• search

ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 22: ನಮ್ಮ ಮೆಟ್ರೋ, ಬಿಎಂಟಿಸಿ, ಉಪನಗರ ರೈಲುಗಳಲ್ಲಿ ಒಂದೇ ಸ್ಮಾರ್ಟ್ ಕಾರ್ಡ್ ಬಳಸಿ ಸಂಚರಿಸಬಹುದು. ಹೌದು ಇಂತಹ ವಿನೂತನ ಯೋಜನೆ ಕಾರ್ಯರೂಪಕ್ಕೆ ನಗರಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ಬಿಎಂಟಿಸಿ, ಕೆಎಸ್ಆರ್ ಟಿಸಿ, ಬಿಎಂಆರ್ ಸಿಎಲ್ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಇಲಾಖೆ, ತಮ್ಮ ತಮ್ಮ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.ಪ್ರಸ್ತುತ ಎಲ್ಲ ಸಾರಿಗೆ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿಯೇ ಹಲವು ವಿಷಯಗಳಲ್ಲಿ ಸಮನ್ವಯ ಕೊರತೆ ಇದ್ದು, ಪ್ರಯಾಣಿಕರು ದಿನೇ ದಿನೇ ಖಾಸಗಿ ವಾಹನಗಳ ಬಳಕೆ ಮಾಡುವವರ ಸಂಖ್ಯೆ ಅಧಿಕವಾಗುತ್ತಿದೆ.

  ನಮ್ಮ ಮೆಟ್ರೋ: ಟಾಪ್ ಅಪ್ ಕಾರ್ಡ್ ಗರಿಷ್ಟ ಮಿತಿ ಹೆಚ್ಚಳ

  ಇದೀಗ ಮೆಜೆಸ್ಟಿಕ್‌ನಲ್ಲಿ ಮೆಟ್ರೋ, ಬಸ್ ಮತ್ತು ರೈಲು ನಿಲ್ದಾಣ ಸಂಪರ್ಕಿಸುವಂತೆ ಸಮರ್ಪಕ ಪಾದಚಾರಿ ಮಾರ್ಗ ಇತ್ತೀಚೆಗಷ್ಟೇ ಪ್ರಾರಂಭವಾಗಿದೆ. ಈ ಮೂಲಕ ಪ್ರಯಾಣಿಕರು ತಾವು ಬಯಸಿದ ನಿಲ್ದಾಣಕ್ಕೆ ನೇರವಾಗಿ ಹೋಗಬಹುದು. ಇದೇ ರೀತಿ ಮೆಟ್ರೋ ರೈಲು ಮತ್ತು ಬಸ್ ಸೇವೆ ಜತೆಯಾಗುವ ಯಶವಂತಪುರ, ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೆಂಗೇರಿ, ಪೀಣ್ಯ ಸೇರಿ ನಗರದ ಹಲವೆಡೆ ಸಾರಿಗೆ ಸೇವೆಗಳನ್ನು ಜೋಡಿಸಬೇಕಾಗಿದೆ.

  One smart card for Metro, BMTC suburban rail soon

  ಈ ಜವಾಬ್ದಾರಿಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ನಗರಾಭಿವೃದ್ಧಿ ಇಲಾಖೆ ನೀಡಿದೆ.

  ನಗದು ರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ ಸ್ಮಾರ್ಟ್ ಕಾರ್ಡ್!

  ಟಿಕೇಟ್ ಪಡೆಯಲು ಒಂದೇ ಸ್ಮಾರ್ಟ್ ಕಾರ್ಡ್ ತಯಾರಿ, ಬಸ್ ನಲ್ಲೇ ಮೆಟ್ರೋ ರೈಲು ಮಾಹಿತಿ, ಮೆಟ್ರೋದಲ್ಲಿ ಫೀಡರ್ ಸೇವೆ ಮಾಹಿತಿ ಹೀಗೆ ಮಾಹಿತಿ ಹಂಚಿಕೆ ಸೌಲಭ್ಯದ ಕುರಿತು ಶೀಘ್ರ ಸಭೆ ನಡೆಯಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Urban development department has written a letter to BMRCL, BMTC and Transport department of India to ensure one common smart cards for their commuters. All the authorities have planning for a MOU to implement the single smart card system for their daily commuters to ease the ticketing system.ನಮ್ಮ ಮೆಟ್ರೋ, ಬಿಎಂಟಿಸಿ, ಉಪನಗರ ರೈಲುಗಳಲ್ಲಿ ಒಂದೇ ಸ್ಮಾರ್ಟ್ ಕಾರ್ಡ್ ಬಳಸಿ ಸಂಚರಿಸಬಹುದು. ಹೌದು ಇಂತಹ ವಿನೂತನ ಯೋಜನೆ ಕಾರ್ಯರೂಪಕ್ಕೆ ನಗರಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more