ಬೆಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್: ಒಬ್ಬನ ಬಂಧನ, 1.16ಲಕ್ಷ ವಶ

Posted By:
Subscribe to Oneindia Kannada

ಬೆಂಗಳೂರು, ಜನವರಿ 19: ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಅಡ್ಡೆಯ ಮೇಲೆ ವಿಶೇಷ ವಿಚಾರಣ ವಿಭಾಗದ(ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದು ಒಬ್ಬನನ್ನು ಬಂಧಿಸಿ ರು. 1.16ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆರ್.ಟಿ. ನಗರದ ಪ್ರಭಾಕರ್ ಬಿನ್ ತಿರುಪತಯ್ಯ(28) ಬಂಧನಕ್ಕೊಳಗಾದವರು. ಹೆಬ್ಬಾಳ ಠಾಣಾ ಸರಹದ್ದಿನ ಆರ್ ಟಿನಗರದ ರತ್ಮಮ್ಮ ಲೇಔಟಿನ ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜು ನಡೆಯುತ್ತಿದ್ದು, ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿ ಪ್ರಭಾಕರ್ ಅನ್ನು ಬಂಧಿಸಿದ್ದಾರೆ.[ಕ್ರಿಕೆಟ್ ಬೆಟ್ಟಿಂಗ್ : ಹುಬ್ಬಳ್ಳಿಯಲ್ಲಿ 28 ಬಕ್ಕಿಗಳು ಬಲೆಗೆ]

One person arrested in cricket betting in R.T.Nagar, Bengaluru.

ಜೂಜಾಟ ಸಂಬಂಧ ಪ್ರಭಾಕರ್ ಬಳಿಯಿದ್ದ ರು. 1,16,450 ನಗದು, ಎರಡು ಮೊಬೈಲ್ ಫೋನ್ ಗಳು ಹಾಗೂ ಬೆಟ್ಟಿಂಗ್ ಗಾಗಿ ಅನೇಕ ವಿವರಗಳನ್ನು ಬರೆದಿರುವ ಪುಸ್ತಕವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಕೆಟ್ ಕ್ರೀಡೆಗೆ ವಿಶ್ವಾದ್ಯಂತ ಪ್ರಸಿದ್ಧಿ ಇರುವಂತೆಯೇ ಕ್ರೀಡೆ ಕುರಿತು ವಾಮಮಾರ್ಗದಲ್ಲಿ ಹಣಗಳಿಸುವ ದಂಧೆಯೂ ಹೆಮ್ಮರವಾಗಿ ಬೆಳೆದಿದೆ. ಆರಕ್ಷಕರು ಜಾಗೃತರಾಗಿ ದಂಧೆಯನ್ನು ನಿರ್ಣಾಮ ಮಾಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
One person arrested in cricket betting in R.T.Nagar, Bengaluru. Rs. 1.6 lack and 2 mobile phones has been seized.
Please Wait while comments are loading...