ಆನ್‌ಲೈನ್ ಕ್ಯಾಂಪೆನ್‌ನಿಂದ ಬದಲಾದ ಮೋನಾಳ ಜೀವನ

Written By:
Subscribe to Oneindia Kannada

ಬೆಂಗಳೂರು, ಜೂನ್, 09: ಇಂದು ಆಕೆಯ ಕಣ್ಣಲ್ಲಿ ನಗುವಿದೆ, ಕೈ ಯಲ್ಲಿ ಮಗು ಆಡುತ್ತಿದೆ. ಒಂದೆಡೆ ಡೆಂಗ್ಯೂ ಮಹಾಮಾರಿ, ಇನ್ನೊಂದೆಡೆ ರಕ್ತ ಕೊರತೆ, ಮೆದುಳಿಗೆ ಆಗುತ್ತಿರುವ ರಕ್ತ ಸಂಚಾರದ ಸಮಸ್ಯೆ ಎಲ್ಲವನ್ನು ಆಕೆ ಮೆಟ್ಟಿ ನಿಂತಿದ್ದಾಳೆ.

ಕಳೆದ ಏಪ್ರಿಲ್ ನಲ್ಲಿ ಜೀವನದ ಕೊನೆಯ ಘಟ್ಟಕ್ಕೆ ತಲುಪಿದ ದಿನಗೂಲಿ ಕೆಲಸ ಮಾಡುತ್ತಿದ್ದ ಶಂಕುತಲಾ ಸರ್ದಾರ್ (ಮೋನಾ) ಇಂದು ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಆಕೆಯ ಕೈಯಲ್ಲಿ ಇಂದು ಆರೋಗ್ಯವಂತ ಶಿಶುವಿದೆ.[ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!]

online

ಇದಕ್ಕೆಲ್ಲ ಕಾರಣವಾಗಿದ್ದು ಆನ್ ಲೈನ್ ಕ್ಯಾಂಪೇನ್, ಮೋನಾ ಅವರನ್ನು ಉಳಿಸಿ ಅಭಿಯಾನಕ್ಕೆ ಒಂದಾದ ಹಣದಿಂದ ಆಕೆಗೆ ಚಿಕಿತ್ಸೆ ಲಭ್ಯವಾಗಿದೆ.[ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

ಈಕೆಯ ಕರುಣಾಜನ ಕತೆಯನ್ನು ಕಂಡ ಬೆಂಗಳೂರಿನ ಸುಮನ್ ಬೋಲಾರ್ ಎಂಬುವರು ಆನ್ ಲೈನ್ ಕ್ಯಾಂಪೇನ್ ಆರಂಭಿಸಿ ಹಣ ಸಂಗ್ರಹಣೆಗೆ ಮುಂದಾದರು. 10 ಲಕ್ಷ ರು. ಸಂಗ್ರಹದ ಗುರಿ ಹೊಂದಿದ್ದ ಕ್ಯಾಂಪೇನ್ 6 ಲಕ್ಷದ 90 ಸಾವಿರ ರು. ಕಲೆಹಾಕಿತು. ಮೋನಾ ಅವರ ಚಿಕಿತ್ಸೆಯ ಎಲ್ಲ ಚಿತ್ರಗಳನ್ನು ಅಪ್ ಲೋಡ್ ಮಾಡಲಾಗುತ್ತಿತ್ತು.

ಈಗಲೂ ಮೋನಾ ಅವರಿಗೆ ತಮ್ಮ ಬಲಗೈ ಉಪಯೋಗಿಸಲು ಆಗುತ್ತಿಲ್ಲ. ಆಕೆಯ ಗಂಡ ಕಮಲ್ ಮೋನಾ ಮತ್ತು ಮಗು ಕೀಯಾಳ ಆರೈಕೆ ನೋಡಿಕೊಳ್ಳುತ್ತಿದ್ದಾರೆ. ನೀವು ಸಹ ಮೋನಾ ಅವರ ಚಿಕಿತ್ಸೆಗೆ ನೆರವಾಗುವುದಾದರೆ ಸಹಾಯ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Towards the end of April this year, Shakuntala Gayan Sardar, fondly known as Mona, suffered an ischemic stroke. Mona, a domestic worker, was then eight months pregnant and was also suffering from dengue and a severe urinary tract infection.
Please Wait while comments are loading...