ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ ಇಂಡಿಯಾ ಅಭಿಯಾನದ ಪರಿಣಾಮ: ಮಹಾದೇವಿಗೆ ಉದ್ಯೋಗ ಭಾಗ್ಯ

ಎರಡು ದಿನದ ಹಿಂದೆ ರಾಜ್ಯ ಸರ್ಕಾರ ಯೋಧನ ಕುಟುಂಬಕ್ಕೆ ಜಮೀನು ನೀಡಿದ ಬೆನ್ನಲ್ಲೇ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರ ಮಧ್ಯಸ್ಥಿಕೆಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಅವರಿಗೆ ಸರ್ಕಾರಿ ಉದ್ಯೋಗವನ್ನೂ ನೀಡಿ

By ಅನುಶಾ ರವಿ
|
Google Oneindia Kannada News

ಬೆಂಗಳೂರು ಮಾರ್ಚ್ 9. ಸಿಯಾಚಿನ್ ವೀರಯೋಧ ಹನುಮಂತಪ್ಪ ಕೊಪ್ಪದ್ ಕುಟುಂಬಕ್ಕೆ ಜಮೀನು ಮತ್ತು ಅವರ ಪತ್ನಿಗೆ ಉದ್ಯೋಗ ನೀಡುವ ಕುರಿತು ಸರ್ಕಾರನ್ನು ಎಚ್ಚರಿಸುವುದಕ್ಕಾಗಿ ಒನ್ ಇಂಡಿಯಾ ಕಳೆದ ಒಂದು ತಿಂಗಳಿನಿಂದ ನಡೆಸುತ್ತಿರುವ ಅಭಿಯಾನ ಕೊನೆಗೂ ಫಲನೀಡಿದೆ.

ಎರಡು ದಿನದ ಹಿಂದೆ ರಾಜ್ಯ ಸರ್ಕಾರ ಯೋಧನ ಕುಟುಂಬಕ್ಕೆ ಜಮೀನು ನೀಡಿದ ಬೆನ್ನಲ್ಲೇ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರ ಮಧ್ಯಸ್ಥಿಕೆಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಅವರಿಗೆ ಸರ್ಕಾರಿ ಉದ್ಯೋಗವನ್ನೂ ನೀಡಿದೆ.[ಕಡೆಗೂ ಹನುಮಂತಪ್ಪನ ಪತ್ನಿಗೆ ಜಮೀನು ಹಸ್ತಾಂತರ]

ಸಿಯಾಚಿನ್ ನಲ್ಲಿ ಹಿಮದಡಿಯಲ್ಲಿ ಸಿಲುಕಿಯೂ ಬದುಕಿದ್ದ ವೀರಯೋಧ ಹನುಮಂತಪ್ಪ ವಿವಿಧ ಅಂಗಾಂಗ ವೈಫಲ್ಯದಿಂದ 2016 ಫೆ.11ರಂದು ಹತರಾಗಿದ್ದರು. ಅವರ ಕುಟುಂಬಕ್ಕೆ ಜಮೀನು ಮತ್ತು ಉದ್ಯೋಗ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು.

ಆದರೆ ಹನುಮಂತಪ್ಪ ಹತರಾಗಿ ಒಂದು ವರ್ಷವಾದರೂ ಸರ್ಕಾರ ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿರಲಿಲ್ಲ.

ಈ ಕುರಿತು ಸರ್ಕಾರವನ್ನು ಎಚ್ಚರಿಸುವುದಕ್ಕಾಗಿ ಒನ್ ಇಂಡಿಯಾ ಅಭಿಯಾನ ಆರಂಭಿಸಿತ್ತು. ಇದೀಗ ಅದರ ಫಲಶೃತಿಯಾಗಿ ಹನುಮಂತಪ್ಪ ಕುಟುಂಬಕ್ಕೆ ಜಮೀನು ಮತ್ತು ಉದ್ಯೋಗ ಎರಡೂ ದೊರೆತಂತಾಗಿದೆ.[ಹನುಮಂತಪ್ಪನ ಕಂಚಿನ ಪ್ರತಿಮೆ ಸ್ಥಾಪನೆಗೆ ಸಿದ್ಧತೆ]

OneInda campaign impact: Mahadevi got government job

ನಮ್ಮ ಅಭಿಯಾನಕ್ಕೆ ಧನಾತ್ಮಕವಾಗಿ ಸ್ಪಂದಿಸಿದ ಸಂಸದ ರಾಜೀವ್ ಚಂದ್ರಶೇಖರ್, ಸ್ಮೃತಿ ಇರಾನಿ ಮತ್ತು ಮೇನಕಾ ಗಾಂಧಿ ಅವರಿಗೆ ಒನ್ ಇಂಡಿಯಾ ಕೃತಜ್ಞತೆ ಸಲ್ಲಿಸುತ್ತದೆ.

English summary
Siachin braveheart Hanumantappa Koppad's wife got a job. With the intervention of Union textile minister Smriti Irani, central silk board offered a job to Mahadevi. This is an impact of OneInda campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X