ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ರೈತ ಕಂಗಾಲು

Posted By: Prithviraj
Subscribe to Oneindia Kannada

ಬೆಂಗಳೂರು, ಅಕ್ಟೋಬರ್, 13 : ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಈರುಳ್ಳಿ ಬೆಲೆ ಕುಸಿದಿದ್ದು, ಮಾರುಕಟ್ಟೆಗಳಲ್ಲಿ ಕೊಳ್ಳುವವರಿಲ್ಲದೆ ಈರುಳ್ಳಿ ಬೆಳೆಗಾರರು ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.

ರಾಜ್ಯದ ವಿವಿಧ ಎಪಿಎಂಸಿ ಯಾರ್ಡ್ ಗಳಲ್ಲಿ ಒಂದು ಕೆ.ಜಿ ಈರುಳ್ಳಿ ದರ 1ರಿಂದ 5ರೂಗೆ ಸೀಮಿತವಾಗಿದ್ದರೂ, ವ್ಯಾಪಾರ ವಹಿವಾಟು ನಡೆಯದೆ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ.

ಕಳೆದ ವರ್ಷ 3ರಿಂದ 5ಸಾವಿರ ರೂ ಗಳಷ್ಟಿದ್ದ ಕ್ವಿಂಟಾಲ್ ಈರುಳ್ಳಿ ದರ ಈ ವರ್ಷ 250ರಿಂದ 300ರೂ.ಗೆ ಕುಸಿದು 20 ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಕಾವೇರಿ ನದಿ ನೀರು ವಿವಾದದಿಂದ ಬೆಂಗಳೂರು ಮಾರುಕಟ್ಟೆ ವ್ಯಾಪರ ವಹಿವಾಟು ಸ್ಥಗಿತಗೊಂಡಿದ್ದು ಮತ್ತು ತಮಿಳುನಾಡು ವ್ಯಾಪಾರಿಗಳು ಈರುಳ್ಳಿ ಖರೀದಿಗೆ ಇತ್ತ ಸುಳಿಯದಿರುವುದು ಈರುಳ್ಳಿ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

20 ವರ್ಷ ಕನಿಷ್ಠ ಮಟ್ಟಕ್ಕೆ ಈರುಳ್ಳಿ ಬೆಲೆ

ಚಿಲ್ಲರೆ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ, 7ರಿಂದ 8ರೂ. ಮಧ್ಯಮ ಗಾತ್ರದ ಈರುಳ್ಳಿ 15ರೂ. ಮತ್ತು ದೊಡ್ಡ ಗಾತ್ರದ ಈರುಳ್ಳಿಗೆ 20ರೂ. ಬೆಲೆ ನಿಗದಿ ಪಡಿಸಲಾಗಿದೆ.

ಉತ್ತಮ ಬೆಲೆ ದೊರೆಯದೆ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರು ಈರುಳ್ಳಿಯನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಂಡು ಬೆಂಬಲೆ ಬೆಲೆ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.

ವಿವಿಧ ಎಪಿಎಂಸಿ ಯಾರ್ಡ್ ಗಳಲ್ಲಿ ಈರುಳ್ಳಿ ಬೆಲೆ

* ಬೆಂಗಳೂರು 1ರಿಂದ 7ರೂ.
* ಹುಬ್ಬಳ್ಳಿ 4ರಿಂದ 5ರೂ.
* ದಾವಣಗೆರೆ 2ರಿಂದ 5ರೂ.
* ಚಿತ್ರದುರ್ಗ 2ರಿಂದ 3ರೂ.
* ಹಾವೇರಿ 4 ರಿಂದ 5ರೂ.
* ಮೈಸೂರು 4ರಿಂದ 5ರೂ.
* ಧಾರವಾಡ 4ರಿಂದ 3ರೂ.

ಚಿಲ್ಲರೆ ಮಾರುಕಟ್ಟೆ ಬೆಲೆ

* ಸಣ್ಣ ಈರುಳ್ಳಿ- 1ರಿಂದ 2ರೂ.
* ಮಧ್ಯಮ ಗಾತ್ರ -15ರೂ.
* ದೊಡ್ಡ ಈರುಳ್ಳಿ- 20ರೂ.

ಹಾಪ್ ಕಾಮ್ಸ್ ದರ

*ಪ್ರತಿ ಕೆ.ಜಿ.ಗೆ 18ರೂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Onion price hit rock bottom two decades, across major market yards in the state.
Please Wait while comments are loading...