ಬಡ ಜನರಿಗೆ 'ವಸತಿ ಭಾಗ್ಯ' ಘೋಷಿಸಿದ ಸಿಎಂ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26: ಮುಖ್ಯಮಂತ್ರಿ ಸಿದ್ದರಾಮಯ್ಯ ಬಡ ಜನರಿಗೆ 'ವಸತಿ ಭಾಗ್ಯ' ಘೋಷಿಸಿದ್ದಾರೆ. ವಸತಿ ಯೋಜನೆ ಅನುಷ್ಠಾನ ಕುರಿತು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ನಂತರ ಸುದ್ದಿಗೋಷ್ಠಿ ನಡೆಸಿದರು. ಅತಿಕ್ರಮಣ ತೆರವು ಪ್ರದೇಶಗಳಲ್ಲಿ 1 ಲಕ್ಷಕ್ಕೂ ಅಧಿಕ ಮನೆ ನಿರ್ಮಿಸಿ ಬಡ ಜನರಿಗೆ ನೀಡುವುದಾಗಿ ಹೇಳಿದರು.

ವಾಸ್ತುಶಾಸ್ತ್ರದ ಪ್ರಕಾರ ಮುಂಬಾಗಿಲು, ಕಿಟಕಿ ಹೇಗಿರಬೇಕು?

ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು, ಐದು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಬಡವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಮನೆ ಪಡೆಯಬಹುದಾಗಿದೆ ಎಂದು ಸಿಎಂ ಹೇಳಿದರು.

One lakh houses for weaker sections in Bengaluru : Siddaramaiah

ಮನೆ ಹೊಂದಲು ಪರಿಶಿಷ್ಟ ಜಾತಿ ಹಾಗೂ ಪಂಗಡದವರು 50 ಸಾವಿರ ನೀಡಬೇಕು. ಹಾಗೆ ಉಳಿದವರು 1 ಲಕ್ಷ ರೂಪಾಯಿ ನೀಡಿ ಮನೆ ಪಡೆಯಬಹುದಾಗಿದೆ. ಸುಮಾರು ಐದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗಲಿದೆ, ಮನೆ ಹಂಚಿಕೆ ವಿಷಯದಲ್ಲಿ ಕನ್ನಡಿಗರಿಗೆ ಆದ್ಯತೆ ಇರುತ್ತದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The state cabinet Thursday(Oct26) approved a proposal for building one lakh houses for the weaker sections in the city on government lands, which were cleared of encroachments in recent years.
Please Wait while comments are loading...