ಟೊಮ್ಯಾಟೊ ಆಯ್ತು, ಈಗ ಈರುಳ್ಳಿ ಬೆಲೆಯೂ ಮುಗಿಲು ಮುಟ್ಟುತ್ತಾ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 12: ಟೊಮ್ಯಾಟೋ ಉಪಯೋಗಿಸಿ ಅಡುಗೆ ಮಾಡುವವರೇ ಶ್ರೀಮಂತರು ಎಂಬಂಥ ಸನ್ನಿವೇಶ ಕಳೆದ ಎರಡು ತಿಂಗಳ ಹಿಂದೆ ಸೃಷ್ಟಿಯಾಗಿತ್ತು. ಆದರೆ ಇನ್ನು ಕೆಲವೇ ದಿನಗಳಲ್ಲಿ ಈರುಳ್ಳಿ ಬಳಸುವವರನ್ನೂ ಶ್ರೀಮಂತರು ಎಂದು ಕರೆಯುವ ಪರಿಸ್ಥಿತಿ ಬಂದೀತಾ?

ಟೊಮ್ಯಾಟೋ ಕಾಯಲು ಭದ್ರತಾ ಸಿಬ್ಬಂದಿ

ಮಾರುಕಟ್ಟೆ ತಜ್ಞರ ಪ್ರಕಾರ ಈರುಳ್ಳಿ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಕೆ.ಜಿ.ಗೆ 80 ರೂ.ಗಿಂತ ಜಾಸ್ತಿಯಾಗಲಿದೆ. ಒಂದು ಕಾಲದಲ್ಲಿ ಈರುಳ್ಳಿ ದರ ಪೂರ್ತಿ ಬಿದ್ದು, 20 ರೂ. ಗೆ ಮೂರು ಕೆಜಿ ಈರುಳ್ಳಿಯೂ ಸಿಗುವಂತಾಗಿತ್ತು. ಆದರೆ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಈರುಳ್ಳಿ ಬೆಳೆಯಿಲ್ಲದಿರುವುದರಿಂದ ಬೆಲೆ ಏರುವ ಎಲ್ಲಾ ಸಾಧ್ಯತೆಗಳಿವೆ.

Onion price will be hiked soon in Karnataka

ಈಗಾಗಲೇ ಹಾಪ್ ಕಾಮ್ಸ್ ನಲ್ಲಿ 30 ರೂ. ಇದ್ದ ದರ ಈಗ ಕೆ.ಜಿ.ಗೆ 45 ರೂ. ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ 80 ರೂ. ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈರುಳ್ಳಿ ಕೊಳ್ಳುವಾಗಲೂ ಕಣ್ಣಿರು ಸುರಿಸಬೇಕಾದ ಪರಿಸ್ಥಿತಿ ಗ್ರಾಹಕನದು!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Onion price will be hiked in few days. The price will reach upto 80 rupees soon' Market experts told.
Please Wait while comments are loading...