ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆ ನಿವೇಶನಕ್ಕೆ ಅರ್ಜಿ, ನಿಮಗಿದು ತಿಳಿದಿರಲಿ

|
Google Oneindia Kannada News

ಬೆಂಗಳೂರು, ನವೆಂಬರ್ 03 : ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶಗಳನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಿರುವ ಬಿಡಿಎ ಉದ್ಯಾನ ನಗರಿಯ ಜನರಿಗೆ ದೀಪಾವಳಿ ಕೊಡುಗೆ ನೀಡಿದೆ. ಸುಮಾರು 10 ವರ್ಷಗಳ ಬಳಿಕ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆಂಪೇಗೌಡ ಬಡಾವಣೆಯಲ್ಲಿನ 5 ಸಾವಿರ ನಿವೇಶಗಳನ್ನು ಹಂಚಿಕೆ ಮಾಡುತ್ತಿದೆ. 2015ರ ನವೆಂಬರ್ 2ರಿಂದಲೇ ವಿವಿಧ ಬ್ಯಾಂಕ್‌ಗಳಲ್ಲಿ ಅರ್ಜಿಗಳು ದೊರೆಯುತ್ತಿವೆ. [ಯಾವ ಬ್ಯಾಂಕುಗಳಲ್ಲಿ ಅರ್ಜಿ ಸಿಗುತ್ತೆ?]

kempegowda layout

ಎಲ್ಲಿದೆ ಕೆಂಪೇಗೌಡ ಬಡಾವಣೆ? : ಬಿಡಿಎ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ನಿರ್ಮಾಣ ಮಾಡಿದೆ. ಸುಮಾರು 25 ಸಾವಿರ ನಿವೇಶಗಳನ್ನು ಬಡಾವಣೆಯಲ್ಲಿ ನಿರ್ಮಿಸುವ ಗುರಿ ಇದೆ. ಪ್ರಸ್ತುತ ಐದು ಸಾವಿರ ನಿವೇಶಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದೆ. [ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಪಡೆಯಿರಿ]

ನಿವೇಶನದ ದರಗಳು : ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿವೇಶನಗಳ ದರಗಳನ್ನು ಅಂತಿಮಗೊಳಿಸಲಾಗಿದೆ. ಸಾಮಾನ್ಯ ವರ್ಗದವರು 20x30ರ ನಿವೇಶನಕ್ಕೆ ಚದರ ಅಡಿಗೆ ರೂ. 1,800 ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರು ರೂ. 900 ಪಾವತಿ ಮಾಡಬೇಕಾಗಿದೆ.

30x40ರ ನಿವೇಶನಕ್ಕೆ ಚದರ ಅಡಿಗೆ 2000 ರೂ., 40x60ರ ನಿವೇಶನಕ್ಕೆ ಚದರ ಅಡಿಗೆ 2,200 ಮತ್ತು 50x80ರ ನಿವೇಶನಕ್ಕೆ ಚದರ ಅಡಿಗೆ 2,500 ರೂ. ದರ ನಿಗದಿಪಡಿಸಲಾಗಿದೆ. ಬ್ಯಾಂಕ್‌ನಲ್ಲಿ ಅರ್ಜಿ ಪಡೆಯಲು ಆರ್ಥಿಕವಾಗಿ ಹಿಂದುಳಿದವರಿಗೆ/ಪ.ಜಾ/ಪ.ಪಂಗಡದವರಿಗೆ 200 ರೂ., ಇತರ ಎಲ್ಲಾ ವರ್ಗದವರು 400 ರೂ. ಅರ್ಜಿ ಶುಲ್ಕ ನಿಗದಿಪಡಿಲಾಗಿದೆ.

ನವೆಂಬರ್ 2ರ ಸೋಮವಾರದಿಂದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ವಿವಿಧ ಜಿಲ್ಲೆಗಳ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ ಅರ್ಜಿಗಳು ದೊರೆಯುತ್ತಿವೆ. ಆರಂಭಿಕ ಠೇವಣಿಯ ಜೊತೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2015.

5,000 ನಿವೇಶನ ಮಾತ್ರ ಹಂಚಿಕೆ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆಂಪೇಗೌಡ ಬಡಾವಣೆಯಲ್ಲಿ 25,000 ನಿವೇಶನ ನಿರ್ಮಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ 2,600 ಎಕರೆ ಜಮೀನು ಅಗತ್ಯವಿದೆ. ಸದ್ಯ, 2,000 ಎಕರೆ ಪ್ರದೇಶದ ಭೂ ಸ್ವಾಧೀನ ಅಂತ್ಯಗೊಂಡಿದೆ. ಆದ್ದರಿಂದ, ಮೊದಲ ಹಂತದಲ್ಲಿ 5000 ನಿವೇಶನ ಹಂಚಿಕೆಗೆ ಅರ್ಜಿ ಕರೆಯಲಾಗಿದೆ.

ಇದು ಮೊದಲ ಹೆಜ್ಜೆ : 'ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಮನೆಯೊಂದನ್ನು ಹೊಂದಬೇಕೆಂಬ ಕನ್ನಡಿಗರ ಬಹು ದಿನಗಳ ಕನಸನ್ನು ನನಸು ಮಾಡಲು ತಮ್ಮ ಸರ್ಕಾರ ಮುಂದಾಗಿದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹೆಜ್ಜೆಯಾಗಿ ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ' ಎಂದು ಹೇಳಿದ್ದಾರೆ.

English summary
Oneindia Kannada explainer : Bangalore Development Authority (BDA) has invited applications for sites in the Kempegowda Layout. December 31st 2015 last date for submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X