ವೈಕುಂಠ ಏಕಾದಶಿಗೆ 1 ಲಕ್ಷ ಲಾಡು ವಿತರಿಸಲಿರುವ ಜೆಡಿಎಸ್ ನ ಟಿಎ ಶರವಣ

Posted By:
Subscribe to Oneindia Kannada
   ವೈಕುಂಠ ಏಕಾದಶಿ ಪ್ರಯುಕ್ತ ಜೆಡಿಎಸ್ ಎಂ ಎಲ್ ಸಿ ಶರವಣರಿಂದ 1 ಲಕ್ಷ ಲಡ್ಡು ಹಂಚಿಕೆ | Oneindia Kannada

   ಬೆಂಗಳೂರು, ಡಿಸೆಂಬರ್ 28 : ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕ ಹಾಗೂ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಪ್ರತಿ ವರ್ಷದಂತೆ ಈ ಬಾರಿಯೂ ವೈಕುಂಠ ಏಕಾದಶಿಯಂದು ಲಾಡು ವಿತರಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿರುವ ವಿವಿಧ ವೆಂಕಟೇಶ್ವರ ದೇವಾಲಯದಲ್ಲಿ ವಿತರಣೆ ಮಾಡುವ ಸಲುವಾಗಿಯೇ ಒಂದು ಲಕ್ಷ ಲಾಡು ತಯಾರು ಮಾಡಿಸಿದ್ದಾರೆ.

   ವಿಶೇಷ: ವೈಕುಂಠ ಏಕಾದಶಿ ಆಚರಣೆ, ಉಪವಾಸದ ಮಹತ್ವ!

   ವೆಂಕಟೇಶ್ವರನ ಮೇಲೆ ಅಪಾರ ಭಕ್ತಿ ಇರುವುದನ್ನು ಸಾರ್ವಜನಿಕವಾಗಿಯೇ ಹಲವು ಬಾರಿ ಹೇಳಿಕೊಂಡಿರುವ ಅವರು, ವೈಕುಂಠ ಏಕಾದಶಿ (ಈ ಸಲ ಡಿಸೆಂಬರ್ ಇಪ್ಪತ್ತೊಂಬತ್ತರಂದು, ಶುಕ್ರವಾರ ವೈಕುಂಠ ಏಕಾದಶಿ)ಯಂದು ವೆಂಕಟೇಶ್ವರನ ಆರಾಧನೆಗೆ ವಿಶೇಷ ಮಹತ್ವ ಇದೆ. ಇಂಥ ಸಮಯದಲ್ಲಿ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಲು ಶರವಣ ಕಂಡುಕೊಂಡಿರುವ ಮಾರ್ಗ ಇದು.

   ಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರು

   One lakh laddu will distributed by TA Saravana on Vaikunata Ekadashi

   ಈಚೆಗೆ ಬಸವನಗುಡಿಯಲ್ಲಿನ ತಮ್ಮ ಸಾಯಿ ಗೋಲ್ಡ್ ಪ್ಯಾಲೇಸ್ ಮಳಿಗೆ ಮೇಲಿರುವ ಸ್ಥಳದಲ್ಲಿ ಲಾಡು ತಯಾರಿ ಹಾಗೂ ವಿತರಣೆ ಕಾರ್ಯಕ್ಕೂ ಶರವಣ ಚಾಲನೆ ನೀಡಿದ್ದರು. ಅಂದಹಾಗೆ ಏಕಾದಶಿಯ ಮಹತ್ವ ಏನು, ಅದರಲ್ಲೂ ವೈಕುಂಠ ಏಕಾದಶಿಯ ಮಹತ್ವ ಏನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಒನ್ಇಂಡಿಯಾ ಕನ್ನಡದ ವಿಡಿಯೋ ನೋಡಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   JDS MLC and Sai gold palace owner TA Saravana will distribute one lakh laddu on the occasion of Vaikunata Ekadashi, on December 29th, Friday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ