ಕರ್ನಾಟಕದ ಬೆಳೆಗಾರರ ಕಣ್ಣೀರು ಬಸಿದ ಈರುಳ್ಳಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್, 26: ಕಳೆದ ಎರಡು ದಶಕಗಳಲ್ಲೆ ಅತ್ಯಂತ ಕಡಿಮೆ ಮಟ್ಟಕ್ಕೆ ಈರುಳ್ಳಿ ಬೆಲೆ ಕುಸಿದಿದ್ದು, ರಾಜ್ಯದ ಎಪಿಎಂಸಿ ಯಾರ್ಡ್ ಗಳಲ್ಲಿ ಈರುಳ್ಳಿ ದರ 1.ರಿಂದ 5ರೂ.ಗೆ ಸೀಮಿತವಾಗಿದೆ.

ಬೆಳದ ಬೆಳೆಗೆ ಉತ್ತಮ ಬೆಲೆ ದೊರೆಯದೇ ಜೀವನ ಹೇಗೆ ನಡೆಸುವುದು ಎಂಬ ಚಿಂತೆಯಲ್ಲಿ ಬೆಳೆಗಾರರು ಮುಳುಗಿದ್ದಾರೆ. ಕಳೆದ ವರ್ಷ ಕ್ವಿಂಟಾಲ್ ಈರುಳ್ಳಿಗೆ ರೂ. 3ರಿಂದ 5ಸಾವಿರ ಬೆಲೆ ಸಿಗುತ್ತಿತ್ತು. ಈ ವರ್ಷ ಕೇವಲ 260ರಿಂದ 300ರೂಗೆ ಬಲೆ ಕುಸಿದಿದೆ.

Onion price fall to 20years low, APMC yards at 1 to 5 Rs

ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ಬೆಲೆ ಕೆ.ಜಿ.ಗೆ 15ರೂ.ಯಂತೆ ಮಾರಾಟವಾಗುತ್ತಿದೆ. ಬೆಳೆದ ರೈತರಿಗೆ ಕಿಸೆಗೆ ಕನ್ನ ಬಿದ್ದಿದೆ. ಕೊಳ್ಳುವ ಗ್ರಾಕರ ಜೇಬಿಗೂ ಕತ್ತರಿ ಬೀಳುತ್ತಿದೆ. ಹಾಗಾದರೆ ಈ ವ್ಯತ್ಯಾಸದ ಹಣ ಯಾರ ಕೈ ಸೇರುತ್ತಿದೆ ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. [ಬರ್ರೀ ಲೇ ಇಲ್ಲೇ ನನ್ನ ಉಳ್ಳಾಗಡ್ಡಿ ರೊಕ್ಕ ಕೊಡಿಸ್ರೋ!]

ಈರುಳ್ಳಿ ಬೆಳೆಗಾರರು ಕಂಗಾಲಾಗುವುದು ಬೇಡ : ಸಚಿವ ಟಿ.ಬಿ. ಜಯಚಂದ್ರ ಭರವಸೆ

ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದು ಸೂಕ್ತ ಬೆಲೆ ಸಿಗದೇ, ರೈತರು ಕಂಗಾಲಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದ್ದಾರೆ.

Onion price fall to 20years low, APMC yards at 1 to 5 Rs

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಈಗಾಗಲೇ ಪ್ರತಿ ಕೆಜಿ ಈರುಳ್ಳಿಗೆ 11 ರೂಪಾಯಿ ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದು ತಿಳಿಸಿದರು. ಇಂದು ಮತ್ತು ನಾಳೆ ಒಳಗಾಗಿ ಕೇಂದ್ರ ಸರ್ಕಾರದಿಂದ ಬೆಲೆ ನಿಗದಿ ಆಗಲಿದ್ದು, ಈರುಳ್ಳಿಯನ್ನು ಖರೀದಿಸಲಾಗುವುದು ಎಂದು ಸಚಿವ ಜಯಚಂದ್ರ ಅವರು ತಿಳಿಸಿದರು.

ಈರುಳ್ಳಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು:

ಇತರೆ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ರೈತರು ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ದಸರಾ ಹಬ್ಬದ ಸಂಭ್ರಮದಲ್ಲಿ ಈರುಳ್ಳಿ ರಫ್ತು ಎರಡು ಮೂರು ದಿನ ಮಾಡಲಾಗಿಲ್ಲ. ಆದರೆ ಹಬ್ಬ ಮುಗಿದ ನಂತ ಒಮ್ಮೇಲೆ ರಫ್ತು ಮಾಡಲಾಗಿದೆ.

ಮಹಾರಾಷ್ಟ್ ಮತ್ತು ರಾಜಸ್ತಾನಗಳಿಂದ ಬಂದಿರುವ ಈರುಳ್ಳಿ ದಾಸ್ತಾನು ಖಾಲಿಯಾಗುವ ಮೊದಲೇ ರೈತರು ಹೆಚ್ಚಾಗಿ ಈರುಳ್ಳಿ ಬೆಳೆದಿದ್ದಾರೆ. ಮಹಾರಾಷ್ಟ್ರದ ಈರುಳ್ಳಿ ರಾಜ್ಯ ಬೆಳೆಗಾರರ ಈರುಳ್ಳಿಗಿಂತ ಗುಣಮಟ್ಟದ್ದಾಗಿವೆ.

ಕಾವೇರಿ ನದಿ ನೀರು ವಿವಾದಿಂದ ತಮಿಳುನಾಡು ವ್ಯಾಪರಸ್ಥರೂ ಸಹ ಈರುಳ್ಳಿ ಖರೀದಿಸಲು ಈಕಡೆ ಸುಳಿದಿಲ್ಲ. ಇದಷ್ಟೆ ಅಲ್ಲದೇ ರಾಜ್ಯದಲ್ಲಿ ಈರುಳ್ಳಿ ರಫ್ತಿಗೆ ಸರಿಯಾದ ವ್ಯವಸ್ಥೆ ಕೂಡ ಇಲ್ಲ. ಸಾಲದೆಂಬಂತೆ ಎಪಿಎಂಸಿಗಳಲ್ಲಿ ಉತ್ತಮ ಗೋದಾಮುಗಳೂ ಸಹ ಇಲ್ಲ.

ರಾಜ್ಯದ ವಿವಿಧ ಎಪಿಎಂಸಿ ಯಾರ್ಡ್ ಗಳಲ್ಲಿ ಈರುಳ್ಳಿ ದರ

* ಬೆಂಗಳುರು- 1ರಿಂದ 5ರೂ.
* ಹುಬ್ಬಳ್ಳಿ- 2ರಿಂದ 5ರೂ.
* ದಾವಣಗೆರೆ- 2ರಿಂದ 5ರೂ.
* ಚಿತ್ರದುರ್ಗ- 2ರಿಂದ 3ರೂ.
* ಹಾವೇರಿ- 1ರಿಂದ 5ರೂ.
* ಮೈಸೂರು- 1ರಿಂದ 5ರೂ.
* ಧಾರವಾಡ- 2ರಿಂದ 3ರೂ.

ಚಿಲ್ಲರೆ ಮಾರುಕಟ್ಟೆ ಬೆಲೆ

* ಸಣ್ಣ ಈರುಳ್ಳಿ- 5ರಿಂದ 8ರೂ.
* ಮಧ್ಯಮ ಗಾತ್ರದ ಈರುಳ್ಳಿ -15ರೂ.
* ದೊಡ್ಡ ಗಾತ್ರದ ಈರುಳ್ಳಿ- 20ರೂ.

* ಹಾಪ್ ಕಾಮ್ಸ್ ಬೆಲೆ- 18ರೂ.
* ಬಿಗ್ ಬಜಾರ್- 19ರೂ.
* ಮೋರ್ ಸೂಪರ್ ಮಾರ್ಕೆಟ್- 16ರೂ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Onion prices crashed further to as low as Rs 1 to 5 in the APMC yard and Rs 15 in the retail as a glut of supplies from across the state. The price is the lowest in the last twenty years.
Please Wait while comments are loading...