket cost to their comfort of self benefit which falls between Rs.120/- to RS.450/. Director Dayal padmanabhan and others demand /request the government of Karnataka to fix the ticket cost of multiplexes in karnataka as 120/- through out the week .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X